Advertisement

ಸರ್ವಜ್ಞ ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಲ್ಲ

04:02 PM Feb 21, 2017 | Team Udayavani |

ಚಿಂತಾಮಣಿ: ಕವಿ ಸರ್ವಜ್ಞ 17ನೇ ಶತಮಾನದ ಓರ್ವ ದಾರ್ಶನಿಕ ವ್ಯಕ್ತಿ. ಈತ ಯಾವುದೇ ಜಾತಿ, ಮತ, ಧರ್ಮಕ್ಕೆ ಸಿಮೀತವಾಗಿಲ್ಲ. ಸರ್ವಧರ್ಮಗಳ ಸಮಾನ ವ್ಯಕ್ತಿಯಾಗಿ ತನ್ನ ವಚನಗಳ  ಮೂಲಕ ಸಮಾಜಕ್ಕೆ, ಮಾನವ ಕುಲಕ್ಕೆ ಸಾಕಷ್ಟು ವಿಚಾರ ಧಾರೆಗಳನ್ನು ಎರೆದ ಮಹಾನ್‌ ವ್ಯಕ್ತಿ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು.

Advertisement

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಚಿಂತಾಮಣಿ ತಾಲೂಕು ಕುಂಬಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮೂರನೇ ವರ್ಷದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮುದಾಯಕ್ಕೆ ಸೀಮಿತವಲ್ಲ: ಸರ್ವಜ್ಞ, ಕನಕದಾಸ, ಬಸವಣ್ಣ, ಪುರಂದರದಾಸ, ಕುವೆಂಪುರಂತಹ ಮಹನೀಯರನ್ನು ಒಂದೊಂದು ಸಮುದಾಯಕ್ಕೆ ಮೀಸಲು ಎಂಬಂತೆ ಕಾಣಲಾಗುತ್ತಿದೆ. ಇಂತಹ ಮಹಾನ್‌ ಪುರುಷರಿಗೆ ಜಾತಿ ಭೇದ ಮಾಡುತ್ತಿರುವುದು ಖೇದಕರ. ಇವರೆಲ್ಲ ಯಾವುದೇ ಸಮುದಾಯಕ್ಕೆ ಸೇರಿದವರಲ್ಲ. ಅಂತಹ ಮಹನೀಯರ ಆದರ್ಶಗಳನ್ನು ಪಾಲಿಸಬೇಕು. ಎಲ್ಲರೂ ಒಂದೇ ಎಂಬ ಭಾವನೆ ಹೊಂದಿ ಸಹಬಾಳ್ವೆ ಹೊಂದಬೇಕೆಂದು ಹೇಳಿದರು.

ಸರ್ಕಾರಿ ಸೌಲಭ್ಯ ಸದ್ಬಳಕೆಯಾಗಲಿ: ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಆನೇಕ  ಸೌಲಭ್ಯಗಳನ್ನು ನೀಡುತ್ತಿದೆ. ಈ ಎಲ್ಲಾ ಸೌಲಭ್ಯಗಳ ಸದ್ಬಳಕೆ ಪಡೆದು ಎಲ್ಲಾ ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರ ಬೇಕು. ಕವಿ ಸರ್ವಜ್ಞನ ತತ್ವ ಸಿದ್ಧಾಂತಗಳನ್ನು ಅರಿಯಬೇಕು ಎಂದರು. ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ.ರಘು ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್‌ ಗಂಗಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌ ಮಾತನಾಡಿದರು.

ಬೃಹತ್‌ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದ ಬಳಿ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸ್ತಬ್ದ ಚಿತ್ರಗಳ ಮೆರವಣಿಗೆಯನ್ನು ನಗರದ ಮುಖ್ಯ ರಸ್ತೆಗಳಲ್ಲಿ ನಡೆಸಲಾಯಿತು. ಮೆರವಣಿಗೆಯಲ್ಲಿ, ಡೊಳ್ಳು ಕುಣಿತ, ತಮಟೆ ವಾದ್ಯ ಮನಸೆಳೆದವು.

Advertisement

ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌, ತಹಶೀಲ್ದಾರ್‌ ಗಂಗಪ್ಪ, ಕ್ಷೇತ್ರ ಶಿಕ್ಷಣಾದಿಕಾರಿ ಮೊಹಮ್ಮದ್‌ ಖಲೀಲ್‌, ನಗರಸಭೆ ಸದಸ್ಯ ನಟರಾಜ್‌, ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ. ರಘು, ಕರವೇ ಅಂಬರೀಷ್‌, ಕುಂಬಾರರ ಸಂಘದ ತಾಲೂಕು ಅಧ್ಯಕ್ಷ ಎಸ್‌.ಕೃಷ್ಣಮೂರ್ತಿ, ಗೌರವಾಧ್ಯಕ್ಷ ಎನ್‌ ಶಂಕರಪ್ಪ, ಉಪಾಧ್ಯಕ್ಷ ಕೆ.ಎಂ.ಅಶ್ವತ್ಥನಾರಾಯಣ, ಕಾರ್ಯದರ್ಶಿ ನೆನ್ಕìಲ್ಲು ಮಂಜುನಾಥ, ಸಹಕಾರ್ಯದರ್ಶಿ ಆರ್‌. ಲಕ್ಷ್ಮೀನಾರಾಯಣ, ಖಜಾಂಚಿ ಚೇಳೂರು ಶ್ರೀರಾಮ್‌, ಪತ್ರಿಕಾ ಪ್ರತಿನಿದ್ಧಿ ಶ್ರೀರಾಮನಗರ ಶಂಕರ್‌, ಲೆಕ್ಕ ಪರಿಶೋಧಕ ಎನ್‌.ಬಾಲಕೃಷ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next