Advertisement
ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ನೇಮಕ ಮಾಡಲಾಗಿದೆ. ನಿರೀಕ್ಷೆಯಂತೆ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ.
Related Articles
Advertisement
ಮುಂದಿನ ಪ್ರವಾಸಕ್ಕೆ ಬಿಸಿಸಿಐ ತಂಡ ಆಯ್ಕೆ ಮಾಡುವಾಗ ರೋಹಿತ್ ಶರ್ಮ ನಾಯಕತ್ವದ ಉಳಿವಿನ ಬಗ್ಗೆ ನಿರ್ಣಯವಾಗಲಿದೆ. ಈ ಹಿಂದೆ ವಿರಾಟ್ ಕೊಹ್ಲಿ ಜಾಗದಲ್ಲಿ ರೋಹಿತ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡುವಾಗ ಬಿಸಿಸಿಐಗೆ ಭಾರೀ ನಿರೀಕ್ಷೆಗಳಿದ್ದವು. ಆದರೆ ಅದರ ಲೆಕ್ಕಾಚಾರಕ್ಕೆ ತಕ್ಕಂತೆ ಯಾವುದೂ ನಡೆದಿಲ್ಲ. ಹಾಗೆಯೇ ಕೆ.ಎಲ್.ರಾಹುಲ್ ಅವರು ಸತತವಾಗಿ ಲಯ ಕಳೆದುಕೊಂಡು ಬ್ಯಾಟಿಂಗ್‌ನಲ್ಲಿ ಒದ್ದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಟೆಸ್ಟ್ ತಂಡದಿಂದಲೂ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಏಕದಿನಕ್ಕೆ ರಾಹುಲ್ ಕೀಪರ್: ರಾಹುಲ್ ಏಕದಿನ ತಂಡದ ಉಪ ನಾಯಕ ಸ್ಥಾನ ಕಳೆದುಕೊಂಡಿರುವುದು ಮಾತ್ರವಲ್ಲ, ವಿಕೆಟ್ ಕೀಪರ್ ಆಗಿ ನೇಮಿಸಲ್ಪಟ್ಟಿದ್ದಾರೆ! ಇವರಿಗೆ ಸಹಕಾರಿಯಾಗಿ ಇಶಾನ್ ಕಿಶನ್ ಇದ್ದಾರೆ. ಸದಾ ಅಸ್ಥಿರ ಪ್ರದರ್ಶನ ನೀಡುವ ರಿಷಭ್ ಪಂತ್ ಕೂಡ ಜಾಗ ಕಳೆದುಕೊಂಡಿದ್ದಾರೆ. ಇದು ರಿಷಭ್ ಭವಿಷ್ಯದ ಪ್ರಶ್ನೆಯೂ ಹೌದು.