ಕಣ್ಣೂರು: ಕೇರಳದಿಂದ ಉಗ್ರ ಸಂಘಟನೆ ಐಸಿಸ್‌ನತ್ತ ಆಕರ್ಷಣೆ ಗೊಂಡು ಸಿರಿಯಾಕ್ಕೆ ತೆರಳಿದವರ ಸಂಖ್ಯೆ ಈಗಾಗಲೇ 100 ದಾಟಿದೆ. ಈ ಪೈಕಿ ಕೆಲವರು ಅಸುನೀಗಿರುವ ವರ್ತಮಾನಗಳೂ ತಲುಪಿವೆ. “ಪವಿತ್ರ ತೀರ್ಥ ಯಾತ್ರೆ’ ಹೆಸರಲ್ಲಿ ನಡೆಯುವ ಈ ಆಕರ್ಷಣೆ ತಡೆಯಲು ಎಲ್‌ಡಿಎಫ್ ಸರಕಾರ ಮುಂದಾಗಿದ್ದು, ಹಲವು ಕ್ರಮಗಳನ್ನು ಕೈಗೊಂಡಿದೆ. ಉತ್ತರ ಕೇರಳದ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಕಲ್ಲಿಕೋಟೆ ಮತ್ತು ಇತರ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಆಯಾ ಊರುಗಳಲ್ಲಿರುವ ಮಸೀದಿಗಳ ಧರ್ಮಗುರುಗಳ ನೆರವಿನಿಂದ ಯುವಕರು ಮತ್ತು ಯುವತಿಯರು ಉಗ್ರವಾದದತ್ತ ಆಕರ್ಷಣೆಗೊಳ್ಳದಿರಲು ತಿಳಿವಳಿಕೆ ನೀಡುವ ವ್ಯವಸ್ಥೆ ಶುರು ಮಾಡಲಾಗಿದೆ. ಈ ಬಗ್ಗೆ ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹಾರ ಅವರೇ ಆದೇಶ ಹೊರಡಿಸಿದ್ದಾರೆ ಎಂದು “ಮಲಯಾಳ ಮನೋರಮ’ ವರದಿ ಮಾಡಿದೆ. ಇಂಥ ತರಗತಿಯನ್ನು ನಡೆಸಿದ ಹಿರಿಯ ಪೊಲೀಸ್ ಅಧಿಕಾರಿ ಈ ಅಂಶ ದೃಢಪಡಿಸಿದ್ದಾರೆ. ಧರ್ಮಗುರುಗಳ ಜತೆಗೆ ಪೊಲೀಸ್ ಇಲಾಖೆಯಲ್ಲಿರುವ ಮುಸ್ಲಿಂ ಸಮುದಾಯದ ಹಿರಿಯ ಅಧಿಕಾರಿಗಳು, ಸಮುದಾಯದ ಸಂಘ ಟನೆಗಳ ಮುಖಂಡರ ಜತೆಗೂಡಿ ಈ ತಿಳಿವಳಿಕೆ ತರಗತಿಗಳನ್ನು ನಡೆಸಲಾ ಗುತ್ತಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.
ಕಾಸರಗೋಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೇರಳ ಪೊಲೀಸರ ಕ್ರಮ
ಮಸೀದಿ, ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ತರಗತಿಗಳು