Advertisement

ನೆಟ್‌ನಲ್ಲಿ ಕೆ.ಎಲ್‌.ರಾಹುಲ್‌ ಕಠಿಣ ಅಭ್ಯಾಸ

09:36 AM Oct 26, 2022 | Team Udayavani |

ಸಿಡ್ನಿ: ಗುಣಮಟ್ಟದ ವೇಗದ ದಾಳಿಯನ್ನು ಸಮರ್ಥವಾಗಿ ನಿಭಾಯಿಸಲು ಒದ್ದಾಡುತ್ತಿರುವ ಕೆ.ಎಲ್‌.ರಾಹುಲ್‌ ಮಂಗಳವಾರ ನೆಟ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಅವರ ಅಭ್ಯಾಸವನ್ನು ಕೋಚಿಂಗ್‌ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಗಮನಿಸಿದರು. ನೆಟ್‌ ಅಭ್ಯಾಸಕ್ಕೆ ಹಾರ್ದಿಕ್‌ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಯಿತು.

Advertisement

ಭಾರತವು ಗುರುವಾರ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಎದುರಾಳಿ ತಂಡ ಬಲಿಷ್ಠವಲ್ಲದ ಕಾರಣ ಈ ಪಂದ್ಯಕ್ಕೆ ಭಾರತವು ಪಾಂಡ್ಯ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಅವರ ಬದಲಿಗೆ ದೀಪಕ್‌ ಹೂಡ ಅವರನ್ನು ಪ್ರಯತ್ನಿಸುವ ಸಾಧ್ಯತೆಯಿದೆ. ಹೂಡ ಅವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬಲ್ಲರು ಮತ್ತು ಪವರ್‌ಪ್ಲೇ ಓವರ್‌ಗಳಲ್ಲಿ ನಿಖರವಾಗಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಮುಂದಿನ ಪಂದ್ಯಕ್ಕೆ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೆ ಪಾಂಡ್ಯ ಸಹಿತ ತಂಡದ ಪ್ರಮುಖ ಬೌಲರ್‌ಗಳಿಗೆ ನೆಟ್‌ ಅಭ್ಯಾಸದಲ್ಲಿ ಪಾಲ್ಗೊಳ್ಳುವುದರಿಂದ ವಿಶ್ರಾಂತಿ ನೀಡಲಾಗಿದೆ. ನೆಟ್‌ ಅಭ್ಯಾಸದಲ್ಲಿ ಕೊಹ್ಲಿ ಸಹಿತ ರೋಹಿತ್‌ ಶರ್ಮ, ದಿನೇಶ್‌ ಕಾರ್ತಿಕ್‌, ರಿಷಭ್‌ ಪಂತ್‌, ದೀಪಕ್‌ ಹೂಡ ಮೊದಲಾದವರು ಭಾಗವಹಿಸಿದರು. ಸುಮಾರು ಎರಡು ತಾಸುಗಳ ಕಠಿಣ ಅಭ್ಯಾಸದಲ್ಲಿ ಪಾಲ್ಗೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next