Advertisement

ಕೊಡಗು ಜಿಲ್ಲೆ ಭಾರೀ ಗಾಳಿ ಮಳೆ ಭಾಗಮಂಡಲ ನೀರಿನ ಹರಿವು ಹೆಚ್ಚಳ

03:25 AM Jul 19, 2017 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರದಿಂದ ಭಾರೀ ಗಾಳಿ – ಮಳೆಯಾಗುತ್ತಿದ್ದು, ಜೀವನದಿ ಕಾವೇರಿಯ ಒಡಲು ಮತ್ತೆ ತುಂಬಲಾರಂಭಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ರಸ್ತೆ ಜಲಾವೃತಗೊಳ್ಳುವ ಸಾಧ್ಯತೆಗಳಿವೆ.

Advertisement

ಭಾಗಮಂಡಲ ಮತ್ತು ತಲಕಾವೇರಿ ಪರಿಸರದಲ್ಲಿ ಸುರಿಯುತ್ತಿರುವ ಧಾರಾ ಕಾರ ಮಳೆಯಿಂದಾಗಿ ತ್ರಿವೇಣಿ ಸಂಗಮದ ಸ್ನಾನಘಟ್ಟದ ಮೆಟ್ಟಿಲು ಗಳು ಜಲಾವೃತವಾಗಿವೆ; ನದಿ ದಂಡೆಯ ವಸ್ತ್ರ ಬದಲಿಸುವ ಕಟ್ಟಡದ ಸುತ್ತ ಪ್ರವಾಹದ ನೀರು ಆವರಿಸಿ ಕೊಂಡಿದೆ. ಕಳೆದ 24 ಗಂಟೆಗಳ ಅವಧಿ ಯಲ್ಲಿ ಕ್ಷೇತ್ರದ ಪರಿಸರದಲ್ಲಿ 3ರಿಂದ 4 ಇಂಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮಳೆಯ ಬಿರುಸು ಇದೇ ರೀತಿ ಮುಂದುವರಿದಲ್ಲಿ ಭಾಗಮಂಡಲದ ಮಡಿಕೇರಿ ಮತ್ತು ಅಯ್ಯಂಗೇರಿ ರಸ್ತೆ ಗಳು ಜಲಾವೃತಗೊಳ್ಳುವ ಸಾಧ್ಯತೆ ಗಳಿವೆ. ಸೋಮವಾರ ಸಂಜೆ ಯಿಂದ ಆರಂಭ ಗೊಂಡಿ ರುವ ಮಳೆ ಮಂಗಳ ವಾರವೂ ಮುಂದುವರಿದಿದ್ದು, ಭಾಗ ಮಂಡಲ ಸುತ್ತಮುತ್ತಲ ಶಾಲೆಗಳಿಗೆ ಮಂಗಳವಾರ ಮಧ್ಯಾಹ್ನದ ಬಳಿಕ ರಜೆ ಘೋಷಿಸಲಾಯಿತು.

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಡಿಕೆೇರಿಯಲ್ಲಿ ಕುಳಿರ್ಗಾಳಿಯೊಂದಿಗೆ ಬಿರುಮಳೆ ಯಾಗುತ್ತಿದ್ದು, ಕಿರುತೊರೆಗಳು ಉಕ್ಕಿ ಹರಿಯುತ್ತಿವೆ. ಜನರ ನಿತ್ಯದ ವಹಿವಾಟು ಮತ್ತು ಸಂಚಾರಕ್ಕೆ ತೊಡಕುಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next