Advertisement

ಸಿಎಂ ಪರಿಹಾರ ನಿಧಿಗೆ ಕೆಎಲ್‌ಇ 2 ಕೋಟಿ ರೂ.

03:30 PM May 07, 2020 | Suhan S |

ಬೆಳಗಾವಿ: ರಾಜ್ಯದ ಪ್ರತಿಷ್ಠಿತ ಬೆಳಗಾವಿಯ ಕೆಎಲ್‌ಇ ಸಂಸ್ಥೆಯು ಸಿ.ಎಂ. ಪರಿಹಾರ ನಿಧಿಗೆ 2 ಕೋಟಿ ರೂ. ಸಹಾಯ ನೀಡುವ ಮೂಲಕ ಕೊರೊನಾ ವೈರಸ್‌ ಹೋರಾಟಕ್ಕೆ ಕೈಜೋಡಿಸಿದೆ.

Advertisement

ಬುಧವಾರ ಬೆಂಗಳೂರಿನಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ‌ ಹಾಗೂ ರಾಜ್ಯಸಭಾ ಸದಸ್ಯರಾದ ಡಾ| ಪ್ರಭಾಕರ ಕೋರೆ ಅವರು ಮುಖ್ಯಮಂತ್ರಿಗಳ ಕೊವಿಡ್‌-19 ಪರಿಹಾರ ನಿಧಿಗೆ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ವತಿಯಿಂದ 2 ಕೋಟಿ ರೂ, ಅಂಕಲಿಯ ಡಾ| ಪ್ರಭಾಕರ ಕೋರೆ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಸ್ಥೆಯಿಂದ 11 ಲಕ್ಷ‌ ರೂ, ಚಿಕ್ಕೋಡಿಯ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ 5 ಲಕ್ಷ‌ ರೂ, ರಾಯಬಾಗದ ಸೌಂದತ್ತಿಯ ಶಿವಶಕ್ತಿ ಶುಗರ್ಸ್‌ದಿಂದ 5 ಲಕ್ಷ‌ ರೂ, ಬೆಳಗಾವಿಯ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್‌ದಿಂದ 5 ಲಕ್ಷ ರೂ, ಶ್ರೀ ಕ್ಷೇತ್ರಯಡೂರನಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಶ್ರೀಶೈಲ ಜಗದ್ಗುರು ಡಾ| ಚನ್ನರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಂದ 5 ಲಕÒ‌ ರೂ.ಗಳ ಡಿಡಿಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಹಾಮಾರಿ ಕೋವಿಡ್ 19 ವೈರಸ್‌ ಹೋರಾಟದಲ್ಲಿ ಕೈಜೋಡಿಸಿದ ಕೆಎಲ್‌ಇ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳನ್ನು ಅಭಿನಂದಿಸಿದರು. ಡಾ.ಪ್ರಭಾಕರಕೋರೆ ಮಾತನಾಡಿ, ಇಡೀ ವಿಶ್ವ ಕೋವಿಡ್  ವೈರಸ್‌ ಬಂಧನದಲ್ಲಿ ಸಿಲುಕಿಕೊಂಡು ತತ್ತರಿಸುತ್ತಿರುವುದು ಖೇದಕರ ಸಂಗತಿ. ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಈ ವೈರಸ್‌ ದಾಳಿಯಿಂದ ದೇಶ ಹಾಗೂ ರಾಜ್ಯ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರವು ಈ ವೈರಸ್‌ ವಿರುದ್ಧ ಹೋರಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಸಕಾಲಕ್ಕೆ ಕೈಗೊಂಡ ದಿಟ್ಟ ಕ್ರಮಗಳಿಂದ ರಾಜ್ಯದ ಜನತೆಯು ಸಂಕಷ್ಟದಿಂದ ಹೊರಬರುವಂತಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಸಚಿವ ರಮೇಶ ಜಾರಕಿಹೊಳಿ ಹಾಗೂ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next