ರಾಯಚೂರು: ಗ್ರಾಪಂ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಚುನಾವಣೆ ಪ್ರಕ್ರಿಯೆ ಸರಿಯಾಗಿ ತಿಳಿದುಕೊಳ್ಳುವುದು ಅತ್ಯವಶ್ಯ ಎಂದು ಎಡಿಸಿ ದುರಗೇಶ್ ತಿಳಿಸಿದರು.
ನಗರದ ಡಿಸಿ ಕಚೇರಿಯ ವಿಡಿಯೋ ಕಾನ್ಫೆರೆನ್ಸ್ ಹಾಲ್‌ನಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ತಾಲೂಕಿನ ಮಾಸ್ಟರ್ ತರಬೇತುದಾರರಿಗೆ ಪಿಆರ್‌ಒ, ಎಪಿಆರ್‌ಒ ಹಾಗೂ ಎರಡನೇ ಪೊಲೀಂಗ್ ಅಧಿಕಾರಿ, ಮೂರನೇ ಪೊಲೀಂಗ್ ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿದರು.
ಚುನಾವಣೆಗೆ ನಿಯೋಜಿತ ಸಿಬ್ಬಂದಿ ನುರಿತ ತರಬೇತುದಾರರಿಂದ ತರಬೇತಿ ಪಡೆದು ತಾಲೂಕು ಮಟ್ಟದ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಮಾಹಿತಿ ನೀಡಬೇಕು. ಪಿಆರ್‌ಒಗಳು ಮಾದರಿ ಮತಗಟ್ಟೆ ಬಗ್ಗೆಮಾಹಿತಿ ಪಡೆಯಬೇಕು. ಮತಪೆಟ್ಟಿಗೆ ಸಿದ್ಧಪಡಿಸಬೇಕು. ಪಿಆರ್‌ಒ ಪತ್ರದ ಹಿಂಬದಿಯಲ್ಲಿ ಸಹಿ ಮಾಡಬೇಕು.ಮತ ಪೆಟ್ಟಿಗೆ ಸಿದ್ಧಪಡಿಸುವ ವೇಳೆ ಮತದಾನ ಕೇಂದ್ರದಲ್ಲಿಅಭ್ಯರ್ಥಿಗಳು ಇರಬೇಕು. ಪೆಟ್ಟಿಗೆ ತೆರದು ಒಳಗೆ ಖಾಲಿ ಇರುವುದನ್ನು ಖಾತ್ರಿಪಡಿಸಬೇಕು. ನಂತರ ಅದನ್ನು ಭದ್ರವಾಗಿ ಮುಚ್ಚಬೇಕು. ಮತದಾನದ ಒಳಗೆ ಅನ್ಯ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಕೇವಲ ಅಭ್ಯರ್ಥಿಗಳು, ಏಜೆಂಟ್‌ರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಿದರು.
ಮತದಾನ ಕೇಂದ್ರ ಹೊರಭಾಗದಲ್ಲಿ ನಮೂನೆ 25ನ್ನು ಅಂಟಿಸಬೇಕು ಮತ್ತು ಮತದಾನದ ಸುತ್ತಲೂ 100 ಮೀಟರ್ ಸುತ್ತ ಯಾರೂ ಓಡಾಡದಂತೆ ನಿಷೇಧ ವಿ ಸಬೇಕು. ಮತದಾನ ವೇಳೆ ಅಭ್ಯರ್ಥಿ ಹೆಸರು ಹೇಳಿ ಮತದಾನ ಮಾಡಿದರೆ ಅಂಥವರನ್ನು ಹೊರಗಡೆ ಕಳುಹಿಸಿ ಪೊಲೀಸರಿಗೆ ಒಪ್ಪಿಸಬೇಕು. ಸಂಜೆ 5ರೊಳಗೆ ಮತದಾನ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು.
ಸದಾಶಿವಪ್ಪ ತರಬೇತಿ ನೀಡಿದರು. ಚುನಾವಣೆ ತಹಶೀಲ್ದಾರ್ ಸಂತೋಷ ರಾಣಿ ಸೇರಿ ಇತರರಿದ್ದರು.