Advertisement
ಸೈನಾ ನೆಹ್ವಾಲ್ ಅವರ ಮಾಜಿ ಬ್ಯಾಡ್ಮಿಂಟನ್ ಕೋಚ್ ವಿಮಲ್ ಕುಮಾರ್ ಸೇರಿದಂತೆ ನಾಲ್ವರು ಮಾಜಿ ಕ್ರೀಡಾಪಟುಗಳಿಗೆ ಜೀವಮಾನಶ್ರೇಷ್ಠ ಗೌರವ ನೀಡಲಾಗುತ್ತಿದೆ. ಕೆಒಎ ಪ್ರಶಸ್ತಿ ವಿಜೇತರು 1 ಲಕ್ಷ ರೂ. ನಗದು, ಸ್ಮರಣಿಕೆ ಪಡೆಯಲಿದ್ದಾರೆ. ಜೀವಮಾನಶ್ರೇಷ್ಠ ಪ್ರಶಸ್ತಿ ವಿಜೇತರು 25 ಸಾವಿರ ರೂ. ನಗದು, ಸ್ಮರಣಿಕೆ ಪಡೆಯಲಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನಿಕ್ಕಿನ್ ತಿಮ್ಮಯ್ಯ (ಹಾಕಿ), ಕೆ.ಅಶ್ವಿನಿ ಭಟ್ (ಬ್ಯಾಡ್ಮಿಂಟನ್), ಲೋಪಮುದ್ರ (ಬಾಸ್ಕೆಟ್‌ಬಾಲ್), ರಾಜು ಎ ಬಟ್ಟಿ (ಸೈಕ್ಲಿಂಗ್), ಬಿ.ನೈದೆಲೆ (ಫೆನ್ಸಿಂಗ್), ಎಂ.ಸುನಿಲ್ ಕುಮಾರ್ (ಫುಟ್‌ಬಾಲ್), ಮನು (ಖೋ ಖೋ), ಬಿ.ಆರ್.ನಿತೀಶ್ (ಕಬಡ್ಡಿ), ಬಿ.ಆರ್.ನಿಕ್ಷೇಪ್ (ಲಾನ್ ಟೆನಿಸ್), ಎಲ್.ಜಿ.ನಂದಿನಿ (ನೆಟ್‌ಬಾಲ್), ಸಿ.ಪಿ.ಜ್ಯೋತಿ (ರೋವಿಂಗ್), ಎಸ್.ಶಿವ (ಈಜು), ಟಿ.ಆರ್.ಶ್ರೀಜಯ್ (ಶೂಟಿಂಗ್), ಯಶಸ್ವಿನಿ ಡಿ.ಘೋರ್ಪಡೆ (ಟೇಬಲ್ ಟೆನಿಸ್), ಅಕ್ಷತಾ ಬಿ.ಕಮಟಿ (ವೇಟ್‌ಲಿಫ್ಟಿಂಗ್), ಕೆ.ರವಿ (ಮಾಧ್ಯಮ) ಜೀವಮಾನಶ್ರೇಷ್ಠ ಪುರಸ್ಕೃತರು
ಯು.ವಿಮಲ್ ಕುಮಾರ್ (ಬ್ಯಾಡ್ಮಿಂಟನ್), ಚೆಂಡಂಡ ಅಚ್ಚಯ್ಯ ಕುಟ್ಟಪ್ಪ (ಬಾಕ್ಸಿಂಗ್), ನೋಯಲ್ ಆ್ಯಂಟನಿ ವಿಲ್ಸನ್ (ಫುಟ್‌ಬಾಲ್), ಎಂ.ವಿನೋದ್ ಚಿನ್ನಪ್ಪ (ಹಾಕಿ).
Related Articles
ಪ್ರತಿ ವರ್ಷವೂ ಕೆಒಎ ಪ್ರಶಸ್ತಿ ಸಮಾರಂಭಕ್ಕೆ ರಾಜ್ಯಪಾಲರು ಆಗಮಿಸುತ್ತಿದ್ದರು. ಈ ಸಲ ಅವರ ಅನುಪಸ್ಥಿತಿಯಲ್ಲಿ ಬುಧವಾರ ಕರ್ನಾಟಕ ಒಲಿಂಪಿಕ್ಸ್ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಪಾಲರು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎನ್ನಲಾಗಿದೆ.
Advertisement