Advertisement

Prithvi Shah: ಮೊಣಕಾಲಿನ ಗಾಯ: ಪೃಥ್ವಿ ಶಾ ಹೊರಕ್ಕೆ

11:20 PM Aug 16, 2023 | Team Udayavani |

ಲಂಡನ್‌: ಗಾಯದ ಸಮಸ್ಯೆಯಿಂದಾಗಿ ಪೃಥ್ವಿ ಶಾ ಅವರು ನಾರ್ಥಂಪ್ಟನ್‌ಶೈರ್‌ ಪರ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಡರ್ಹಾಮ್‌ ವಿರುದ್ಧದ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಈ ಪಂದ್ಯದಲ್ಲಿ ಅವರು 76 ಎಸೆತ ಗಳಿಂದ 125 ರನ್‌ ಗಳಿಸಿದ್ದರು. ಇದರಿಂದಾಗಿ ನಾರ್ಥಂಪ್ಟನ್‌ಶೈರ್‌ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.

Advertisement

ಫೀಲ್ಡಿಂಗ್‌ ಮಾಡುತ್ತಿದ್ದ ವೇಳೆ ಪೃಥ್ವಿ ಶಾ ಅವರಿಗೆ ಗಾಯ ವಾಗಿತ್ತು. ಗಾಯದ ಸ್ಕ್ಯಾನ್‌ ವರದಿಯಲ್ಲಿ ಗಾಯವು ನಿರೀಕ್ಷಿಸಿದ ಕ್ಕಿಂತ ಗಂಭೀರವಾಗಿರುವುದು ಕಂಡುಬಂದಿದೆ. ಹೀಗಾಗಿ ಸ್ಪರ್ಧೆಯ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ ಎಂದು ನಾರ್ಥಂಪ್ಟನ್‌ಶೈರ್‌ನ ಪ್ರಕಟನೆ ತಿಳಿಸಿದೆ.

23ರ ಹರೆಯದ ಶಾ ಅವರು ವನ್‌ಡೆ ಕಪ್‌ಗಾಗಿ ನಡೆಯುತ್ತಿರುವ ಲಿಸ್ಟ್‌ “ಎ’ ಸ್ಫರ್ಧೆಯ ಕಿರು ಅವಧಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 429 ರನ್‌ ಪೇರಿಸಿ ಗಮನ ಸೆಳೆದಿದ್ದರು. ಸೋಮರ್ಸೆಟ್‌ ತಂಡದೆದುರಿನ ಪಂದ್ಯದಲ್ಲಿ ಅವರು 153 ಎಸೆತಗಳಿಂದ 244 ರನ್‌ ಸಿಡಿಸಿದ್ದರು. ಇದರಿಂದ ನಾರ್ಥಂಪ್ಟನ್‌ಶೈರ್‌ 87 ರನ್ನುಗಳಿಂದ ಗೆಲುವು ಸಾಧಿಸಿತ್ತು.
ಶಾ ಅವರಂತಹ ಆಟಗಾರ ನನ್ನು ಸ್ಪರ್ಧೆಯ ನಡುವೆ ಕಳೆದುಕೊಂಡಿರು ವುದು ತೀವ್ರವಾದ ನಿರಾಶೆ ಉಂಟು ಮಾಡಿದೆ. ಶಾ ತನ್ನ ಕಿರು ಅವಧಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು ಎಂದು ನಾರ್ಥಂಪ್ಟನ್‌ಶೈರ್‌ ತಂಡದ ಮುಖ್ಯ ಕೋಚ್‌ ಜಾನ್‌ ಸ್ಯಾಡ್ಲೆರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next