Advertisement

ಕೊಚ್ಚಿಗೆ ಸಿಗಲಿದೆ “ಸೀನಿಯರ್‌ ಟ್ಯಾಕ್ಸಿ’

12:11 PM Jun 18, 2018 | Harsha Rao |

ಕೊಚ್ಚಿ: ಕೇರಳ ಸರಕಾರದ ಸಾಮಾಜಿಕ ನ್ಯಾಯ ಸಚಿವಾಲಯ ಮಹಿಳೆಯರಿಗಾಗಿಯೇ “ಶಿ ಟ್ಯಾಕ್ಸಿ’ ಯೋಜನೆ ಆರಂಭಿಸಿದೆ. ಅದಕ್ಕೆ ತುಂಬ ಸ್ಪಂದನೆಯೂ ವ್ಯಕ್ತವಾಗಿದೆ. ಕೊಚ್ಚಿಯಲ್ಲಿರುವ “ಮ್ಯಾಜಿಕ್ಸ್‌’ ಎಂಬ ಎನ್‌ಜಿಒ  ಹಿರಿಯ ನಾಗರಿಕರ ಸುಲಭ ಸಂಚಾರಕ್ಕಾಗಿ “ಸೀನಿಯರ್‌ ಟ್ಯಾಕ್ಸಿ’ ಎಂಬ ಸೇವೆ ಶುರು ಮಾಡಲಿದೆ. ಎರ್ನಾಕುಳಂನಲ್ಲಿರುವ ಮರಾಡು ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ ಹಲವು ಸಂದರ್ಭಗಳಲ್ಲಿ ಹಿರಿಯ ನಾಗರಿಕರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುವುದರಿಂದ ಇಂಥ ಯೋಜನೆ ಜಾರಿಗೆ ತರಲು ನಿರ್ಧರಿಸಲಾಯಿತು ಎಂದು ಎನ್‌ಜಿಒದ ಬೋನಿಫೇಸ್‌ ಗಾಸ್ಪರ್‌ ಹೇಳಿದ್ದಾರೆ. 

Advertisement

ಹೀಗಾಗಿ ಸ್ಥಳೀಯವಾಗಿ ಲಭ್ಯವಿರುವ ಟ್ಯಾಕ್ಸಿಗಳನ್ನು ಬಳಕೆ ಮಾಡಿಕೊಂಡು ಹಿರಿಯ ನಾಗರಿಕರಿಗೆ ತೊಂದರೆಯಿಲ್ಲದೆ ನಗರದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ಆರು ಮಂದಿ ಸದಸ್ಯರು ಅದರಲ್ಲಿ ಸೇರ್ಪಡೆಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸಲಾಗುವುದು ಎಂದಿದ್ದಾರೆ ಗಾಸ್ಪರ್‌

Advertisement

Udayavani is now on Telegram. Click here to join our channel and stay updated with the latest news.

Next