ಆದರೆ ರಾಹುಲ್ ತಂಡಕ್ಕೆ ಮರಳಲು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಒಂದು ಸಲಹೆ ನೀಡಿದ್ದಾರೆ. “ವಿ.ವಿ.ಎಸ್. ಲಕ್ಷ್ಮಣ್ ಮಾದರಿಯನ್ನು ರಾಹುಲ್ ಇಲ್ಲಿ ಅನುಸರಿಸಬೇಕು. ಒಮ್ಮೆ ಲಕ್ಷ್ಮಣ್ ತಂಡದಿಂದ ಹೊರಬಿದ್ದಾಗ, ದೇಶಿ ಕ್ರಿಕೆಟಿಗೆ ಮರಳಿ 1,400ರಷ್ಟು ರನ್ ಗಳಿಸಿದರು. ಬಳಿಕ ಹಿಂತಿರುಗಿ ಟೆಸ್ಟ್ ತಂಡದ ಅವಿಭಾಜ್ಯ ಆಟಗಾರನಾಗಿ ಬದಲಾದರು’ ಎಂದು ಪ್ರಸಾದ್ ಹೇಳಿದ್ದಾರೆ.
Advertisement
“ರಾಹುಲ್ ಒಬ್ಬ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ಲಯ ಕಳೆದುಕೊಂಡಿರುವುದರಿಂದ ತಂಡದಿಂದ ಕೈಬಿಡಲಾಗಿದೆ ಎಂದು ನಾವು ಅವರಿಗೆ ತಿಳಿಸಿದ್ದೇವೆ’ ಎಂದೂ ಪ್ರಸಾದ್ ಹೇಳಿದರು.