ಬೆಂಗಳೂರು: ಸೋಮವಾರದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ವಿರುದ್ಧ ಕನ್ನಡಿಗ ರಾಹುಲ್ ನಾಯಕತ್ವದ ಎಲ್ ಎಸ್ ಜಿ ತಂಡವು ಆಡಲಿದೆ.
ಈ ಪಂದ್ಯದ ಕುರಿತು ಮಾತನಾಡಿದ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಅವರು ವೇಗವಾಗಿ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದಿದ್ದಾರೆ.
” ಕೆಎಲ್ ರಾಹುಲ್ ದೊಡ್ಡ ಇನ್ನಿಂಗ್ಸ್ ಆಡುವ ಗುರಿಯನ್ನು ಹೊಂದಿದ್ದಾರೆ, ಕೈಲ್ ಮೇಯರ್ಸ್, ಸ್ಟೊಯಿನಿಸ್ ಮತ್ತು ಡಿ ಕಾಕ್ ಅವರ ಉಪಸ್ಥಿತಿಯೊಂದಿಗೆ, ಎಲ್ಎಸ್ ಜಿ ಪ್ರಬಲ ಬ್ಯಾಟಿಂಗ್ ಲೈನಪ್ ಹೊಂದಿದೆ. ಆದ್ದರಿಂದ ಕೆಎಲ್ ರಾಹುಲ್ ಆರಂಭದಿಂದಲೇ ದೊಡ್ಡ ಹಿಟ್ ಗಳನ್ನು ಹೊಡೆಯಬಹುದು” ಎಂದು ಶಾಸ್ತ್ರಿ ಹೇಳಿದರು.
ಇದನ್ನೂ ಓದಿ:ದೀಪಾವಳಿ, ಪೊಂಗಾಲ್.. ಕಾಲಿವುಡ್ ಬಿಗ್ ಸಿನಿಮಾಗಳ ರಿಲೀಸ್ ಗೆ ಹಬ್ಬದ ದಿನಗಳೇ ಫಿಕ್ಸ್
ಈ ಬಾರಿಯ ಐಪಿಎಲ್ ನಲ್ಲಿ ಎಲ್ ಎಸ್ ಜಿ ಯ ಮೊದಲ ಮೂರು ಪಂದ್ಯಗಳಲ್ಲಿ ರಾಹುಲ್ 63 ರನ್ ಗಳಿಸಿದ್ದಾರೆ. ಹೆಚ್ಚುವರಿಯಾಗಿ, ಕೈಲ್ ಮೇಯರ್ಸ್ ಅವರು ದೊಡ್ಡ ಮೊತ್ತವನ್ನು ಗಳಿಸಲು ತಮ್ಮ ತಂಡಕ್ಕೆ ಬಲವಾದ ಅಡಿಪಾಯವನ್ನು ರಚಿಸಬಹುದು ಎಂದು ರವಿ ಶಾಸ್ತ್ರೀ ಹೇಳಿದ್ದಾರೆ. ಐಪಿಎಲ್ 2023 ರ ಮೊದಲ ಎರಡು ಪಂದ್ಯಗಳಲ್ಲಿ ಮೇಯರ್ಸ್ ಎರಡು ಅರ್ಧಶತಕಗಳನ್ನು ಗಳಿಸಿದರು.
ಕೆಎಲ್ ರಾಹುಲ್ ಅವರು ಆರ್ ಸಿಬಿ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. 13 ಪಂದ್ಯಗಳಲ್ಲಿ ಅವರು 610 ರನ್ ಗಳಿಸಿದ್ದು 147.7 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. ಆರ್ ಸಿಬಿ ವಿರುದ್ಧ ಪಂದ್ಯಗಳಲ್ಲಿ ಅವರು 35 ಸಿಕ್ಸರ್ ಮತ್ತು 45 ಬೌಂಡರಿಗಳನ್ನು ಬಾರಿಸಿದ್ದಾರೆ.