Advertisement

ಮತ್ತೆ ಭಾರತ ತಂಡದ ಕದ ಬಡಿಯುತ್ತಿರುವ ಕೆ.ಎಲ್‌.ರಾಹುಲ್‌

07:18 PM Oct 04, 2019 | Team Udayavani |

ಕೆ.ಎಲ್‌.ರಾಹುಲ್‌ ಕೆಲವು ವರ್ಷಗಳ ಹಿಂದೆ ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಾಗ ಅವರು ಇಷ್ಟೆಲ್ಲ ಎತ್ತರಕ್ಕೆ ಬೆಳೆಯುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆರಂಭದಲ್ಲಿ ಭಾರತ ಟೆಸ್ಟ್‌ ತಂಡದಲ್ಲಿ ಖಾಯಂ ಆರಂಭಿಕರಾಗಿ ಬೆಳೆದ ಅವರು ಅದ್ಭುತ ಬ್ಯಾಟಿಂಗನ್ನೂ ಮಾಡಿದ್ದರು. ಮುಂದೆ ಐಪಿಎಲ್‌ನಲ್ಲಿ ಆಡಿ ಟಿ20, ಏಕದಿನ ತಂಡಕ್ಕೂ ಸರಿಯಾದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ತಂಡದಲ್ಲಿ ಅವರ ಸ್ಥಾನ ಅತ್ಯಂತ ಬಲವಾಗಿತ್ತು.

Advertisement

ಅಷ್ಟರಲ್ಲಿ ಎಡವಟ್ಟಾಯಿತು. ಈ ವರ್ಷ ಮಧ್ಯಭಾಗದಲ್ಲಿ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಹಾರ್ದಿಕ್‌ ಪಾಂಡ್ಯ ನೀಡಿದ ಕೆಲವು ಹೇಳಿಕೆಗಳು ರಾಹುಲ್‌ರಿಗೆ ಪಜೀತಿ ತಂದೊಡ್ಡಿ ಕೆಲವು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೊಳಗಾದರು. ಅಂತೂ ಇಂತೂ ಹೊರಬರುವಾಗ ಅವರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕಡೆಗೆ ಏಕದಿನ ವಿಶ್ವಕಪ್‌ಗೆ ಸ್ಥಾನ ಪಡೆದರು. ಅಲ್ಲಿ ಆರಂಭಿಕ ಬ್ಯಾಟ್ಸ್‌ ಮನ್‌ ಆಗಿ ಮಿಂಚಿದ್ದೂ ಮಾತ್ರವಲ್ಲ, ಹಳೆಯ ನೋವಿನಿಂದ ಹೊರಬಂದರು.

ದುರಾದೃಷ್ಟ, ಮುಂದೆ ಅವರು ವಿಂಡೀಸ್‌ ಪ್ರವಾಸದಲ್ಲಿ ಮಿಂಚಲೇ ಇಲ್ಲ. ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಕಡೆಗೆ ರಾಜ್ಯ ವಿಜಯ್‌ ಹಜಾರೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಲ್ಲಿ ಮಿಂಚುವುದು ಅವರಿಗೆ ಅನಿವಾರ್ಯ. ಅದನ್ನು ಆಡಿದ ಎರಡನೆ ಪಂದ್ಯದಲ್ಲಿ ಸಾಬೀತುಮಾಡಿದ್ದಾರೆ. 122 ಎಸೆತದಲ್ಲಿ 131 ರನ್‌ ಚಚ್ಚಿದ್ದಾರೆ. ಅಲ್ಲಿಗೆ ಅವರು ಮತ್ತೆ ರಾಷ್ಟ್ರೀಯ ತಂಡದ ಕದ ಬಡಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next