Advertisement

ಟೆಸ್ಟ್ ಸರಣಿಯಿಂದ K.L ರಾಹುಲ್‌ ಔಟ್‌

08:16 AM Nov 24, 2021 | Team Udayavani |

ಕಾನ್ಪುರ: ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ಗುರುವಾರ ಆರಂಭಗೊಳ್ಳಲಿರುವ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ ತಂಡಕ್ಕೆ ದೊಡ್ಡದೊಂದು ಆಘಾತ ಎದುರಾಗಿದೆ.

Advertisement

ತಂಡದ ತಾರಾ ಆರಂಭಕಾರ, ಲಯದಲ್ಲಿದ್ದ ಬ್ಯಾಟಿಗ ಕೆ.ಎಲ್‌.ರಾಹುಲ್‌ ಎಡತೊಡೆಯ ಸ್ನಾಯು ಸೆಳೆತಕ್ಕೆ ಒಳಗಾದ ಕಾರಣ ಟೆಸ್ಟ್‌ ಸರಣಿ ಯಿಂದಲೇ ಹೊರ ಬಿದ್ದಿದ್ದಾರೆ. ಇವರ ಬದಲು ಸೂರ್ಯ ಕುಮಾರ್‌ ಯಾದವ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಗ್ರೀನ್‌ ಪಾರ್ಕ್‌ ಸ್ಟೇಡಿಯಂ ನಲ್ಲಿ ಮಂಗಳವಾರ ನಡೆದ ಅಭ್ಯಾ ಸದ ವೇಳೆ ಬಹುತೇಕ ಎಲ್ಲ ಆಟಗಾರರು ಭಾಗವಹಿಸಿದ್ದರು. ಆದರೆ ಕೆ.ಎಲ್‌. ರಾಹುಲ್‌ ಮಾತ್ರ ಕಂಡು ಬಂದಿರಲಿಲ್ಲ. ಅವರಿನ್ನು ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಬಳಿಕ ದಕ್ಷಿಣ ಆಫ್ರಿಕಾ ಸರಣಿಗೆ ಸಿದ್ಧರಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಅಗರ್ವಾಲ್‌-ಗಿಲ್‌ ಆರಂಭಿಕರು: ರಾಹುಲ್‌ ಅನು ಪಸ್ಥಿತಿಯಲ್ಲಿ ಶುಭಮನ್‌ ಗಿಲ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಸೂರ್ಯ ಕುಮಾರ್‌ ಯಾದವ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ನ್ಯೂಜಿಲೆಂಡ್‌ ವಿರುದ್ಧ ಕೊಹ್ಲಿ, ರೋಹಿತ್‌, ಪಂತ್‌, ರಾಹುಲ್‌ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್‌ಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next