Advertisement

Exit polls;ಯುಪಿ, ಉತ್ತರಾಖಂಡ್,ಮಣಿಪುರ, ಗೋವಾದಲ್ಲಿ BJP ಕಮಾಲ್

05:45 PM Mar 09, 2017 | Team Udayavani |

ನವದೆಹಲಿ: ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಉತ್ತರಪ್ರದೇಶ, ಗೋವಾ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಗುರುವಾರ ಸಂಜೆ ಬಹಿರಂಗಗೊಂಡಿದೆ.

Advertisement

ಒಟ್ಟಾರೆ ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ, ಶಾ ಜೋಡಿ ಮೋಡಿ ಮಾಡಿದ್ದರೆ, ಮಣಿಪುರದಲ್ಲಿ ಬಿಜೆಪಿ, ಗೋವಾದಲ್ಲಿ,  ಉತ್ತರಾಖಂಡ್ ನಲ್ಲಿ ಬಿಜೆಪಿ ಮತ್ತೆ ಮುನ್ನಡೆ ಸಾಧಿಸಿದೆ, ಪಂಜಾಬ್ ನಲ್ಲಿ ಬಿಜೆಪಿ-ಅಕಾಲಿದಳ ಮೈತ್ರಿಕೂಟಕ್ಕೆ ಮುಖಭಂಗವಾಗಿದ್ದರೆ, ಪಂಜಾಬ್ ನಲ್ಲಿ ಆಪ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಮುಖ ಉಳಿಸಿಕೊಂಡಿದೆ.

403 ಸದಸ್ಯ ಬಲ ಹೊಂದಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸಿ ವೋಟರ್ ಪ್ರಕಾರ ಬಿಜೆಪಿಗೆ ಅತೀ ಹೆಚ್ಚು ಸ್ಥಾನ ಲಭ್ಯವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ. ಬಿಜೆಪಿಗೆ 180, ಎಸ್ಪಿ, ಕಾಂಗ್ರೆಸ್ ಮೈತ್ರಿಗೆ 120, ಬಿಎಸ್ಪಿಗೆ 90, ಇತರೆ 90 ಸ್ಥಾನ ಪಡೆಯುವುದಾಗಿ ಹೇಳಿದೆ.

ಯುಪಿ ಒಟ್ಟು ಸದಸ್ಯ ಬಲ;402, ಬಹುಮತಕ್ಕೆ 202; 2012ರ ಫಲಿತಾಂಶ: ಸಮಾಜವಾದಿ 224
ಕಾಂಗ್ರೆಸ್ 28,ಬಿಜೆಪಿ 47, ಬಿಎಸ್ಪಿ 80,ಇತರೆ 24

ಗೋವಾ ರಾಜ್ಯದಲ್ಲಿ ಸಿ ವೋಟರ್ ಸಮೀಕ್ಷೆ ಪ್ರಕಾರ ಅತಂತ್ರ ವಿಧಾನಸಭೆ ಸಾಧ್ಯತೆ ಎಂದು ತಿಳಿಸಿದೆ. ಸಿ ವೋಟರ್ ಸಮೀಕ್ಷೆಯಂತೆ ಗೋವಾದಲ್ಲಿ ಬಿಜೆಪಿಗೆ 15ರಿಂದ 21 ಸ್ಥಾನ, ಕಾಂಗ್ರೆಸ್ ಗೆ 12-18, ಆಪ್ ಗೆ 04 ಹಾಗೂ ಇತರೆ 02-8 ಸ್ಥಾನ ಲಭಿಸುವುದಾಗಿ ಹೇಳಿದೆ.

Advertisement

ಗೋವಾ ವಿಧಾನಸಭೆ ಸದಸ್ಯ ಬಲ 40, ಬಹುಮತಕ್ಕೆ 21 ಸ್ಥಾನ: 2012ರ ಫಲಿತಾಂಶ ಬಿಜೆಪಿ 21, ಕಾಂಗ್ರೆಸ್ 09, ಇತರೆ 10

ನ್ಯೂಸ್ 18, ಎಂಆರ್ ಸಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ; ಉತ್ತರಪ್ರದೇಶದಲ್ಲಿ ಬಿಜೆಪಿಗೆ 185 ಸ್ಥಾನ ಸಮಾಜವಾದಿ, ಕಾಂಗ್ರೆಸ್ ಮೈತ್ರಿಕೂಟಕ್ಕೆ 120, ಬಿಎಸ್ಪಿ 90, ಇತರೆ 08 ಸ್ಥಾನ ಪಡೆಯಲಿದ್ದಾರೆ.

ಟೈಮ್ಸ್ ನೌ, ವಿಎಂ ಆರ್ ಸಮೀಕ್ಷೆ; ಉತ್ತರಪ್ರದೇಶದಲ್ಲಿ ಬಿಜೆಪಿಗೆ 190-210, ಎಸ್ಪಿ ಕಾಂಗ್ರೆಸ್ ಮೈತ್ರಿಕೂಟಕ್ಕೆ 110-130, ಬಿಎಸ್ಪಿ 57-74, ಇತರೆ 08 ಸ್ಥಾನ.

ಪಂಜಾಬ್ ನಲ್ಲಿ ಸಿ ವೋಟರ್, ಇಂಡಿಯಾ ಟುಡೇ ಪ್ರಕಾರ, ಅಕಾಲಿದಳ ಮೈತ್ರಿ ಕೂಟ 5ರಿಂದ 13, ಕಾಂಗ್ರೆಸ್ 41ರಿಂದ 49, ಆಪ್ 59ರಿಂದ 67, ಇತರೆ 03 ಸ್ಥಾನ 

ಪಂಜಾಬ್ ನಲ್ಲಿ ಆಕ್ಸಿಸ್ ಸಮೀಕ್ಷೆ ಪ್ರಕಾರ ಆಪ್ ಗೆ 42ರಿಂದ 51, ಕಾಂಗ್ರೆಸ್ ಗೆ 62ರಿಂದ 71, ಇತರೆ 02 ಸ್ಥಾನ.

ಪಂಜಾಬ್ ವಿಧಾನಸಭೆ ಸದಸ್ಯ ಬಲ 117, ಬಹುಮತಕ್ಕೆ 59 ಸ್ಥಾನ; 2012ರ ಫಲಿತಾಂಶ, ಅಕಾಲಿದಳ 56 ಕಾಂಗ್ರೆಸ್ 46, ಬಿಜೆಪಿ 12,ಇತರೆ 03

70 ಸದಸ್ಯ ಬಲದ ಉತ್ತರಾಖಂಡ್ ನಲ್ಲಿ ನ್ಯೂಸ್ ಎಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 38, ಕಾಂಗ್ರೆಸ್ ಗೆ 30, ಬಿಎಸ್ಪಿ 0, ಇತರೆ 0.

ಉತ್ತರಾಖಂಡ್ ನಲ್ಲಿ ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ 29-35, ಕಾಂಗ್ರೆಸ್ 29-35, ಬಿಎಸ್ಪಿ 0, ಇತರೆ 2-8 ಸ್ಥಾನ ಸಾಧ್ಯತೆ ಎಂದು ತಿಳಿಸಿದೆ.

ಉತ್ತರಾಖಂಡ್ ವಿಧಾನಸಭೆ ಸದಸ್ಯ ಬಲ 70, ಮ್ಯಾಜಿಕ್ ನಂ 36; 2012ರ ಫಲಿತಾಂಶ 
ಕಾಂಗ್ರೆಸ್ 32, ಬಿಜೆಪಿ 31, ಬಿಎಸ್ಪಿ 03, ಇತರೆ 04

60 ಸದಸ್ಯ ಬಲ ಹೊಂದಿರುವ ಮಣಿಪುರ ವಿಧಾನಸಭೆಯಲ್ಲಿ ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 17-23, ಬಿಜೆಪಿ 25-31, ಟಿಎಂಸಿ 0, ಇತರೆ 9-15

ಮಣಿಪುರ ವಿಧಾನಸಭೆ ಸದಸ್ಯ ಬಲ 60, ಮ್ಯಾಜಿಕ್ ನಂ.31; 2012ರ ಫಲಿತಾಂಶ ಕಾಂಗ್ರೆಸ್ 42, ಬಿಜೆಪಿ 0, ಟಿಎಂಸಿ 07, ಇತರೆ11

Advertisement

Udayavani is now on Telegram. Click here to join our channel and stay updated with the latest news.

Next