Advertisement

KMC Manipal: ಸುಧಾರಿತ ರೆಟಿನಲ್‌ ಇಮೇಜಿಂಗ್‌ ಟೆಕ್ನಾಲಜಿ: ಕ್ಲಾರಸ್‌ 700 ಕೆಮರಾ ಉದ್ಘಾಟನೆ

07:56 PM Aug 28, 2024 | Team Udayavani |

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗವು ಕ್ಲಾರಸ್‌ 700 – ಎಚ್‌ಡಿ ಅಲ್ಟ್ರಾ-ವೈಡ್‌ಫಿàಲ್ಡ್‌ ಫ‌ಂಡಸ್‌ ಇಮೇಜಿಂಗ್‌ ಮತ್ತು ಫ್ಲೋರೆಸ್ಸಿನ್‌ ಆಂಜಿಯೋಗ್ರಫಿ ಕೆಮರಾದ ಉದ್ಘಾಟನೆಯೊಂದಿಗೆ ರೋಗಿಗಳ ಆರೈಕೆಯಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ.

Advertisement

ಝೈಸ್‌ ಕಂಪನಿ ಅಭಿವೃದ್ಧಿಪಡಿಸಿದ ಈ ಅತ್ಯಾಧುನಿಕ ರೆಟಿನಲ್‌ ಇಮೇಜಿಂಗ್‌ ಸಿಸ್ಟಮ್ ವಿಶೇಷವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಕಣ್ಣಿನ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಭರವಸೆಯಿದೆ.

ಕ್ಲಾರಾಸ್‌ 700 ಸುಧಾರಿತ ಉಪಕರಣವನ್ನು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಉದ್ಘಾಟಿಸಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ರೋಗಿಗಳ ಆರೈಕೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ನಮ್ಮ ನೇತ್ರಶಾಸ್ತ್ರ ವಿಭಾಗಕ್ಕೆ ಕ್ಲಾರಾಸ್‌ 700 ಅನ್ನು ಸೇರಿಸುವುದು ಅತ್ಯುನ್ನತ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸಲಿದೆ ಎಂದರು.

ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಶೈಲಜಾ ಎಸ್‌. ಮಾತನಾಡಿ, ಕ್ಲಾರಾಸ್‌ 700 ಅಲ್ಟ್ರಾ-ವೈಡ್‌ಫೀಲ್ಡ್ ರೆಟಿನಾಲ್‌ ಕೆಮರಾ ಮತ್ತು ಪ್ರಯೋಜನದ ಕುರಿತು ಅವಲೋಕನ ನೀಡಿ, ಗುಣಮಟ್ಟದ ಚಿತ್ರದೊಂದಿಗೆ ನಿಜವಾದ ಬಣ್ಣದಲ್ಲಿ ಅಲ್ಟ್ರಾ-ವೈಡ್‌ಫೀಲ್ಡ್ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಇದು ಫ್ಲೋರೆಸೀನ್ ಆಂಜಿಯೋಗ್ರಫಿ ಸೇರಿದಂತೆ ಸಂಪೂರ್ಣ ಎಲ್ಲ ವಿಧಾನಗಳ ಚಿತ್ರಗಳನ್ನು ನಿಖರವಾಗಿ ನೀಡುತ್ತದೆ. ಈ ಮೂಲಕ ನೇತ್ರತಜ್ಞರು ಸಂಪೂರ್ಣ ರೆಟಿನಾದ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದರು.

ಈ ಸುಧಾರಿತ ಚಿತ್ರಣ ವ್ಯವಸ್ಥೆಯು ಅಕ್ಷಿಪಟಲದ ಸಾಟಿಯಿಲ್ಲದ ನೋಟವನ್ನು ಒದಗಿಸುತ್ತದೆ. ಕಣ್ಣಿನ ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ಮೇಲ್ವಿಚಾರಣೆಗೆ ನಿರ್ಣಾಯಕವಾದ ವಿವರವಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ಡೈಲೇಷನ್‌ (ವಿಸ್ತರಣೆ) ಇಲ್ಲದೆ ಸಮಗ್ರ ರೆಟಿನಾದ ಪರೀಕ್ಷೆಗಳಿಗೆ ನೆರವಾಗಲಿದೆ. ರೋಗಿಗಳಿಗೆ ಹೆಚ್ಚು ಆರಾಮದಾಯಕವಾಗಿಸುತ್ತದೆ ಎಂದರು.

Advertisement

ಕೆಎಂಸಿ ಮಣಿಪಾಲದ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ , ಕೆಎಂಸಿ ಮಣಿಪಾಲದ ಸಹ ಡೀನ್‌ ಡಾ| ನವೀನ್‌ ಎಸ್‌. ಸಾಲಿನ್ಸ್‌, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಯೋಗೀಶ್‌ ಕಾಮತ್‌ ಮತ್ತು ಹಿರಿಯ ನೇತ್ರ ತಜ್ಞರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next