Advertisement

ಕೊಡಗು;ಕೊಚ್ಚಿ ಹೋದ ಬದುಕು,ಮತ್ತೊಂದೆಡೆ ನೆರೆ ಪ್ರದೇಶದಲ್ಲಿ ಕಳ್ಳರ ಕಾಟ

04:31 PM Aug 20, 2018 | Team Udayavani |

ಕೊಡಗು/ಮಡಿಕೇರಿ: ಕಂಡು ಕೇಳರಿಯದ ರೀತಿಯಲ್ಲಿ ಕೊಡಗು ಮಹಾಮಳೆಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ನೆರೆ ಪೀಡಿತ ಪ್ರದೇಶಗಳಲ್ಲಿ ಕಳ್ಳರ ಹಾವಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ. ಮಡಿಕೇರಿಯ ಜೋಡುಪಾಲದ ಸುತ್ತಮುತ್ತಲಿನಲ್ಲಿ ಸುಮಾರು 30 ಮನೆಗಳಿಗೆ ಕನ್ನ ಹಾಕಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ನೆರೆ ಪೀಡಿತ ಪ್ರದೇಶಗಳಲ್ಲಿ ಗುಂಪು, ಗುಂಪಾಗಿ ಬರುವ ತಂಡ ಮನೆಯ ಹೆಂಚುಗಳನ್ನು ಇಳಿಸಿ ಚಿನ್ನಾಭರಣ, ಹಣ, ವಾಹನಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಮಳೆಯ ಅಬ್ಬರದಿಂದ ಜೀವ ಉಳಿಸಿಕೊಳ್ಳಲು ಜನರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನೇ ಬಳಸಿಕೊಂಡ ಖದೀಮರು ಊರಿನೊಳಗೆ ಹೋಗಿ ಕಳ್ಳತನಕ್ಕೆ ಇಳಿದಿದ್ದಾರೆ.

ಈ ಬಗ್ಗೆ ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಇದೀಗ ದಕ್ಷಿಣ ಕನ್ನಡ, ಕೊಡಗು ಗಡಿಯಲ್ಲಿ ಸಂಪಾಜೆ ಬಳಿ ಚೆಕ್ ಪೋಸ್ಟ್ ಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲು ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next