ಟೊಕಿಯೋ: ಜಪಾನ್ನ ಕವಾಸಕಿ ನಗರದ ಬಸ್ಸ್ಟಾಂಡ್ವೊಂದರಲ್ಲಿ ಮಂಗಳವಾರ ಬೆಳಗ್ಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಮನಬಂದಂತೆ ಇರಿತ ನಡೆಸಿದ ಪರಿಣಾಮ 6 ವರ್ಷ ಪ್ರಾಯದ ಶಾಲಾ ಬಾಲಕಿ ಸಾವನ್ನಪ್ಪಿದ್ದು 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಾಲಾ ಬಸ್ಗಾಗಿ ಕಾಯುತ್ತಿದ್ದ ಮಕ್ಕಳ ಮೇಲೆ ಆಗಂತುಕ ಚೂರಿಗಳಿಂದ ದಾಳಿ ನಡೆಸಿದ್ದಾನೆ. ಬಳಿಕ ತನ್ನ ಕತ್ತನ್ನು ಕೊಯ್ದುಕೊಂಡಿದ್ದಾನೆ. ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದರೂ ಇರಿತದ ಗಾಯದಿಂದ ತೀವ್ರ ರಕ್ತಸ್ರಾವವಾಗಿ ಆತನೂ ಸಾವನ್ನಪ್ಪಿದ್ದಾನೆ.
ಗಾಯಾಳುಗಳ ಪೈಕಿ 9 ಮಂದಿ ಶಾಲಾ ಮಕ್ಕಳಾಗಿದ್ದು, ಮೂವರು ವಯಸ್ಕರಾಗಿದ್ದಾರೆ ಎಂದು ವರದಿಯಾಗಿದೆ.
ಎರಡೂ ಕೈಗಳಲ್ಲಿ ಚೂರಿ ಹಿಡಿದು ಆಗಮಿಸಿದ 40 ರಿಂದ 50 ವರ್ಷ ಪ್ರಾಯದ ವ್ಯಕ್ತಿ ಮನ ಬಂದಂತೆ ದಾಳಿ ರನಡೆಸಿದ್ದಾನೆ.
ಘಟನೆ ಜಪಾನ್ನನ್ನು ಬೆಚ್ಚಿ ಬೀಳಿಸಿದೆ.ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.