Advertisement
ಪರಿಹಾರಧನ ವಿತರಣೆದೇವರಕೊಲ್ಲಿ, ಸಂಪಾಜೆ, ಅರೆಕಳ್ ಭಾಗದ ಸಹಜ ಸ್ಥಿತಿಗೆ ಬಂದಿ ರುವ ಕಾರಣ ಭೂ ವಿಜ್ಞಾನಿಗಳ ಅಭಿಪ್ರಾಯ ಆಧರಿಸಿ ಅರಂತೋಡು, ಸಂಪಾಜೆ, ಕಲ್ಲುಗುಂಡಿ ಕೇಂದ್ರಗಳಲ್ಲಿದ್ದ ಆ ಭಾಗದವರನ್ನು ಮನೆಗೆ ಕಳುಹಿಸಲು ಬುಧವಾರ ಸಂಜೆ ನಿರ್ಧರಿಸಲಾಗಿತ್ತು. ಪ್ರತಿ ಕುಟುಂಬಕ್ಕೆ 3,800 ರೂ. ನಗದು, 25 ಕೆ.ಜಿ. ಅಕ್ಕಿ, ಇತರ ಸಾಮಗ್ರಿ ನೀಡಲಾಗಿದೆ. ಅವರನ್ನು ವಾಹನ ಗಳ ಮೂಲಕ ಕಳುಹಿಸಿಕೊಡಲಾಗಿದೆ. ಸಂಜೆ ವೇಳೆ ಬಹುತೇಕರು ಮನೆ ಸೇರಿದ್ದಾರೆ.
ಬುಧವಾರ 6 ಕುಟುಂಬ ತೆರಳಿದ್ದವು. ಗುರು ವಾರ 60 ಕುಟುಂಬ ತೆರಳಿವೆ. 150ಕ್ಕೂ ಹೆಚ್ಚು ಕುಟುಂಬ ಕೇಂದ್ರದಲ್ಲಿ ಉಳಿದಿವೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಗುರುವಾರ ಬೆಳಗ್ಗೆ ಸಹಾಯಕ ಆಯುಕ್ತರು ಭೇಟಿ ನೀಡಿ ಅಹವಾಲು ಆಲಿಸಿದರು.
ಆಧಾರ್ ಕಾರ್ಡ್ ಕಳೆದುಕೊಂಡ ಸಂತ್ರಸ್ತರಿಗೆ ದ.ಕ. ಜಿಲ್ಲಾಡಳಿತ ಆಧಾರ್ ವ್ಯವಸ್ಥೆ ಮಾಡಿದ್ದು, ಗುರುವಾರ ವಿತರಿಸಿದೆ. ಜೋಡುಪಾಲದಲ್ಲಿ ದುರಸ್ತಿ ಪೂರ್ಣವಾಗಿದೆ. ಜೆಸಿಬಿಗಳು ಮೊಣ್ಣಂಗೇರಿ ಬಳಿ ರಸ್ತೆಗೆ ಬಿದ್ದಿರುವ ಮಣ್ಣು ತೆರವಿನಲ್ಲಿ ತೊಡಗಿವೆ. ಗುರುವಾರ ಸಂಜೆ ತನಕ ಅಲ್ಲಿ ರಸ್ತೆ ಕುರುಹು ಪತ್ತೆ ಆಗಿಲ್ಲ. ಗುಡ್ಡದ ಒಂದು ಭಾಗವೇ ರಸ್ತೆ ಮೇಲೆ ಬಿದ್ದಿರುವ ಕಾರಣ ಸ್ಥಳದ ಅಂದಾಜಿನಲ್ಲಿ ಮಣ್ಣು ತೆರವು ಮಾಡಲಾಗುತ್ತಿದೆ. ಸುಳ್ಯ-ಕರಿಕೆ-ಮಡಿಕೇರಿ ಬಸ್ ಓಡಾಟ ವೇಳಾಪಟ್ಟಿ
ಸುಳ್ಯ- ಆಲೆಟ್ಟಿ- ಕರಿಕೆ- ಭಾಗಮಂಡಲ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋದಿಂದ ಏಳು ಶೆಡ್ನೂಲ್ ಕಲ್ಪಿಸಲಾಗಿದೆ. ಮಡಿಕೇರಿಯಿಂದ ಬೆ. 7.15, 8.00, 9.00, 11.15, ಮಧ್ಯಾಹ್ನ 12.00, 4, 4.30 ಹಾಗೂ ಸುಳ್ಯದಿಂದ ಬೆ. 7.00, 7.45, 11.45, ಮಧ್ಯಾಹ್ನ 12.15, 1.15, 3.30, 4.30 ಕ್ಕೆ ಬಸ್ ಓಡಾಟ ನಡೆಸಲಿದೆ, ಪ್ರಯಾಣದರ 90 ರೂ.