Advertisement

ಇದೇ ಕೊನೆಯ ಪಂದ್ಯವೆಂದು ಭಾವಿಸಿ ಆಡಿದ ಮ್ಯಾಥ್ಯೂ ವೇಡ್‌

10:07 PM Nov 12, 2021 | Team Udayavani |

ದುಬಾೖ: ಘಾತಕ ವೇಗಿ ಅಫ್ರಿದಿ ಎಸೆತಗಳಿಗೆ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ಆಸ್ಟ್ರೇಲಿಯವನ್ನು ಗೆಲ್ಲಿಸಿದ ಮ್ಯಾಥ್ಯೂ ವೇಡ್‌ ಈಗ ದೊಡ್ಡ ಹೀರೋ. ಇದು ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ತನಗಿರುವ ಅಂತಿಮ ಅವಕಾಶವೇನೋ ಎಂದು ಭಾವಿಸಿ ಅವರು ಕ್ರೀಸ್‌ ಇಳಿದಿದ್ದರಂತೆ!

Advertisement

ನನ್ನ ಪಾಲಿಗೊಂದು ಅವಕಾಶ:

“ಕ್ರೀಸಿಗೆ ಬರುವಾಗ ನಾನು ತುಸು ನರ್ವಸ್‌ ಆಗಿದ್ದೆ. ವಿಶ್ವಕಪ್‌ ಬಳಿಕ ಟಿ20 ಕ್ರಿಕೆಟ್‌ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದರಿಂದ ಇದೇ ತನ್ನ ಕೊನೆಯ ಪಂದ್ಯವಾದೀತೆಂದು ಭಾವಿಸಿದ್ದೆ. ಪರಿಸ್ಥಿತಿ ಹಾಗಿತ್ತು.  ತಂಡವನ್ನು ಎತ್ತಿ ನಿಲ್ಲಿಸಿ ಗೆಲ್ಲಿಸುವ ಅವಕಾಶ ನನ್ನ ಮುಂದಿತ್ತು. ಇದರಲ್ಲಿ ಯಶಸ್ಸು ಸಾಧಿಸಿದ್ದೇ ಆದರೆ ದೇಶವನ್ನು ಪ್ರತಿನಿಧಿಸಿದ್ದು ನನ್ನ ಪಾಲಿಗೆ ಸಾರ್ಥಕವಾಗುತ್ತಿತ್ತು. ಕೊನೆಗೂ ಇದರಲ್ಲಿ ನಾನು ಯಶಸ್ಸು ಸಾಧಿಸಿದೆ. ಫೈನಲ್‌ ಪಂದ್ಯವೇ ನನ್ನ ಕೊನೆಯ ಟಿ20 ಪಂದ್ಯವಾಗಲಿದೆ’ ಎಂದು ವೇಡ್‌ ಹೇಳಿದರು.

ಅಫ್ರಿದಿ ಎಸೆತಗಳಿಗೆ ಸತತ 3 ಸಿಕ್ಸರ್‌ ಬಾರಿಸಿದ ಬಗ್ಗೆ ಪ್ರತಿಕ್ರಿಯಿಸಿದ ವೇಡ್‌, “ನಾವು ಅಫ್ರಿದಿಯನ್ನು ಟಾರ್ಗೆಟ್‌ ಮಾಡಲೇ ಇಲ್ಲ. ಆಗ ಸ್ಟೋಯಿನಿಸ್‌ ಮುನ್ನುಗ್ಗಿ ಬೀಸುತ್ತಿದ್ದರು. ಹೀಗಾಗಿ ಗುರಿ ಅಸಾಧ್ಯವಲ್ಲ ಎಂದು ಭಾವಿಸಿದೆವು. ನನಗೆ ಅದೃಷ್ಟ ಕೂಡ ಕೈಹಿಡಿಯಿತು’ ಎಂದರು. 33 ವರ್ಷದ ಮ್ಯಾಥ್ಯೂ ವೇಡ್‌, ಒಂದು ಹಂತದಲ್ಲಿ 3 ವರ್ಷ ಕಾಲ ಟಿ20 ಪಂದ್ಯವಾಡದೇ ಉಳಿದಿದ್ದರು!

ಅಂದು ಹಸ್ಸಿ  ಸಿಕ್ಸರ್‌:

Advertisement

2010ರ ಸೆಮಿಯಲ್ಲೂ ಆಸೀಸ್‌ ಇಂಥದೇ ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಪಾಕಿಸ್ಥಾನವನ್ನು ಹೊರ ದಬ್ಬಿತ್ತು. ಅಂದು 191 ರನ್‌ ಚೇಸಿಂಗ್‌ ವೇಳೆ ಮೈಕಲ್‌ ಹಸ್ಸಿ ಸಿಡಿದು ನಿಂತಿ ದ್ದರು. ಸಯೀದ್‌ ಅಜ್ಮಲ್‌ ಅವರ ಕೊನೆಯ ಓವರ್‌ನಲ್ಲಿ 18 ರನ್‌ ಅಗತ್ಯ ವಿದ್ದಾಗ 22 ರನ್‌ ಬಾರಿಸಿ 3 ವಿಕೆಟ್‌ ಜಯ ತಂದಿತ್ತಿದ್ದರು (6, 6, 4, 6).

ಸೆಮಿಫೈನಲ್‌ ಸ್ವಾರಸ್ಯ:

ಎರಡೂ ಸೆಮಿಫೈನಲ್‌ ಏಕರೀತಿಯ ಹೋರಾಟಕ್ಕೆ ಸಾಕ್ಷಿಯಾದದ್ದು ಕೂಟದ ಸ್ವಾರಸ್ಯವೆನಿಸಿದೆ. ಎರಡರಲ್ಲೂ ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ಗೆಲ್ಲುವ

ಅವಕಾಶ ಹೆಚ್ಚಿತ್ತು. ಆದರೆ ನೀಶಮ್‌-ಮಿಚೆಲ್‌ ಮತ್ತು ಸ್ಟೋಯಿನಿಸ್‌-ಮ್ಯಾಥ್ಯೂ

ವೇಡ್‌ ಕೊನೆಯ ಗಳಿಗೆಯಲ್ಲಿ ಸಿಡಿದು ಫ‌ಲಿತಾಂಶವನ್ನೇ ಬದಲಿಸಿದರು. ಎರಡೂ ಸಂದರ್ಭದಲ್ಲಿ ಸಿಕ್ಸರ್‌ ಸುರಿಮಳೆಯಾಯಿತು.ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳು 4 ವಿಕೆಟ್‌ ಕಳೆದುಕೊಂಡರೆ, ಚೇಸಿಂಗ್‌ ತಂಡಗಳೆರಡೂ 5 ವಿಕೆಟ್‌ ನಷ್ಟದಲ್ಲಿ, ಸರಿಯಾಗಿ 19 ಓವರ್‌ಗಳಲ್ಲಿ ಗುರಿ ಮುಟ್ಟಿದವು!

Advertisement

Udayavani is now on Telegram. Click here to join our channel and stay updated with the latest news.

Next