Advertisement

‘ಚರಿತ್ರೆಗಳ ಅಧ್ಯಯನದಿಂದ ಜ್ಞಾನ ವಿಕಾಸ’

11:15 PM Aug 07, 2019 | mahesh |

ಮಂಗಳಗಂಗೋತ್ರಿ: ಗ್ರಂಥ ಸಂಪಾದನಾ ಶಾಸ್ತ್ರ ಕನ್ನಡದಲ್ಲಿ ಹಲವು ಜ್ಞಾನ ಶಾಖೆಗಳ ಉಗಮ ಮತ್ತು ವಿಕಾಸಕ್ಕೆ ಪ್ರೇರಣೆ ನೀಡಿತು. ಲಿಪಿಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಭಾಷಾ ಶಾಸ್ತ್ರ, ಸಾಹಿತ್ಯ ಚರಿತ್ರೆ, ಸಾಮಾಜಿಕ ಚರಿತ್ರೆ ಮೊದಲಾದ ಅಧ್ಯಯನಗಳ ವಿಕಾಸಕ್ಕೆ ಕಾರಣವಾಯಿತು ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ| ಬಿ.ಎ.ವಿವೇಕ್‌ ರೈ ಅವರು ಹೇಳಿದರು.

Advertisement

ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು ಇದರ ಜಂಟಿ ಆಶ್ರಯದಲ್ಲಿ ಕನ್ನಡ ಗ್ರಂಥ ಸಂಪಾದನೆ: ಹೊಸ ಚಿಂತನೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ವಿಭಾಗದಲ್ಲಿ ನಡೆಯಲಿರುವ ವಿಚಾರಸಂಕಿರಣವನ್ನು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಧ್ಯಕಾಲೀನ ಸಂದರ್ಭದಲ್ಲಿದ್ದ ವಚನಗಳ ಸಂಪಾದನೆಯಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಹೆಚ್ಚಿನ ವಚನಗಳು ಮೌಖೀಕದಿಂದ ಲಿಖೀತಕ್ಕೆ ಬಂದವುಗಳು. ಮೌಖೀಕ ಪರಂಪರೆಯಲ್ಲಿ ವ್ಯತ್ಯಾಸಗಳಾಗುತ್ತಾ ಹೋಗುತ್ತವೆ. ಇಂತಹ ಸೂಕ್ಷ ್ಮತೆಗಳನ್ನು ನಾವು ಎಚ್ಚರವಾಗಿ ಗಮನಿಸಬೇಕು. ಪ್ರಮುಖವಾಗಿ ಬೇರೆ ಬೇರೆ ಕಡೆ ಇರುವ ಹಸ್ತಪ್ರತಿಗಳನ್ನು ಓದುವ ಹವ್ಯಾಸವನ್ನು ಯುವ ಸಮುದಾಯ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದಿನ ಅಧುನಿಕತೆಯ ಕಾಲಘಟ್ಟದಲ್ಲಿ ಒಂದು ಲಿಪಿಯ ಭಾಷೆಯನ್ನು ಮತ್ತೂಂದು ಲಿಪಿಗೆ ಬದಲಾಯಿಸುವ ಸಾಫ್ಟ್‌ವೇರ್‌ಗಳು ಬಂದಿವೆ. ಯುವ ಸಮುದಾಯ ಭಾಷೆಯ ಬೆಳೆವಣಿಗೆಯ ಜತೆಗೆ ವಿಷಯಗಳ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು ಎಂದರು.

ವಿಚಾರಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ| ಎ.ಎಂ. ಖಾನ್‌ ಅವರು, ಬೇರೆ ಬೇರೆ ಲಿಪಿಗಳಲ್ಲಿರುವ ಹಸ್ತಪ್ರತಿಗಳು, ಶಿಲಾ ಶಾಸನಗಳು, ತಾಮ್ರಶಾಸನಗಳು ಸಹಿತ ಹಿಂದಿನ ಗ್ರಂಥಸಂಪಾದನೆಗಳನ್ನು ಸರಿಯಾದ ರೀತಿಯಲ್ಲಿ ನಾವು ಅರ್ಥ ಮಾಡಿಕೊಂಡಲ್ಲಿ ನಮ್ಮ ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನ ನಿರ್ದೇಶಕ ಪ್ರೊ| ಕೆ.ಆರ್‌. ದುರ್ಗಾದಾಸ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ| ಎಲ್.ರಾಮಮೂರ್ತಿ ಮಾತನಾಡಿದರು.

Advertisement

ಮಂಗಳೂರು ವಿ.ವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ| ಕೆ. ಅಭಯ ಕುಮಾರ್‌ ಸ್ವಾಗತಿಸಿದರು. ಸಂಚಾಲಕ ಡಾ| ಬಸವರಾಜಪ್ಪ ವಂದಿಸಿದರು. ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next