Advertisement
ಇಲ್ಲಿನ ಸಪ್ನ ಬುಕ್‌ಹೌಸ್ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಗಲ್ಲಿ ಗಲ್ಲಿಯೂ ನನಗೆ ಪರಿಚಯವಿದೆ. ಈಗಲೂ ಇಲ್ಲಿ ನಡೆದು ಹೋಗಬೇಕು ಎಂಬ ಆಸೆ ಮೂಡುತ್ತದೆ. 1959ರಲ್ಲಿ ನೋಡಿದ ಮೊದಲ ಹಿಂದಿ ಚಿತ್ರದಿಂದ ಹಿಡಿದು ಅಮಿತಾ ಬಚ್ಚನ್ ಅವರ ಮೊದಲ ಚಿತ್ರ ಮುಂಬೈ ಟು ಗೋವಾ, ಕನ್ನಡದ ದಶಾವತಾರ ಸೇರಿದಂತೆ ಅನೇಕ ಸಿನಿಮಾಗಳನ್ನು ನೆನಪಿಸಿದರು. ಗೌಡರ ಗದ್ಲ ನಾಟಕ ವೀಕ್ಷಿಸಿದ್ದನ್ನು ಸ್ಮರಿಸಿದರು. ಬಿವಿಬಿ ಕಾಲೇಜು ತಮಗೆ ನೀಡಿದ ಜ್ಞಾನಕ್ಕೆ ಚಿರಋಣಿ ಎಂದರು.
Related Articles
Advertisement
ಪಕ್ಕದ ಮನೆಯ ಮಕ್ಕಳ ಅಂಕಗಳಿಗೆ ಹೋಲಿಸಿ ಮಕ್ಕಳನ್ನು ಮೂದಲಿಸುವುದನ್ನು ಬಿಡಬೇಕು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮಕ್ಕಳು ಕಲಿಯುತ್ತಾರೆ. ಅಧಿಕ ಅಂಕ-ರ್‍ಯಾಂಕ್ ಮಾತ್ರ ಜೀವನವಲ್ಲ. ಸಂಸ್ಕಾರಯುತ ನಡತೆ, ಉತ್ತಮ ಬದುಕಿನ ನಡೆ ನಿಜವಾದ ರ್‍ಯಾಂಕ್. ಏಕಾಗ್ರತೆ, ಪ್ರೀತಿ, ಪುಸ್ತಕ, ಉತ್ತಮ ಶಿಕ್ಷಕ, ಒಳ್ಳೆಯ ಸ್ನೇಹಿತರು ಮಕ್ಕಳ ಉತ್ತಮ ಬದುಕಿಗೆ ಅಡಿಪಾಯವಾಗುತ್ತವೆ. ಬಟ್ಟೆ ಕಡಿಮೆ ಇದ್ದರೂ ಪರವಾಗಿಲ್ಲ ಪುಸ್ತಕಗಳು ಹೆಚ್ಚಿರಲಿ ಎಂದು ಕಿವಿಮಾತು ಹೇಳಿದರು.
ತಮ್ಮ ಕೃತಿಗಳನ್ನು ಖರೀದಿಸಿದವರಿಗೆ ಸುಧಾಮೂರ್ತಿಯವರು ಹಸ್ತಾಕ್ಷರ ಹಾಕಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಪ್ನ ಬುಕ್‌ಹೌಸ್ ವ್ಯವಸ್ಥಾಪಕ ರಘು ಇದ್ದರು. ಮೇಘನಾ ರಘು ನಿರೂಪಿಸಿದರು.
ಉದಯೋನ್ಮುಖ ಲೇಖಕರಿಗೆ ಸಲಹೆ: ತರಾತುರಿಗೆ ಬಿದ್ದು ಕೃತಿ ಪ್ರಕಟಕ್ಕೆ, ಸ್ಪರ್ಧೆಗೆ ಕಳುಹಿಸಲು ಮುಂದಾಗಬೇಡಿ. ಬರೆದಿದ್ದನ್ನು ಪ್ರಕಟಿಸದೆ ಆರು ತಿಂಗಳ ನಂತರ ಮತ್ತೆ ಓದಿ ಅದರಲ್ಲಿನ ಲೋಪ, ಕೊರತೆ, ಬದಲಾವಣೆಗೆ ಮುಂದಾಗಿ. ನಾನು ಸುಮಾರು 40 ಕೃತಿಗಳನ್ನು ರಚಿಸಿದ್ದೇನೆ. ನನ್ನ ಬಹುತೇಕ ಕೃತಿಗಳನ್ನು ಪ್ರಕಟಿಸುವ ಮುನ್ನ ಓದಿ ಅಭಿಪ್ರಾಯ ತಿಳಿಸಿದವರು ಮಕ್ಕಳು. ಪುಸ್ತಕ ಸ್ಪರ್ಧೆಯಿಂದ ತಿರಸ್ಕಾರವಾದರೆ ಅದನ್ನು ಸಹಿಸಿಕೊಳ್ಳುವ, ಬರವಣಿಗೆ ಮುಂದುವರಿಸುವ ಮನೋಭಾವ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಪುಸ್ತಕ ಓದಿನ ಅಭಿರುಚಿ ಇಲ್ಲ ಎಂಬುದಕ್ಕೆ ಪಾಲಕರ ಪಾತ್ರವೂ ಇದೆ. ಪಾಲಕರು ಗಂಟೆಗಟ್ಟಲೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ, ಮಕ್ಕಳ ಬಳಿ ಪುಸ್ತಕ ಓದು ಎಂದರೆ ಹೇಗೆ, ನೀವು ಪುಸ್ತಕ ಓದಲು ಮುಂದಾಗುವ ಮೂಲಕ ಮಕ್ಕಳಿಗೆ ಪುಸ್ತಕ ಓದಿನ ಪ್ರೇರಣೆ ನೀಡಬೇಕು. –ಡಾ| ಸುಧಾಮೂರ್ತಿ