ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಮತ್ತು ಹಾಲಿ ನಾಯಕರ ನಡುವೆ ಇಂದು ಹಣಾಹಣಿ ನಡೆಯುತ್ತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ಮತ್ತು ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡಗಳು ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದೆ.
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗಿ ಆನ್ರಿಚ್ ನೋರ್ಜೆ ಬದಲಿಗೆ ಖಲೀಲ್ ಅಹಮದ್ ಸ್ಥಾನ ಪಡೆದಿದ್ದಾರೆ. ಕೆಕೆಆರ್ ಹಿಂದಿನ ಪಂದ್ಯದಲ್ಲಿ ಆಡಿದ ತಂದವನ್ನೇ ಕಣಕ್ಕಿಳಿಸಿದೆ.
ಕೋಲ್ಕತ ನಾಲ್ಕರಲ್ಲಿ ಮೂರನ್ನು ಗೆದ್ದು ಟೇಬಲ್ ಟಾಪರ್ ಎನಿಸಿದೆ. ಇನ್ನೊಂದೆಡೆ ಡೆಲ್ಲಿ ಮೂರರಲ್ಲಿ ಒಂದನ್ನಷ್ಟೇ ಜಯಿಸಿ 7ನೇ ಸ್ಥಾನಿಯಾಗಿದೆ. ಹೀಗಾಗಿ ನಾಯಕತ್ವದ ವಿಷಯದಲ್ಲಿ ಐಯ್ಯರ್ ಬಹಳ ಮೇಲ್ಮಟ್ಟದಲ್ಲಿದ್ದಾರೆ. 2020ರಲ್ಲಿ ಡೆಲ್ಲಿಯನ್ನು ಮೊದಲ ಸಲ ಐಪಿಎಲ್ ಫೈನಲ್‌ಗೆ ಕೊಂಡೊಯ್ದ ಹೆಗ್ಗಳಿಕೆಯೂ ಇವರದಾಗಿತ್ತು. ಆದರೂ ಡೆಲ್ಲಿ ಫ್ರಾಂಚೈಸಿ ಇವರನ್ನು ಉಳಿಸಿಕೊಳ್ಳಲಿಲ್ಲ. ಮೆಗಾ ಹರಾಜಿನಲ್ಲಿ ಕೋಲ್ಕತ ಪಾಲಾದರು.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರದ ರಿಲೀಸ್ ದಿನಾಂಕ ಘೋಷಣೆ
ಶ್ರೇಯಸ್ ಐಯ್ಯರ್ ಸಾರಥ್ಯದಲ್ಲಿ ಕೋಲ್ಕತ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ಸೋತದ್ದು ಬೆಂಗಳೂರು ವಿರುದ್ಧ ಮಾತ್ರ. ಉಳಿದಂತೆ ಚಾಂಪಿಯನ್ ಚೆನ್ನೈಯನ್ನು ಉದ್ಘಾಟನಾ ಪಂದ್ಯದಲ್ಲೇ 6 ವಿಕೆಟ್‌ಗಳಿಂದ ಮಣಿಸಿ ಮೆರೆಯಿತು. ಬಳಿಕ ಪಂಜಾಬ್‌ಗ 6 ವಿಕೆಟ್, ಮುಂಬೈಗೆ 5 ವಿಕೆಟ್ ಸೋಲುಣಿಸಿತು. ಮುಂಬೈ ವಿರುದ್ಧ ಪ್ಯಾಟ್ ಕಮಿನ್ಸ್ ತೋರ್ಪಡಿಸಿದ ಬ್ಯಾಟಿಂಗ್ ಅಬ್ಬರ ಕೋಲ್ಕತಕ್ಕೆ ಮುಂದಿನ ಹಲವು ಪಂದ್ಯಗಳಿಗೆ ಬೇಕಾಗುವಷ್ಟು ಆತ್ಮವಿಶ್ವಾಸವನ್ನು ಮೊಗೆದು ಕೊಟ್ಟಿದೆ.
ತಂಡಗಳು
ಡೆಲ್ಲಿ: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್, ರೋಮನ್ ಪೊವೆಲ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್.
ಕೆಕೆಆರ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಂ, ವರುಣ್ ಚಕ್ರವರ್ತಿ.