Advertisement

KMF ನಂದಿನಿ ಸಂಸ್ಥೆ ಕರ್ನಾಟಕದ ಅಸ್ಮಿತೆ: ಆಮೂಲ್‌ಗೆ ಪ್ರೋತ್ಸಾಹ ಕರವೇ ಖಂಡನೆ

07:34 PM Apr 08, 2023 | Team Udayavani |

ಗಂಗಾವತಿ: ಸಾವಿರಾರು ಜನರಿಗೆ ಉದ್ಯೋಗ ಮತ್ತು ಲಕ್ಷಾಂತರ ರೈತರ ಸಂಸ್ಥೆಯಾಗಿರುವ ಕೆಎಂಎಫ್ ನಂದಿನಿ ಸಂಸ್ಥೆ ಕರ್ನಾಟಕದ ಅಸ್ಮಿತೆಯಾಗಿದ್ದು ಗುಜರಾತ್ ಆಮೂಲ್ ಸಂಸ್ಥೆಗೆ ಪ್ರೋತ್ಸಹ ನೀಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಕರವೇ ಖಂಡಿಸುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Advertisement

ರಾಜ್ಯದಲ್ಲಿ ಅಮೂಲ್ ಹಾಲು ಮತ್ತು ಮೊಸರು ಕ್ವಿಕ್ ಕಾಮರ್ಸ್ ಪ್ಲಾಟ್ ಫಾರ್ಮ್ ಕೈ ಬಿಡಲು ಕರವೇ ಆಗ್ರಹಿಸುತ್ತದೆ. ಕರ್ನಾಟಕದಲ್ಲಿ ರೈತರ ಮನೆ ಮಾತಗಿರುವ ನಂದಿನಿ ಕೆಎಂಎಫ್ ಈಗಾಗಲೇ ಸಾಕಷ್ಟು ಬಡ ರೈತರಿಗೆ ಮತ್ತು ಅನೇಕ ಕೂಲಿ ಕಾರ್ಮಿಕರಿಗೆ ಬೆನ್ನೆಲು ಆಗಿ ನಿಂತಿದೆ. ಗೃಹ ಮಂತ್ರಿ ಅಮಿತ್ ಶಾ ಅವರು ಏಕ ಏಕಿಯಾಗಿ ಅಮುಲ್ ಹಾಲು, ಮೊಸರನ್ನು ರಾಜ್ಯದಲ್ಲಿ ಪರಿಚಿಸುವ ಸಲುವಾಗಿ ಕನ್ನಡಿಗರ ಮೇಲೆ ಒತ್ತಡ ಹೆರಿ ಇದಕ್ಕೆ ಸಂಪೂಣ ಬೆಂಬಲ ಕೊಡುತ್ತಿದ್ದಾರೆ. ಇದರ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡಿಗರು ಹಾಗೂ ಕನ್ನಡದ ರೈತರು ತೀವ್ರ ವಿರೋಧವಿದೆ. ಕೊಡಲೇ ಕೇಂದ್ರ ಸರಕಾರ ಕರ್ನಾಟಕದಿಂದ ಅಮೂಲ್ ಉತ್ಪಾದನಾ ಕರ್ನಾಟಕದ ಮೇಲೆ ಸಂಫೂರ್ಣವಾಗಿ ನಿಷೇದಿಸಬೇಕು ಇಲ್ಲದಿದ್ದರೆ ಕರವೇ ಕೇಂದ್ರ ಸರಕಾರದ ವಿರುದ್ದ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಹೋರಾಟ ನಡೆಸುತ್ತದೆ.

ಇದನ್ನೂ ಓದಿNandini ದೇಶದಲ್ಲೇ ನಂಬರ್ ಒನ್ ಬ್ರ್ಯಾಂಡ್ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ಅಮೂಲ್ ಹಾಲು ಮತ್ತು ಮೊಸರು ಕ್ವಿಕ್ ಕಾಮರ್ಸ್ ಪ್ಲಾಟ್ ಫಾರ್ಮ್ ಮನೆ-ಮನೆಗೆ ತಲುಪಲು ಹೊರಾಟಿದೆ ಇದಕ್ಕೆ ಕನ್ನಡಿಗರಿಂದ ತೀವ್ರ ಅಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ಹಾಲು ಮಹಾಮಂಡಲವು ಕೆ.ಎಂ.ಎಫ್ ರಾಜ್ಯದ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಪೂರೈಸುತ್ತಿದೆ. ಕೆಎಂಎಫ್ ಹಾಲು ಅಮೂಲ್ ಜೋತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವರ ಅಮಿತ್ ಶಾ ಪ್ರಸ್ತಾಪಿಸಿದ್ದರು ಅಮೂಲ್ ಹಾಲು ಮೊಸರನ್ನು ರಾಜ್ಯದಲ್ಲಿ ಪರಿಚಯಿಸುವ ಸಲುವಾಗಿಯೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಆದ್ದರಿಂದ ಕೂಡಲೇ ಇದನ್ನು ಕೈ ಬಿಡದಿದ್ದರೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿರುದ್ದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next