Advertisement

ದೇಶಾದ್ಯಂತ ಕೆಎಲ್‌ಇ ಆಯುರ್‌ ಔಷಧಾಲಯ: ಕೋರೆ

03:57 PM Sep 03, 2022 | Team Udayavani |

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಬಿ.ಎಂ ಕಂಕಣವಾಡಿ ಆಯುರ್ವೇದ ಫಾರ್ಮಾದಲ್ಲಿ ಕಳೆದ 87 ವರ್ಷದಿಂದ ಆಯುರ್ವೇದ ಔಷಧಿ ಹಾಗೂ ಸಾಂಪ್ರದಾಯಿಕ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಒಳ್ಳೆಯ ಗುಣಮಟ್ಟದ ಆಯುರ್‌ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಕ್ರಮ ಕೈಕೊಳ್ಳಲಾಗಿದೆ.

Advertisement

ಈಗ ಇದಕ್ಕೆ ಪೂರಕವಾಗಿ ದೇಶಾದ್ಯಂತ ಕೆಎಲ್‌ಇ ಆಯುರ್‌ ಔಷಧಾಲಯಗಳನ್ನು ತೆರೆಯಲಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಪ್ರಭಾಕರ ಕೋರೆ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಕೆಎಲ್‌ಇ ಆಯುರ್‌ ಔಷಧಾಲಯ (ಆಯುರ್ವೇದಿಕ್‌ ಫಾರ್ಮಾಸಿ)ವನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದ ಅವರು, ಅಲೋಪಥಿಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿ ಭಾರತೀಯ ಸಾಂಪ್ರಾದಾಯಿಕ ಔಷಧಿ ಪದ್ಧತಿಯನ್ನು ನಾಶಪಡಿಸಿದ್ದೇವೆ. ಅದನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಅದಕ್ಕಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್ಯ ಮಂತ್ರಾಲಯಕ್ಕೆ ಅತೀ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದರು.

ಅಲೋಪಥಿಗೆ ಪರ್ಯಾಯವಾಗಿ ಹೊಮಿಯೋಪಥಿ ಬೆಳೆದಿದೆ. ಆದರೆ ಆಯುರ್ವೇದ ಹಿಂದೆ ಬಿದ್ದಿದೆ. ಆದ್ದರಿಂದ ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಕ್ಕಾಗಿ ದೇಶದ್ಯಾಂತ ಕೆಎಲ್‌ಇ ಆಯುರ್‌ ಔಷಧಾಲಯವನ್ನು ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು.

1938ರಲ್ಲಿ ಪ್ರಾರಂಭಿಸಲಾದ ಆಯುರ್ವೇದ ಫಾರ್ಮಾಸಿಗಾಗಿ ಅವಶ್ಯವಿರುವ ಗಿಡಮೂಲಿಕೆಗಳನ್ನು ಬಂಬರಗಾ ಗ್ರಾಮದ ಸುಮಾರು 16 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅದೇ ಪ್ರದೇಶದಲ್ಲಿ ಬೃಹತ್‌ ಆಯುರ್‌ ಫಾರ್ಮಾ ಹಾಗೂ ಸಂಶೋಧನಾ ಕೇಂದ್ರ ತಲೆ ಎತ್ತಲಿದೆ.

Advertisement

ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಆಯುರ್ವೇದಿಕ್‌ ಗಿಡಮೂಲಿಕೆಗಳಿದ್ದು, ಅವುಗಳ ಸಂಶೋಧನೆಗಾಗಿ ಕೆಎಲ್‌ಇ ಸಂಸ್ಥೆಯ ಬಿ ಎಂ ಕಂಕಣವಾಡಿ ಆಯುರ್ವೇದಿಕ್‌ ಮಹಾವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದ್ದು, ಅದರೊಂದಿಗೆ ಜೊತೆಗೂಡಿ ಆಯುರ್ವೇದ ಅಭಿವೃದ್ಧಿ ಹಾಗೂ ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಬಿ ಎಂ ಕಂಕಣವಾಡಿ ಆಯುರ್ವೇದಿಕ್‌ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ| ಸುಹಾಸಕುಮಾರ ಶೆಟ್ಟಿ ಮಾತನಾಡಿ, ಕೆಎಲ್‌ ಇ ಆಯುರ್‌ ಫಾರ¾ದಲ್ಲಿ 326 ತರಹದ ಔಷಧಗಳನ್ನು ತಯಾರಿಸುತ್ತಿದ್ದು, ಅದರಲ್ಲಿ 26 ಸಾಂಪ್ರದಾಯಿಕವಾದ ರೋಗತಡೆಗಟ್ಟುವ ಆಯುರ್ವೇದ ಪದ್ಧತಿಯ ಉತ್ಪನ್ನಗಳಿವೆ. ಈ ಉತ್ಪನ್ನಗಳನ್ನು ಮಾರಾಟ ಮಾಡುವ ಮೊದಲು ಆಯುಷ್ಯ ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುತ್ತದೆ. ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿಯನ್ನು ಖಾತ್ರಿಪಡಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ| ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಎಂ ವಿ ಜಾಲಿ, ಡಾ| ಎಚ್‌ ಬಿ ರಾಜಶೇಖರ, ಡಾ| ವಿ ಡಿ ಪಾಟೀಲ, ಡಾ| ಎನ್‌ ಎಸ್‌ ಮಹಾಂತಶೆಟ್ಟಿ, ಡಾ| ಆರಿಫ್‌ ಮಾಲ್ದಾರ, ಡಾ| ಸುನೀಲ ಜಲಾಲಪುರೆ, ಡಾ| ಪಿ ಜಿ ಜಾಡರ, ಡಾ| ಸವಿತಾ ಭೊಸಲೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next