Advertisement
ಬೆನ್ನು ನೋವಿನ ಕಾರಣದಿಂದ ವಿರಾಟ್ ಕೊಹ್ಲಿ ಪಂದ್ಯದಿಂದ ಹೊರಗುಳಿದ ಕಾರಣ ಕೆ ಎಲ್ ರಾಹುಲ್ ನಾಯಕತ್ವ ವಹಿಸಿದರು. ಈ ಮೂಲಕ ಭಾರತದ 34 ನೇ ಟೆಸ್ಟ್ ನಾಯಕರಾದರು.
Related Articles
Advertisement
ಮಿಂಚಿದ ರಾಹುಲ್, ಅಶ್ವಿನ್: ಭಾರತದ ಸರದಿಯಲ್ಲಿ ಮಿಂಚಿದ ಇಬ್ಬರು ಆಟಗಾರರೆಂದರೆ ಕೆ.ಎಲ್.ರಾಹುಲ್ ಮತ್ತು ಆರ್.ಅಶ್ವಿನ್. ದಿಢೀರ್ ನಾಯಕತ್ವದ ಒತ್ತಡದ ನಡುವೆಯೂ ಗಟ್ಟಿಯಾಗಿ ನಿಂತ ರಾಹುಲ್ 133 ಎಸೆತಗಳನ್ನು ನಿಭಾಯಿಸಿ ಭರ್ತಿ 50 ರನ್ ಹೊಡೆದರು. ಸಿಡಿಸಿದ್ದು 9 ಬೌಂಡರಿ. ಇದು ಭಾರತದ ಸರದಿಯ ಏಕೈಕ ಅರ್ಧ ಶತಕವಾಗಿತ್ತು. ರಾಹುಲ್ 46ನೇ ಓವರ್‌ನಲ್ಲಿ 5ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಬಳಿಕ ತಂಡವನ್ನು ಆಧರಿಸಿ ನಿಂತ ಆರ್. ಅಶ್ವಿನ್ 50 ಎಸೆತ ಎದುರಿಸಿ ಬಹುಮೂಲ್ಯ 46 ರನ್ ಹೊಡೆದರು. ಇದರಲ್ಲಿ 6 ಬೌಂಡರಿ ಸೇರಿತ್ತು.
ಕೈಕೊಟ್ಟ ಪೂಜಾರ, ರಹಾನೆ: ಕೈಕೊಟ್ಟವರಲ್ಲಿ ಪ್ರಮುಖರೆಂದರೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ. ನಾಯಕ ವಿರಾಟ್ ಕೊಹ್ಲಿ ಗೈರಲ್ಲಿ ನಿಂತು ಆಡಬೇಕಿದ್ದ ಈ ಅನುಭವಿ ಆಟಗಾರರು ತೀರಾ ಬೇಜವಾಬ್ದಾರಿಯಿಂದ ಆಡಿ ತಮಗೆ ಲಭಿಸಿದ ಮತ್ತೂಂದು ಅವಕಾಶವನ್ನು ವ್ಯರ್ಥಗೊಳಿಸಿದರು. ಪೂಜಾರ 33 ಎಸೆತ ಎದುರಿಸಿದರೂ ಗಳಿಸಿದ್ದು ಮೂರೇ ರನ್. ರಹಾನೆ ಅವರದು “ಶೂನ್ಯ ಸಾಧನೆ’. ಇವರಿಬ್ಬರನ್ನು ಡ್ನೂನ್ ಒಲಿವರ್ ಸತತ ಎಸೆತಗಳಲ್ಲಿ ಕೆಡವಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಬೇಟೆಯನ್ನೂ ಪೂರ್ತಿಗೊಳಿಸಿದರು. ಇವರಂತೆ ಮತ್ತೂಂದು ಅವಕಾಶ ಪಡೆದ ಶಾರ್ದೂಲ್ ಠಾಕೂರ್ ಕೂಡ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು