Advertisement

ಪುಸ್ತಕಗಳಿಂದ ಜ್ಞಾನ ಹೆಚ್ಚಳ

11:02 AM Nov 24, 2018 | Team Udayavani |

ಕಲಬುರಗಿ: ಪುಸ್ತಕಗಳು ಜ್ಞಾನ ಹೆಚ್ಚಿಸುತ್ತವೆ. ನಾವಿಂದು ಅದನ್ನು ದೂರ ಮಾಡಿಕೊಳ್ಳುತ್ತಿದ್ದೇವೆ. ಪ್ರತಿ ವರ್ಷ ಹಬ್ಬ , ಹುಣಿಮೆ , ಜಾತ್ರೆ, ಉತ್ಸವಕ್ಕೆ ಬಟ್ಟೆ ,ವಸ್ತುಗಳನ್ನು ಖರೀದಿ ಮಾಡುವಂತೆ ಪುಸ್ತಕ ಖರೀದಿಸುವುದು ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರ ಭೂಪತಿ ಹೇಳಿದರು.

Advertisement

ಸಾಹಿತಿ ಡಾ| ಕೆ.ಎಸ್‌. ಬಂಧು ಮನೆಯಂಗಳದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಿಮ್ಮ
ಮನೆಗೆ ನಮ್ಮ ಪುಸ್ತಕ ಕೊಂಡು ತಂದಿದ್ದೇವೆ. ನೀವು ಓದಿರಿ, ಇತರರಿಗೆ ಓದಲು ಹಚ್ಚಿರಿ ಎಂದರು.

ಪ್ರಾ ಧಿಕಾರ ಮೊದಲು ಪುಸ್ತಕ ಖರೀದಿ ಮಾಡುತ್ತಿತ್ತು. ಇಂದು ಪುಸ್ತಕ ಪ್ರಕಟಣೆ, ಉಚಿತ ವಿತರಣೆ, ಯುವ ಬರಹಗಾರರಿಗೆ, ದಲಿತ ಲೇಖಕರಿಗೆ ಪ್ರೋತ್ಸಾಹ ಧನ, ಪ್ರಕಾಶಕರಿಗೆ ಪ್ರಶಸ್ತಿ ನೀಡಿದಂತೆ ಈ ವರ್ಷ ಉತ್ತಮ ಮುದ್ರಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ| ಚಿನ್ನಸ್ವಾಮಿ ಸೊಸಲೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿ ಕಾರ ಉತ್ತಮ ತಾಯಿತನದ, ಕೂಡು ಬಂಧುತ್ವದ ಪುಸ್ತಕ ಜ್ಞಾನಾರ್ಜನೆ ಮಾಡುತ್ತಿದೆ ಎಂದರು.

ಬೀದರನ ಸಿದ್ಧಾರ್ಥ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಎಂ.ಎಸ್‌. ಖರ್ಗೆ ಮಾತನಾಡಿ, ಜೀವನದಲ್ಲಿ ಪುಸ್ತಕಗಳು ದಾರಿ ತೋರುವ ದೀಪಗಳಾಗಿವೆ ಎಂದು ಹೇಳಿದರು. ಡಾ| ಕೆ.ಎಸ್‌. ಬಂಧು, ರೇಣುಕಾ ಹೆಳವಾರ, ಡಾ| ಸೂರ್ಯಕಾಂತ ಸುಜ್ಯಾತ್‌ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀ ವಿಜಯ ಸಾಹಿತ್ಯ ಪುರಸ್ಕೃತೆ ಡಾ| ಜಯದೇವಿ ಗಾಯಕವಾಡ, ಡಾ| ಶಿವರಾಮ ಅಸುಂಡಿ, ಪ್ರೇಮಿಳಾಬಾಯಿ ದಿಗ್ಗಾವಿ, ಎಚ್‌.ಎಸ್‌. ಬೆನಾಳ, ಡಾ| ಗಾಂಧೀಜಿ ಸಿ. ಮೊಳಕೇರೆ, ಡಾ| ಎಂ.ಬಿ. ಕಟ್ಟಿ, ಡಾ| ಹಣಮಂತ ಮೇಲಕೇರಿ, ಡಾ| ಸುರೇಶ ಶರ್ಮಾ ಅವರನ್ನು ಸನ್ಮಾನಿಸಲಾಯಿತು.

Advertisement

ಸಾಹಿತಿ ಡಾ| ಹಣಮಂತರಾವ ದೊಡ್ಡಮನಿ, ಮಾಜಿ ಸಿಂಡಿಕೇಟ್‌ ಸದಸ್ಯ ಈಶ್ವರ ಇಂಗಿನ, ಪ್ರೊ| ಎಸ್‌.ಎಲ್‌. ಪಾಟೀಲ, ಡಾ| ಗವಿಸಿದ್ದಪ್ಪ ಪಾಟೀಲ, ಕವಿ ಈಶ್ವರ ತಡೋಳಾ ಹಾಗೂ ನೂರಾರು ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು.

ಸಂತೋಷಕುಮಾರ ಕರಹರಿ ಪ್ರಾರ್ಥನಾ ಗೀತೆ ಹಾಡಿದರು, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಸ್ವಾಗತಿಸಿದರು, ಡಾ| ಗಾಂ ಧೀಜಿ ಸಿ. ಮೊಳಕೇರೆ ನಿರೂಪಿಸಿದರು, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಸಂಚಾಲಕಿ ಡಾ| ಜಗದೇವಿ ಗಾಯಕವಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next