Advertisement

ಒತ್ತಡದಿಂದ ಆಗುವ ಅಪಾಯ ತಿಳಿದು, ಹೃದಯ ಆರೋಗ್ಯ ಕಾಪಾಡಿಕೊಳ್ಳಿ…

06:23 PM Sep 15, 2021 | Team Udayavani |
ಹಣಕಾಸಿನ ತೊಂದರೆ, ರೋಗಕ್ಕೆ ತುತ್ತಾಗುವ ಭಯ, ಉದ್ಯೋಗ ನಷ್ಟ, ದೈನಂದಿನ ಗಳಿಕೆಯ ಕುಸಿತ, ಇನ್ನಿತರ ವ್ಯಯಕ್ತಿಕ ಕಾರಣ ಹೀಗೆ ಒತ್ತಡ ಮನಸ್ಸನ್ನು ಘಾಸಿಗೊಳಿಸುವ ಘಟನೆ ಹಲವರ ಜೀವನದಲ್ಲಿ ನಡೆಯುತ್ತಿದೆ. ಅಸಮರ್ಪಕ ನಿದ್ರೆ, ಅನಾರೋಗ್ಯ ಇತ್ಯಾದಿ ದೈಹಿಕ ಅಂಶಗಳು ಒತ್ತಡಕ್ಕೆ ಕಾರಣವಾಗಿರಬಹುದು. ಇದರಿಂದ ಯಾವೆಲ್ಲಾ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ ಎಂಬುದನ್ನು ನಾವು ಯೋಚಿಸಿಯೂ ಇರುವುದಿಲ್ಲ. ಈ ಚಿಕ್ಕ ಚಿಕ್ಕ ಒತ್ತಡಗಳೇ ನಮ್ಮ ಹೃದಯದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅದಲ್ಲದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದಲ್ಲಿ ಅದಕ್ಕೆ ದುಪ್ಪಟ್ಟು ಬೆಲೆ ತೆರಬೇಕಾದೀತು...
Now pay only for what you want!
This is Premium Content
Click to unlock
Pay with

-ಪ್ರೀತಿ ಭಟ್‌ ಗುಣವಂತೆ

Advertisement

ಹಣಕಾಸಿನ ತೊಂದರೆ, ರೋಗಕ್ಕೆ ತುತ್ತಾಗುವ ಭಯ, ಉದ್ಯೋಗ ನಷ್ಟ, ದೈನಂದಿನ ಗಳಿಕೆಯ ಕುಸಿತ, ಇನ್ನಿತರ ವ್ಯಯಕ್ತಿಕ ಕಾರಣ ಹೀಗೆ ಒತ್ತಡ ಮನಸ್ಸನ್ನು ಘಾಸಿಗೊಳಿಸುವ ಘಟನೆ ಹಲವರ ಜೀವನದಲ್ಲಿ ನಡೆಯುತ್ತಿದೆ. ಅಸಮರ್ಪಕ ನಿದ್ರೆ, ಅನಾರೋಗ್ಯ ಇತ್ಯಾದಿ ದೈಹಿಕ ಅಂಶಗಳು ಒತ್ತಡಕ್ಕೆ ಕಾರಣವಾಗಿರಬಹುದು. ಇದರಿಂದ ಯಾವೆಲ್ಲಾ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ ಎಂಬುದನ್ನು ನಾವು ಯೋಚಿಸಿಯೂ ಇರುವುದಿಲ್ಲ. ಈ ಚಿಕ್ಕ ಚಿಕ್ಕ ಒತ್ತಡಗಳೇ ನಮ್ಮ ಹೃದಯದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅದಲ್ಲದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದಲ್ಲಿ ಅದಕ್ಕೆ ದುಪ್ಪಟ್ಟು ಬೆಲೆ ತೆರಬೇಕಾದೀತು.

ಒತ್ತಡ ಉಂಟಾದಾಗ ನಮ್ಮ ದೇಹದಲ್ಲಿ ಕಾರ್ಟಿಸೋಲ್‌ ಎಂಬ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಹೆಚ್ಚು ಹೆಚ್ಚು ಒತ್ತಡ ಉಂಟಾದಲ್ಲಿ ಈ ಹಾರ್ಮೋನ್‌ ಬಿಡುಗಡೆಯಾಗುವ ಪ್ರಮಾಣ ಜಾಸ್ತಿಯಾಗುತ್ತದೆ. ಆಗ ಕಾರ್ಟಿಸೋಲ್‌ ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ ಅಂಶವನ್ನು ಹೆಚ್ಚಿಸಬಹುದು, ಇವೆಲ್ಲವೂ ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳು. ಅಲ್ಲದೆ, ಮೂತ್ರ ಜನಕಾಂಗದ ಗ್ರಂಥಿಗಳು ಉತ್ಪಾದಿಸುವ ಕ್ಯಾಟೆಕೋಲಮೈನ್ಸ್‌ ಎಂಬ ಹಾರ್ಮೋನ್‌ ಒತ್ತಡದ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್‌ಗಳು ಕೂಡ ರಕ್ತದೊತ್ತಡದ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಹೃದಯಾಘಾತ ಹಾಗೂ ಹೃದಯ ವೈಫ‌ಲ್ಯಲಕ್ಕೆ ಕಾರಣವಾಗಿದೆ. ದೀರ್ಘ‌ಕಾಲೀನ ಒತ್ತಡ ರಕ್ತ ಹೆಪ್ಪುಗಟ್ಟುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಹೆಚ್ಚಾಗುತ್ತದೆ.

ನಿರ್ದಿಷ್ಟ ವ್ಯಾಯಾಮ ಮಾಡಿ
ಹೃದಯದ ಮೇಲೆ ಒತ್ತಡದಿಂದಾಗುವ ಹಾನಿಕಾರಕ ಪರಿಣಾಮ ತಡೆಯಲು ದಿನ ನಿತ್ಯ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದುದಲ್ಲದೆ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಬಹುದು. ಅದಲ್ಲದೆ ನಿಯಮಿತ ವ್ಯಾಯಾಮ ಖಿನ್ನತೆಯಿಂದ ದೂರವಿರಲು ಸಹಾಯ ಮಾಡುತ್ತದೆ. ಇದು ಹೃದಯಕ್ಕೆ ಒಂದು ರೀತಿಯಲ್ಲಿ ಸಹಾಯವಾಗುತ್ತದೆ ಎಂದು ಹೇಳಬಹುದು.

ಸಂಶೋಧನೆಯ ಪ್ರಕಾರ ದೀರ್ಘಾವಧಿಯ ಆತಂಕ ಭಾವನಾತ್ಮಕ ಒತ್ತಡ ಹಠಾತ್‌ ಹೃದಾಯಾಘಾತಕ್ಕೆ ಕಾರಣವಾಗುತ್ತದೆ. ನೀವು ಖಿನ್ನತೆಗೆ ಒಳಗಾಗಿದ್ದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ. ಆತಂಕ ಕಡಿಮೆ ಮಾಡುವ ಯೋಗ ಇಲ್ಲವಾದಲ್ಲಿ ವಾಕಿಂಗ್‌ ಹೀಗೆ ಇನ್ನಿತರ ಹೊಸ ಚಟುವಟಿಕೆಗಳನ್ನು ಆರಂಭಿಸಿ. ಆದರೆ ಯಾವುದೇ ಕಾರಣಕ್ಕೂ ಆಲ್ಕೋಹಾಲ್‌, ತಂಬಾಕು ಇವುಗಳ ಮೋರೆ ಹೋಗಬೇಡಿ ಏಕೆಂದರೆ ಅವುಗಳಿಂದ ಯಾವುದೇ ರೀತಿಯ ಒಳ್ಳೆಯ ಪರಿಣಾಮ ಇಲ್ಲ. ಅಲ್ಲದೆ ಇವುಗಳಿಂದ ಆತಂಕದ ಭಾವನೆಗಳು ಹೆಚ್ಚಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

Advertisement

ಒತ್ತಡದ ಕೆಲಸವನ್ನು ಸುಲಭಗೊಳಿಸಿ
ಕಠಿನವಾದ ಕೆಲಸಗಳು ಒತ್ತಡವನ್ನು ಹೆಚ್ಚು ಮಾಡುತ್ತದೆ ಇದು ಹೃದಯಕ್ಕೆ ಅಪಾಯ ಉಂಟು ಮಾಡುತ್ತದೆ ಎಂಬುದು ವರದಿಯ ಪ್ರಕಾರ ಧೃಡ ಪಟ್ಟಿದೆ. ಕಳೆದ ಮೂರು ದಶಕಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದ್ರೋಗ ಆವರ್ತನ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಅದಲ್ಲದೆ ಯುವ ಸಮುದಾಯದಲ್ಲಿ ಹೃದಯಾಘಾತ 3ರಿಂದ 4 ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಗಂಟೆಗಳ ಲೆಕ್ಕಾಚಾರವಿಲ್ಲದೆ ಕೆಲಸ ಮಾಡುವುದು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಯುವಕರು ತಮ್ಮ ವಯಸ್ಸಿಗಿಂತ ಹೆಚ್ಚು ದೊಡ್ಡವರಾಗಿ ಕಾಣುತ್ತಾರೆ ಎಂಬುದು ಕೂಡ ಹಲವು ವರದಿಗಳಿಂದ ಸಾಬೀತಾಗಿದೆ. ಆದ್ದರಿಂದ ಆದಷ್ಟು ಒಳ್ಳೆಯ ಆಹಾರ ಪದ್ಧತಿಗಳನ್ನು ರೂಢಿಸಿಕೊಂಡು, ಒತ್ತಡಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನ ಪಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.