Advertisement

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

08:46 PM Oct 21, 2021 | Team Udayavani |

ಹೊಸದಿಲ್ಲಿ: ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಹೊಂದಿರುವ ಬಹುದೊಡ್ಡ ಆಸ್ತಿ ಎಂದರೆ ಅದು ಕೆ.ಎಲ್‌. ರಾಹುಲ್‌ ಎಂಬುದಾಗಿ ಭಾರತ ತಂಡದ ಮಾಜಿ ನಾಯಕ ಕಪಿಲ್‌ದೇವ್‌ ಹೇಳಿದ್ದಾರೆ.

Advertisement

“ರಾಹುಲ್‌ ಅವರ ಬ್ಯಾಟಿಂಗ್‌ ವೀಕ್ಷಿಸುವುದೆಂದರೆ ನನಗೆ ಬಲು ಪ್ರೀತಿ. ತಮ್ಮ ಹೊಡೆತಗಳ ಮೇಲೆ ಅವರಿಗೆ ಅಪಾರ ವಿಶ್ವಾಸವಿದೆ. ಜತೆಗೆ ಅನುಭವ ಕೂಡ ಬೆನ್ನಿಗೆ ನಿಂತಿದೆ. ಹೀಗಾಗಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ರಾಹುಲ್‌ ಟೀಮ್‌ ಇಂಡಿಯಾದ ಬಹುದೊಡ್ಡ ಆಸ್ತಿ ಆಗಲಿದ್ದಾರೆ. ಅವರ ಆಟವನ್ನು ನಾನು ಸದಾ ಆನಂದಿಸಿದ್ದೇನೆ. ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ಗೆ ಅವರು ದೊಡ್ಡ ಕೊಡುಗೆ ನೀಡಲಿದ್ದಾರೆ’ ಎಂದು ಕಪಿಲ್‌ದೇವ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next