ದುಬೈ: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆ ಎಲ್ ರಾಹುಲ್ ಟೆಸ್ಟ್ ಶ್ರೇಯಾಂಕದಲ್ಲಿ 18 ಸ್ಲಾಟ್‌ಗಳ ಭರ್ಜರಿ ಮುನ್ನಡೆ ಸಾಧಿಸಿದ್ದು, ಐಸಿಸಿಯ ಇತ್ತೀಚಿನ ರ‍್ಯಾಂಕಿಂಗ್ ನಲ್ಲಿ ಬ್ಯಾಟರ್‌ಗಳ ಪೈಕಿ 31 ನೇ ರ‍್ಯಾಂಕ್ ಪಡೆದಿದ್ದಾರೆ.
ಅವರು ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಭಾರತವು ದಕ್ಷಿಣ ಆಫ್ರಿಕಾವನ್ನು 113 ರನ್‌ಗಳಿಂದ ಸೋಲಿಸಲು ಕೊಡುಗೆ ಸಲ್ಲಿಸಿದ್ದರು. ಸೆಂಚುರಿಯನ್‌ನಲ್ಲಿನ ಗೆಲುವಿನೊಂದಿಗೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಭಾಗವಾಗಿರುವ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ನವೆಂಬರ್ 2017 ರಲ್ಲಿ ಅವರು ಗಳಿಸಿದ ಎಂಟನೇ ರ‍್ಯಾಂಕನ್ನು ಹೊಂದಿರುವ ರಾಹುಲ್, ಮೊದಲ ಇನ್ನಿಂಗ್ಸ್‌ನಲ್ಲಿ 123 ರನ್ ಗಳಿಸಿದರು ಮತ್ತು ಮಯಾಂಕ್ ಅಗರವಾಲ್ (60ರನ್ ) ಅವರೊಂದಿಗೆ ಪ್ರಮುಖ 117 ರನ್‌ಗಳ ಆರಂಭಿಕ ಪಾಲುದಾರಿಕೆಯೊಂದಿಗೆ ಜತೆಯಾಟವಾಡಿದ್ದರು, ಭಾರತ ಗೆದ್ದ ಮೊದಲ ಏಷ್ಯಾದ ತಂಡವೆನಿಸಿಕೊಂಡಿತ್ತು. ಅಜಿಂಕ್ಯ ರಹಾನೆ ಬುಧವಾರ ಇತ್ತೀಚಿನ ಅಪ್‌ಡೇಟ್‌ನಲ್ಲಿ ಎರಡು ಸ್ಥಾನ ಮೇಲಕ್ಕೆ ಏರಿ 25 ನೇ ರ‍್ಯಾಂಕ್ ತಲುಪಿದ್ದಾರೆ.
ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಶ್ರೇಯಾಂಕದಲ್ಲಿ ಮೇಲಕ್ಕೆ ಏರಿದ ಇತರ ಭಾರತೀಯ ಆಟಗಾರರರು. ಪಂದ್ಯದಲ್ಲಿ ಐದು ವಿಕೆಟ್ ಪಡೆದ ನಂತರ ಬುಮ್ರಾ ಮೂರು ಸ್ಥಾನ ಮೇಲಕ್ಕೇರಿ 9ನೇ ರ‍್ಯಾಂಕ್ ನಲ್ಲಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ5 ವಿಕೆಟ್ ಸೇರಿದಂತೆ 8 ವಿಕೆಟ್ ಪಡೆದ ಶಮಿ ಅವರು 2 ಸ್ಥಾನ ಮೇಲಕ್ಕೇರಿ 17 ನೇ ರ‍್ಯಾಂಕ್ ತಲುಪಿದ್ದಾರೆ.
ದಕ್ಷಿಣ ಆಫ್ರಿಕಾ ನಾಯಕ ಮತ್ತು ಆರಂಭಿಕ ಆಟಗಾರ ಡೀನ್ ಎಲ್ಗರ್ ಎರಡನೇ ಇನ್ನಿಂಗ್ಸ್‌ನಲ್ಲಿ 77 ರನ್‌ಗಳ ನಂತರ ಎರಡು ಸ್ಥಾನ ಮೇಲಕ್ಕೇರಿ 14 ನೇ ರ‍್ಯಾಂಕ್ ತಲುಪಿದ್ದಾರೆ, ಆದರೆ ತೆಂಬಾ ಬವುಮಾ ಅವರು 52 ಮತ್ತು 35 ರನ್‌ಗಳೊಂದಿಗೆ 16 ಸ್ಥಾನ ಮೇಲಕ್ಕೇರಿ 39 ನೇ ರ‍್ಯಾಂಕ್ ತಲುಪಿದ್ದಾರೆ.
ಕಗಿಸೊ ರಬಾಡ ಒಂದು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೆ ತಲುಪಿದ್ದರೆ, ಅವರ ಸಹ ವೇಗದ ಬೌಲರ್ ಲುಂಗಿ ಎನ್‌ಗಿಡಿ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಗಳಿಸಿದ ನಂತರ 16 ಸ್ಲಾಟ್‌ಗಳನ್ನು ಪಡೆದು ಪಟ್ಟಿಯಲ್ಲಿ 30 ನೇ ಸ್ಥಾನದಲ್ಲಿದ್ದಾರೆ. ಎಡಗೈ ವೇಗದ ಬೌಲರ್ ಮಾರ್ಕೊ ಜೆನ್ಸನ್ 97 ನೇ ಸ್ಥಾನದಲ್ಲಿದ್ದು ಶ್ರೇಯಾಂಕವನ್ನು ಪ್ರವೇಶಿಸಿದ್ದಾರೆ.