Advertisement

ಚುಟುಕು ಸಾಹಿತ್ಯದಿಂದ ಜ್ಞಾನಾರ್ಜನೆ

01:09 PM Oct 23, 2017 | |

ಮೈಸೂರು: ದೊಡ್ಡದಾದ ಕಥೆ, ಕಾದಂಬರಿಗಳನ್ನು ಓದುವುದಕ್ಕಿಂತಲೂ ಚುಟುಕು ಸಾಹಿತ್ಯಗಳ ಅಧ್ಯಯನದಿಂದ ಹೆಚ್ಚಿನ ಜ್ಞಾನಾರ್ಜನೆ ಆಗಲಿದೆ ಎಂದು ಚುಟುಕು ಸಾಹಿತ್ಯ ಪರಿಷತ್‌ ಕೇಂದ್ರ ಸಾಹಿತ್ಯ ಸಮಿತಿ ಅಧ್ಯಕ್ಷ ತೋಂಟದಾರ್ಯ ಹೇಳಿದರು.

Advertisement

ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಮತ್ತು ಕೌಸ್ತು¸‌ ಪ್ರಕಾಶನದ ವತಿಯಿಂದ ಭಾನುವಾರ ನಗರದ ಎಂಜಿನಿಯರು ಸಂಸ್ಥೆಯಲ್ಲಿ ಆಯೋಜಿಸಿದ್ದ ಚುಟುಕು ಸಿರಿ ರತ್ನ ಹಾಲಪ್ಪಗೌಡ ಅವರ ಸಂಕ್ರಾತಿ ಚುಟುಕುಗಳು ಮತ್ತು ಡಾ.ಎಂ.ಜಿ.ಆರ್‌ ಅರಸ್‌ ಅವರ ಪ್ರೊ.ಒಡೆಯರ್‌ ಡಿ. ಹೆಗ್ಗಡೆ ಆಯ್ದ ಚುಟುಕುಗಳ ಕವನ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ದೊಡ್ಡ ಕಥೆ, ಕಾದಂಬರಿಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಸಿಗಲಿದೆ ಎಂಬುದು ಸತ್ಯ. ಆದರೆ, ಇವುಗಳಲ್ಲಿ ಒಂದೇ ವಿಷಯವನ್ನು ಹಲವು ರೂಪಗಳಲ್ಲಿ ಎಳೆದು ತಿಳಿಸಲಿದ್ದು, ಇದಕ್ಕೆ ತದ್ವಿರುದ್ಧವಾಗಿರುವ ಚುಟುಕು ಸಾಹಿತ್ಯ ಸಹ ಅನೇಕ ಕಥೆಗಳ ಸಾರಾಂಶವನ್ನು ಕೆಲವು ಸಾಲುಗಳಲ್ಲಿ ತಿಳಿಸುತ್ತವೆ.

ಹೀಗಾಗಿ ದೊಡ್ಡ ಕಥೆ, ಕಾದಂಬರಿಗಳನ್ನು ಹೆಚ್ಚಾಗಿ ಓದುವ ಬದಲು ಚುಟುಕು ಸಾಹಿತ್ಯವನ್ನು ಹೆಚ್ಚಾಗಿ ಓದಬೇಕೆಂದು ಹೇಳಿದರು. ಸಮಾರಂಭದಲ್ಲಿ ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ದಾಸ್ಕಿ ನರ್ಸಿಂಗ್‌ ಕಾಲೇಜಿನ ಸ್ಥಾಪಕ ಅಧ್ಯಕ್ಷ ಡಾ.ಡಿ. ತಿಮ್ಮಯ್ಯ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ ಹೆಗ್ಗಡೆ, ಪ್ರೊ.ಕೆ. ಬೈರವಮೂರ್ತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next