Advertisement

ತವರಿನಲ್ಲಿ ಕೆಕೆಆರ್‌ ಜಯಭೇರಿ

06:00 AM May 24, 2018 | |

ಕೋಲ್ಕತಾ: ಬುಧವಾರ ರಾತ್ರಿ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಎಲಿಮಿನೇಟರ್‌ ಸುತ್ತಿನ ಪಂದ್ಯದಲ್ಲಿ  25 ರನ್ನುಗಳ ಜಯ ಸಾಧಿಸಿದ ಆತಿಥೇಯ ಕೋಲ್ಕತಾ ನೈಟ್‌ರೈಡರ್ ಪಡೆ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಪಂದ್ಯಾವಳಿಯಿಂದ ಹೊರದಬ್ಬಿದೆ. ಶುಕ್ರವಾರ ನಡೆಯುವ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೆಕೆಆರ್‌-ಸನ್‌ರೈಸರ್ ಹೈದರಾಬಾದ್‌ ಮುಖಾಮುಖೀಯಾಗಲಿದ್ದು, ಇಲ್ಲಿ ಗೆದ್ದ ತಂಡ 
ಫೈನಲ್‌ಗೆ ಲಗ್ಗೆ ಇಡಲಿದೆ.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 7 ವಿಕೆಟಿಗೆ 169 ರನ್‌ ಗಳಿಸಿ ಸವಾಲೊಡ್ಡಿದರೆ, ರಾಜಸ್ಥಾನ್‌ ರಾಯಲ್ಸ್‌ ಉತ್ತಮ ಆರಂಭದ ಹೊರ ತಾಗಿಯೂ ಕೊನೆಯ ಹಂತದಲ್ಲಿ ಒತ್ತಡಕ್ಕೆ ಸಿಲುಕಿ 4 ವಿಕೆಟಿಗೆ 144 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಅಜಿಂಕ್ಯ ರಹಾನೆ (46)-ರಾಹುಲ್‌ ತ್ರಿಪಾಠಿ (20) ಮೊದಲ ವಿಕೆಟಿಗೆ 47 ರನ್‌ ಒಟ್ಟುಗೂಡಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಬಳಿಕ ಸಂಜು ಸ್ಯಾಮ್ಸನ್‌ 50 ರನ್‌ ಬಾರಿಸಿ ಗೆಲುವಿನಾಸೆ ಚಿಗುರಿಸಿದರು (38 ಎಸೆತ, 4 ಬೌಂಡರಿ, 2 ಸಿಕ್ಸರ್‌). ಆದರೆ ಸ್ಯಾಮ್ಸನ್‌ ಔಟಾದೊಡನೆ ಕೆಕೆಆರ್‌ ಕೈ ಮೇಲಾಯಿತು. ವಿಕೆಟ್‌ ಕೈಲಿದ್ದರೂ ರನ್‌ ಪೇರಿಸಲು ವಿಫ‌ಲವಾದ ರಾಜಸ್ಥಾನ್‌ ಸೋಲನ್ನು ಮೈಮೇಲೆ ಎಳೆದುಕೊಂಡಿತು. 

ಕೆಕೆಆರ್‌ ಆಘಾತಾಕರಿ ಆರಂಭ
ಕೆಕೆಆರ್‌ ಆರಂಭ ಆಘಾತಕಾರಿಯಾಗಿತ್ತು. ಕೆ. ಗೌತಮ್‌ ಅವರ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದ ಸುನೀಲ್‌ ನಾರಾಯಣ್‌ ಮುಂದಿನ ಎಸೆತದಲ್ಲೇ ಸ್ಟಂಪ್ಡ್ ಆಗಿ ನಿರ್ಗಮಿಸಿದರು. ತಮ್ಮ ಮುಂದಿನ ಓವರಿನ ಮೊದಲ ಎಸೆತದಲ್ಲೇ ರಾಬಿನ್‌ ಉತ್ತಪ್ಪ ವಿಕೆಟ್‌ ಹಾರಿಸಿದ ಗೌತಮ್‌ ಅಪಾಯಕಾರಿಯಾಗಿ ಗೋಚರಿಸಿದರು. ಸ್ಕೋರ್‌ 24ಕ್ಕೆ ತಲಪುವಷ್ಟರಲ್ಲಿ ನಿತೀಶ್‌ ರಾಣ ವೇಗಿ ಆರ್ಚರ್‌ ಮೋಡಿಗೆ ಸಿಲುಕಿದರು. ಒಂದೆಡೆ ನಿಲ್ಲುವ ಸೂಚನೆ ನೀಡಿದ್ದ ಆರಂಭಕಾರ ಕ್ರಿಸ್‌ ಲಿನ್‌ ಅವರಿಗೆ ಶ್ರೇಯಸ್‌ ಗೋಪಾಲ್‌ ಬಲೆ ಬೀಸಿದರು. ಹೀಗೆ ಕೆಕೆಆರ್‌ನ ಮೊದಲ 4 ವಿಕೆಟ್‌ಗಳಲ್ಲಿ 3 ಕನ್ನಡಿಗರ ಪಾಲಾಯಿತು.

8 ಓವರ್‌ ಮುಕ್ತಾಯಕ್ಕೆ ಆತಿಥೇಯ ಪಡೆ 4ಕ್ಕೆ 51 ರನ್‌ ಮಾಡಿ ಚಡಪಡಿಸುತ್ತಿತ್ತು. ಅನಂತರವೇ ರನ್‌ಗತಿಯಲ್ಲಿ ಪ್ರಗತಿ ಕಂಡುಬಂತು. ನಾಯಕ ದಿನೇಶ್‌ ಕಾರ್ತಿಕ್‌, ಶುಭಮನ್‌ ಗಿಲ್‌ ಮತ್ತು ಆ್ಯಂಡ್ರೆ ರಸೆಲ್‌ ಸೇರಿಕೊಂಡು ರಾಜಸ್ಥಾನ್‌ ಬೌಲರ್‌ಗಳ ಮೇಲೆರಗಿದರು. 

Advertisement

ಕಪ್ತಾನನ ಆಟವಾಡಿದ ಕಾರ್ತಿಕ್‌ ಕೆಕೆಆರ್‌ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಕಾರ್ತಿಕ್‌ ಗಳಿಕೆ 38 ಎಸೆತಗಳಿಂದ 52 ರನ್‌. ಸಿಡಿಸಿದ್ದು 4 ಬೌಂಡರಿ, 2 ಸಿಕ್ಸರ್‌. ಕಾರ್ತಿಕ್‌-ಗಿಲ್‌ ಜೋಡಿಯಿಂದ 5ನೇ ವಿಕೆಟಿಗೆ 55 ರನ್‌ ಒಟ್ಟುಗೂಡಿತು. ಗಿಲ್‌ 17 ಎಸೆತಗಳಿಂದ 28 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್‌ 25 ಎಸೆತಗಳಿಂದ 49 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಕೆರಿಬಿಯನ್‌ ಕ್ರಿಕೆಟಿಗನ ಅಬ್ಬರದ ವೇಳೆ 5 ಸಿಕ್ಸರ್‌, 3 ಫೋರ್‌ ಸಿಡಿಯಲ್ಪಟ್ಟಿತು.ರಾಜಸ್ಥಾನ್‌ ಪರ ಕೆ. ಗೌತಮ್‌, ಜೋಫ‌ ಆರ್ಚರ್‌, ಬೆನ್‌ ಲವಿನ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್

ಸುನೀಲ್‌ ನಾರಾಯಣ್‌    ಸ್ಟಂಪ್ಡ್ ಕ್ಲಾಸೆನ್‌ ಬಿ ಗೌತಮ್‌    4
ಕ್ರಿಸ್‌ ಲಿನ್‌    ಸಿ ಮತ್ತು ಬಿ ಗೋಪಾಲ್‌    18
ರಾಬಿನ್‌ ಉತ್ತಪ್ಪ    ಸಿ ಮತ್ತು ಬಿ ಗೌತಮ್‌    3
ನಿತೀಶ್‌ ರಾಣ    ಸಿ ಉನಾದ್ಕತ್‌ ಬಿ ಆರ್ಚರ್‌    3
ದಿನೇಶ್‌ ಕಾರ್ತಿಕ್‌    ಸಿ ರಹಾನೆ ಬಿ ಲವಿನ್‌    52
ಶುಭಮನ್‌ ಗಿಲ್‌    ಸಿ ಕ್ಲಾಸೆನ್‌ ಬಿ ಆರ್ಚರ್‌    28
ಆ್ಯಂಡ್ರೆ ರಸೆಲ್‌    ಔಟಾಗದೆ    49
ಸ್ಕ್ಯಾಂಟಲ್‌ಬರಿ    ಸಿ ಆರ್ಚರ್‌ ಬಿ ಲವಿÉನ್‌    2
ಪೀಯೂಷ್‌ ಚಾವ್ಲಾ    ಔಟಾಗದೆ    0

ಇತರ        10
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    169
ವಿಕೆಟ್‌ ಪತನ: 1-4, 2-17, 3-24, 4-51, 5-106, 6-135, 7-164.

ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        3-0-15-2
ಜೋಫ‌ ಆರ್ಚರ್‌        4-0-33-2
ಜೈದೇವ್‌ ಉನಾದ್ಕತ್‌        2-0-33-0
ಐಶ್‌ ಸೋಧಿ        4-0-15-0
ಶ್ರೇಯಸ್‌ ಗೋಪಾಲ್‌        4-0-34-1
ಬೆನ್‌ ಲವಿನ್‌        3-0-35-2

ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ    ಸಿ ಮತ್ತು ಬಿ ಯಾದವ್‌    46
ರಾಹುಲ್‌ ತ್ರಿಪಾಠಿ    ಸಿ ಮತ್ತು ಬಿ ಚಾವ್ಲಾ    20
ಸಂಜು ಸ್ಯಾಮ್ಸನ್‌    ಸಿ ಸ್ಕ್ಯಾಂಟಲ್‌ಬರಿ ಬಿ ಚಾವ್ಲಾ    50
ಹೆನ್ರಿಚ್‌ ಕ್ಲಾಸೆನ್‌    ಔಟಾಗದೆ    18
ಸ್ಟುವರ್ಟ್‌ ಬಿನ್ನಿ    ಸಿ ಲಿನ್‌ ಬಿ ಪ್ರಸಿದ್ಧ್ ಕೃಷ್ಣ    0
ಕೆ. ಗೌತಮ್‌    ಔಟಾಗದೆ    9

ಇತರ        1
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)    144
ವಿಕೆಟ್‌ ಪತನ: 1-47, 2-109, 3-126, 4-130.

ಬೌಲಿಂಗ್‌: 
ಆ್ಯಂಡ್ರೆ ರಸೆಲ್‌        3-0-22-0
ಎಂ. ಪ್ರಸಿದ್ಧ್ ಕೃಷ್ಣ        4-0-28-1
ಪೀಯೂಷ್‌ ಚಾವ್ಲಾ        4-0-28-2
ಸುನೀಲ್‌ ನಾರಾಯಣ್‌        4-0-39-0
ಕುಲದೀಪ್‌ ಯಾದವ್‌        4-0-18-1
ಸ್ಕ್ಯಾಂಟಲ್‌ಬರಿ ಸಿಯರ್ಲೆಸ್‌    1-0-13-0

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌

Advertisement

Udayavani is now on Telegram. Click here to join our channel and stay updated with the latest news.

Next