Advertisement
ನ್ಯಾಯಾಲಯ ಆವರಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ, ಪೊಲೀಸ್ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಎಲ್ಲರಿಗೂ ಕಾನೂನಿನ ಅರಿವು ಅತ್ಯಗತ್ಯ. ಜನಸಾಮಾನ್ಯರಿಗೆ ತಮ್ಮ ಕೆಲಸ ಯಾವ ಕಚೇರಿಯಲ್ಲಿ, ಯಾವ ಅಧಿಕಾರಿಗಳ ಬಳಿ ಕೆಲಸ ಮಾಡಿಸಿಕೊಳ್ಳ ಬೇಕು ಎಂಬ ಅರಿವು ಇಲ್ಲ. ಅದಕ್ಕಾಗಿ ನಮ್ಮ ಜೀವನಕ್ಕೆ ಅಗತ್ಯವಾದ ಕಾನೂನು ತಿಳಿದು ಕೊಳ್ಳಬೇಕಿದೆ. ದೇಶದಲ್ಲಿ ಸುಮಾರು 79 ಸಾವಿರ ಪ್ರಕರಣ ಹಾಗೂ ಜಿಲ್ಲೆಯಲ್ಲಿ 1700 ಪ್ರಕರಣ ಕಳೆದ ವಾರ ಇತ್ಯರ್ಥ ಮಾಡಲಾಗಿದೆ. ನ್ಯಾಯಾ ಲಯದ ಹಂತಕ್ಕೆ ಬರುವವರೆಗೆ ಪ್ರಕರಣ ಬಿಡಬೇಡಿ. ಸಾಧ್ಯವಾದಷ್ಟು ರಾಜಿ ಸಂಧಾನಗಳ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
Related Articles
Advertisement
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಟಿ.ಸತೀಶ್, ಅಧಿಕ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್, ವಕೀಲರ ಸಂಘದ ಕಾರ್ಯ ದರ್ಶಿ ನಟರಾಜು, ಕಾರ್ಯನಿರ್ವಹಣಾ ಧಿಕಾರಿ ಸುನೀಲ್ಕುಮಾರ್, ಸಿಡಿಪಿಒ ಓಂಕಾರಪ್ಪ, ಬಿಇಒ ಮಂಗಳಗೌರಮ್ಮ, ಡಿವೈಎಸ್‌ಪಿ ಕಲ್ಯಾಣ್ ಕುಮಾರ್, ಆರಕ್ಷಕ ನಿರೀಕ್ಷಕ ನವೀನ್‌ಕುಮಾರ್, ವೃತ್ತ ನಿರೀಕ್ಷಕ ಕೃಷ್ಣರಾಜು, ವಕೀಲೆ ಶೋಭಾದೇವಿ, ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕಿ ಪಿ.ರೇಖಾ ಮತ್ತಿತರರಿದ್ದರು.