Advertisement

ಜ್ಞಾನ ದಾಸೋಹ ಶ್ರೇಷ್ಠ ಕಾರ್ಯ

12:11 PM Feb 05, 2018 | |

ಕಲಬುರಗಿ: ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೂಂದಿಲ್ಲ, ಅದನ್ನು ದಾಸೋಹದ ರೂಪದಲ್ಲಿ ಹಂಚಿಕೊಳ್ಳುವುದಕ್ಕಿಂತ ಮಹತ್ತರ ಕಾರ್ಯ ಮತ್ತೂಂದಿಲ್ಲ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ
ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು
ವಾಣಿಜ್ಯ ಮಹಿಳಾ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.

ಹಲವಾರು ರೂಪದ ದಾಸೋಹಗಳು ಚಾಲ್ತಿಯಲ್ಲಿದ್ದು, ಅದರಲ್ಲಿ ಜ್ಞಾನ ದಾಸೋಹವೇ ಅತೀ ಶ್ರೇಷ್ಠವಾದದ್ದು. ಜ್ಞಾನ ಅವ್ಯಕ್ತ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ಜ್ಞಾನ ದಾಸೋಹ ಎಲ್ಲ ಕಾಲಕ್ಕೂ ಸಲ್ಲುವಂತಹದ್ದಾಗಿದೆ ಎಂದು ನುಡಿದರು.

ಮನುಷ್ಯರು ಆಶಾವಾದಿಗಳಾಗಿರಬೇಕು. ಇದರಿಂದ ಅಂದುಕೊಂಡಿದ್ದನ್ನು ಸಾಧಿಸಬಹುದು. ಮೇಡಂ ಕ್ಯೂರಿ ಆಶಾವಾದಿ ಆಗಿದ್ದರಿಂದಲೇ ಅವರ ಮನೆತನಕ್ಕೆ ಜಗತ್ತಿನ ಸರ್ವಶ್ರೇಷ್ಠ ಐದು ನೊಬೆಲ್‌ ಪಾರಿತೋಷಕಗಳು ಲಭಿಸಿದ್ದವು. ಆದ್ದರಿಂದ ಜೀವನದಲ್ಲಿ ಎಂತಹದೇ ಕಷ್ಟ ಕಾರ್ಪಣ್ಯಗಳು ಬಂದರೂ ಎದೆಗುಂದದೇ ಮುನ್ನುಗ್ಗುವ
ಮನೋಭಾವ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿದ್ಯಾರ್ಥಿ ಕಲ್ಯಾಣಾಧಿಕಾರಿ
ಪ್ರೊ| ಶಾಂತಲಾ ನಿಷ್ಟಿ ಹಾಜರಿದ್ದರು. ಸಂಗೀತ ವಿಭಾಗದವರು ವಚನ ಗಾಯನ ನಡೆಸಿಕೊಟ್ಟರು. ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಸ್ವಾಗತಿಸಿದರು. ಡಾ| ಪುಟ್ಟಮಣಿ ದೇವಿದಾಸ ನಿರೂಪಿಸಿದರು. ಡಾ| ಎಸ್‌.ಎಸ್‌. ಪಾಟೀಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next