ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್ ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ.
ಬ್ಯಾಟರ್ ಉಸ್ಮಾನ್ ಖವಾಜಾ ಅವರ ಹೊಡೆದ ಚೆಂಡನ್ನು ಕೆಎಲ್ ರಾಹುಲ್ ಹಿಡಿದ ರೀತಿಯಿಂದ ಕಾಮೆಂಟರಿಯಲ್ಲಿ ರವಿ ಶಾಸ್ತ್ರಿ ಕೂಡಾ ಇಂಪ್ರೆಸ್ ಆದರು.
ಇದನ್ನೂ ಓದಿ:ಸಾಂಸ್ಕೃತಿಕ ಲೋಕದಲ್ಲಿ ಛಾಪು; ಬಲಿಪ ಭಾಗವತರ ನಿಧನಕ್ಕೆ ಪ್ರಧಾನಿ ಸಂತಾಪ
ಪಂದ್ಯದ 45ನೇ ಓವರ್ ನಲ್ಲಿ ಇನ್ನೊಂದು ತುದಿಯಲ್ಲಿ ವಿಕೆಟ್ ಗಳು ಉರುಳುತ್ತಲೇ ಇದ್ದರೂ ಒಂದೆಡೆಯಲ್ಲಿ ಖವಾಜಾ ದಿಟ್ಟವಾಗಿ ಆಡುತ್ತಿದ್ದರು. ಖವಾಜಾ ಅವರು 81 ರನ್ ಗಳಿಸಿದ್ದ ವೇಳೆ ರವೀಂದ್ರ ಜಡೇಜಾ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು; ಚೆಂಡು ಸ್ಕ್ವೇರ್ ಲೆಗ್ ಕಡೆಗೆ ತೆರಳಿದಾಗ ಅಲ್ಲಿದ್ದ ಕೆಎಲ್ ರಾಹುಲ್ ಅದ್ಭುತ ಡೈವ್ ಮೂಲಕ ಚೆಂಡನ್ನು ಹಿಡಿದರು. ರಾಹುಲ್ ಕ್ಯಾಚ್ ಕಂಡು ಖವಾಜಾ ಕೂಡಾ ದಿಗ್ಭ್ರಮೆಗೊಂಡರು.
ಈ ಕ್ಯಾಚ್ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಯಾಕೆಂದರೆ ಈ ವಿಕೆಟ್ ಮೂಲಕ ರವೀಂದ್ರ ಜಡೇಜಾ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 250ನೇ ವಿಕೆಟ್ ಪಡೆದರು. ಅಲ್ಲದೆ ಟೆಸ್ಟ್ ಇತಿಹಾಸದಲ್ಲಿ ವೇಗದಲ್ಲಿ 2,500 ರನ್ ಮತ್ತು 250 ವಿಕೆಟ್ ಗಳ ಪಡೆದ ಎರಡನೇ ಆಟಗಾರರಾದರು.