ಮುಂಬಯಿ: ಟೀಮ್ ಇಂಡಿಯಾದ ಉಪ ನಾಯಕ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆತಿಯಾ ಶೆಟ್ಟಿ ಡೇಟಿಂಗ್ ನಲ್ಲಿರುವುದು ಗೊತ್ತೇ ಇದೆ. ಇಬ್ಬರು ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ವದಂತಿಗಳು ಹಬ್ಬಿತ್ತು. ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ.
ಇತ್ತೀಚೆಗೆ ಬಿಸಿಸಿಐ ಬಳಿ ಕೆಎಲ್ ರಾಹುಲ್ ವೈಯಕ್ತಿಕ ಕಾರಣಕ್ಕೆ ಕೆಲವೊಂದು ದಿನ ಬ್ರೇಕ್ ಬೇಕೆಂದು ಕೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ, ಬಿಸಿಸಿಐ ಅಧಿಕಾರಿಯೊಬ್ಬರು “ಕೆಎಲ್ ರಾಹುಲ್ ವೈಯಕ್ತಿಕ ಕಾರಣದಿಂದ ಕೆಲವೊಂದಿಷ್ಟು ದಿನದ ಬಿಡುವುಬೇಕೆಂದು ಕೇಳಿದ್ದಾರೆ. ಹೀಗಾಗಿ ಅವರು ನ್ಯೂಜಿಲ್ಯಾಂಡ್ ಸರಣಿಯಲ್ಲಿ ಆಡುತ್ತಿಲ್ಲ. ಕುಟುಂಬದೊಂದಿಗೆ ಕೆಲಸವಿದೆ ಎಂದಿದ್ದಾರೆ. ಅವರು ನಿಶ್ಚಿತಾರ್ಥವಾಗುತ್ತರೋ, ಮದುವೆ ಆಗುತ್ತಾರೋ ಅದು ನನಗೆ ಗೊತ್ತಿಲ್ಲ. ಅವರು ಕುಟುಂಬದೊಂದಿಗೆ ಇರುತ್ತಾರೆ ಅನ್ನೋದನ್ನಷ್ಟೇ ನಾನೀಗ ಹೇಳಬಲ್ಲೆ ಎಂದು ಇನ್ ಸೈಡ್ ಸ್ಪೋರ್ಟ್ ಗೆ ಹೇಳಿದ್ದಾರೆ.
ಕೆಲ ಮಾಧ್ಯಮಗಳು ಜನವರಿ 2023, ರ ಮೊದಲ ವಾರದಲ್ಲಿ ಕೆಎಲ್ ರಾಹುಲ್ ಮದುವೆಯಾಗಲಿದ್ದಾರೆ. ಮದುವೆ ತಯಾರಿಯನ್ನೂ ಮಾಡುತ್ತಿದ್ದಾರೆ ಎಂದು ವರದಿ ಮಾಡಿವೆ.
ಕೆಎಲ್ ರಾಹುಲ್ ಇತ್ತೀಚೆಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ಢಾಕಾಕ್ಕೆ ತಲುಪಿದ್ದಾರೆ. ಆ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಶ್ರೀಲಂಕಾದ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಯನ್ನು ಆಡಲಿದೆ.ಮದುವೆಯ ಕಾರಣದಿಂದ ಶ್ರೀಲಂಕಾದ ವಿರುದ್ದ ಸರಣಿಯಿಂದ ಕೆಎಲ್ ರಾಹುಲ್ ಹೊರಗೆ ಉಳಿಯಲಿದ್ದಾರೆ ಎಂದು ವರದಿ ತಿಳಿಸಿದೆ.