Advertisement
ಕೊಡಚಾದ್ರಿ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 20 ಕೋಟಿ ರೂ. ಅನುದಾನ ನೀಡಿದ್ದರು. ಆದರೆ ಕಾನೂನು ತೊಡಕಿನಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಶುಕ್ರವಾರ ದಿಲ್ಲಿಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ರಸ್ತೆ ನಿರ್ಮಾಣಕ್ಕೆ ಪರಿಸರ ಇಲಾಖೆಯ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಪುರಸ್ಕರಿಸಿದ ಸಚಿವರು ಸಭೆಯಲ್ಲಿ ಅನುಮೋದನೆ ನೀಡಿದ್ದಾರೆ ಎಂದು ಬಿ.ವೈ. ರಾಘವೇಂದ್ರ ಶಿಕಾರಿಪುರದಲ್ಲಿ ತಿಳಿಸಿದರು.
ಕೊಲ್ಲೂರು – ಕೊಡಚಾದ್ರಿ ನಡುವೆ ರಸ್ತೆಯ ಮೂಲಕವಾದರೆ ಸುಮಾರು 40 ಕಿ.ಮೀ. ದೂರವಿದೆ. ಇದನ್ನು ಕ್ರಮಿಸಲು ಅಂದಾಜು ಒಂದೂವರೆ ತಾಸು ಬೇಕು. ಈಗಿರುವ ರಸ್ತೆಯೂ ದುರ್ಗಮವಾಗಿದ್ದು, ಜೀಪ್ ಪ್ರಯಾಣ ಸೌಲಭ್ಯ ಮಾತ್ರ ಇದೆ. ಕೇಬಲ್ ಕಾರ್ ಯೋಜನೆ ಜಾರಿಗೊಂಡರೆ ನೇರ ಅಂತರ 8 ಕಿ.ಮೀ.ಗೆ ಇಳಿಯಲಿದ್ದು, ಕೇವಲ 15 ನಿಮಿಷಗಳಲ್ಲಿ ಕ್ರಮಿಸಲು ಸಾಧ್ಯ. ಸಂಸದ ರಾಘವೇಂದ್ರ ಅವರು ಈ ಯೋಜನೆ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಯೋಜನೆ ಜಾರಿಯಿಂದ ಅನೇಕ ಮಂದಿಗೆ ಉದ್ಯೋಗಾವಕಾಶ, ಪ್ರವಾ ಸೋದ್ಯಮ ಅಭಿವೃದ್ಧಿ ಆಗಲಿದೆ. ಯೋಜನೆ ಜಾರಿಯ ಸಂದರ್ಭ ಪರಿಸರಕ್ಕೆ ಹಾನಿ ಆಗ ದಂತೆ ನೋಡಿಕೊಳ್ಳಲು ಅತ್ಯಾಧುನಿಕ ಮಾರ್ಗೋ ಪಾಯ ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಗೆ ಬಂಡವಾಳ ಹೂಡಲು ಈಗಾಗಲೇ ಹಲವು ಕಂಪೆನಿಗಳು ಮುಂದೆ ಬಂದಿವೆ.
Related Articles
ಕೊಡಚಾದ್ರಿ ಬೆಟ್ಟಕ್ಕೆ ಕೇಬಲ್ ಕಾರ್ ಅನುಷ್ಠಾನಗೊಂಡರೆ ಕರಾವಳಿ ಪ್ರದೇಶದ ಮೊದಲ ಕೇಬರ್ ಕಾರ್ ಯೋಜನೆ ಎಂಬ ಹೆಗ್ಗಳಿಕೆ ಗಳಿಸಲಿದೆ. ಇದರಿಂದ ಬೈಂದೂರು, ಕುಂದಾಪುರ ತಾಲೂಕುಗಳಲ್ಲಿ ಆರ್ಥಿಕ ಮತ್ತು ಸಾಮಾ ಜಿಕ ಪ್ರಗತಿಯೂ ಉಂಟಾಗ ಲಿದೆ. ಕೊಲ್ಲೂರು ದೇಗುಲಕ್ಕೆ ಪ್ರತಿದಿನ ಸಾವಿರಾರು ಯಾತ್ರಾರ್ಥಿಗಳು ಆಗಮಿಸುತ್ತಾರೆ. ಇವರಲ್ಲಿ ಅನೇಕರು ಕೊಡಚಾದ್ರಿ ಸರ್ವಜ್ಞ ಪೀಠಕ್ಕೆ ತೆರಳುತ್ತಾರೆ. ಕೇಬಲ್ ಕಾರ್ ಯೋಜನೆ ಅನುಷ್ಠಾನವಾದರೆ ಕೊಲ್ಲೂರಿನಿಂದ ಕೊಡಚಾದ್ರಿಗೆ ತೆರಳುವುದು ಸುಲಭವಾಗಲಿದೆ.
Advertisement
ಉದಯವಾಣಿಯಲ್ಲಿ ವರದಿಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್‌ವೇ-ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿರುವ ಬಗ್ಗೆ ಉದಯವಾಣಿಯು 2020ರ ಜೂನ್ 24ರಂದು ವಿಶೇಷ ವರದಿ ಪ್ರಕಟಿಸಿತ್ತು.