ಢಾಕಾ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯವನ್ನು 2-0 ಅಂತರದಿಂದ ವಶಪಡಿಸಿಕೊಂಡಿ ಭಾರತ ಮತ್ತೊಂದು ಕ್ಲೀನ್ ಸ್ವೀಪ್ ಸಾಧನೆಗೈದಿದೆ. ಢಾಕಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಕೆಎಲ್ ರಾಹುಲ್ ಪಡೆ ಮೂರು ವಿಕೆಟ್ ಅಂತರದಿಂದ ಜಯಿಸಿತು.
ಪಂದ್ಯದ ಬಳಿಕ ಸಂಭ್ರಮಾಚರಣೆಯಲ್ಲಿ ಕೆಎಲ್ ರಾಹುಲ್ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಹಳೆಯ ಸಂಪ್ರದಾಯವನ್ನು ಮುಂದುವರಿಸಿದರು. ವಿಜೇತ ಟ್ರೋಫಿಯನ್ನು ಅನ್ ಕ್ಯಾಪ್ಡ್ ಆಟಗಾರ ಸೌರಭ್ ಕುಮಾರ್ ಗೆ ಹಸ್ತಾಂತರಿಸಿದರು.
ಇದನ್ನೂ ಓದಿ:ಇಲ್ಲಿ ಮತದಾರರೇ ಪ್ರಭುಗಳು..: ರೆಡ್ಡಿ ಹೊಸ ಪಕ್ಷ ಕುರಿತಂತೆ ಸಿ.ಟಿ ರವಿ ಪ್ರತಿಕ್ರಿಯೆ
ಮಹೇಂದ್ರ ಸಿಂಗ್ ಧೋನಿ ಅವರು ವಿಜೇತ ಟ್ರೋಫಿಯನ್ನು ತಂಡದ ಕಿರಿಯ ಸದಸ್ಯರಿಗೆ ನೀಡುವ ಸಂಪ್ರದಾಯ ಆರಂಭಿಸಿದ್ದರು.ಈ ಸಂಪ್ರದಾಯವನ್ನು ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಮುಂದುವರಿಸಿದ್ದರು.
ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಬದಲಿ ಆಟಗಾರನಾಗಿ ಕರೆಸಿಕೊಳ್ಳಲಾದ 29 ವರ್ಷದ ಸೌರಭ್ ಗೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ.
ಸಿಲ್ಹೆಟ್‌ನಲ್ಲಿ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ವಿರುದ್ಧ ಭಾರತ ಎ ಪರ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಒಂಬತ್ತು ವಿಕೆಟ್ ಕಬಳಿಸಿದರು.