Advertisement

ಜೈಪುರದಲ್ಲಿ ಜಯ ಸಾಧಿಸಿದ ಕೆಕೆಆರ್‌

11:17 PM Apr 07, 2019 | Sriram |

ಜೈಪುರ: ರವಿವಾರ ರಾತ್ರಿಯ ತವರಿನ ಐಪಿಎಲ್‌ ಮುಖಾಮುಖೀಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಸುಳಿಗೆ ಸಿಲುಕಿದೆ. ಕೋಲ್ಕತಾ ನೈಟ್‌ರೈಡರ್ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ರಹಾನೆ ಪಡೆ ಕೇವಲ 3 ವಿಕೆಟ್‌ ಕಳೆದುಕೊಂಡರೂ ಗಳಿಸಿದ್ದು 139 ರನ್‌ ಮಾತ್ರ. ಈ ಸಾಮಾನ್ಯ ಮೊತ್ತವನ್ನು ಸುಲಭದಲ್ಲಿ ಬೆನ್ನಟ್ಟಿದ ಕೆಕೆಆರ್‌ 13.5 ಓವರ್‌ಗಳಲ್ಲಿ 2 ವಿಕೆಟಿಗೆ 140 ರನ್‌ ಗಳಿಸಿತು. ಸುನೀಲ್‌ ನಾರಾಯಣ್‌ ಮತ್ತು ಕ್ರಿಸ್‌ ಲಿನ್‌ ಸೇರಿಕೊಂಡು ತವರಿನ ಬೌಲರ್‌ಗಳನ್ನು ದಂಡಿಸುವ ಮೂಲಕ ಕೋಲ್ಕತಾ ಸುಲಭ ಗೆಲುವು ಸಾಧಿಸಿತು. ಸುನೀಲ್‌ ಮತ್ತು ಲಿನ್‌ ಮೊದಲ ವಿಕೆಟಿಗೆ 91 ರನ್ನುಗಳ ಜತೆಯಾಟ ಆಡಿದರು. ಲಿನ್‌ ಅವರಿಂದ ಅರ್ಧಶತಕ (50) ದಾಖಲಾಯಿತು.

ಈ ಎರಡೂ ತಂಡಗಳು ಹಿಂದಿನ ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಮಣಿಸಿದ ಖುಷಿಯಲ್ಲಿ ಆಡಲಿಳಿದ್ದಿವು. ಆದರೆ ರಾಜಸ್ಥಾನ್‌ ಬ್ಯಾಟಿಂಗ್‌ನಲ್ಲಿ ಈ ಖುಷಿ ಗೋಚರಿಸಲಿಲ್ಲ. ನಾಯಕ ಅಜಿಂಕ್ಯ ರಹಾನೆ ಕೇವಲ 5 ರನ್‌ ಮಾಡಿ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಇಲ್ಲಿಂದ ಮುಂದೆ ಜಾಸ್‌ ಬಟ್ಲರ್‌ ಮತ್ತು ಸ್ಟೀವನ್‌ ಸ್ಮಿತ್‌ ಇನ್ನಿಂಗ್ಸ್‌ ಆಧರಿಸತೊಡಗಿದರೂ ಇವರ ಆಟದಲ್ಲಿ ಅಬ್ಬರವಿರಲಿಲ್ಲ. ರಹಾನೆ ನಿರ್ಗಮನದ ಬಳಿಕ 2ನೇ ಓವರಿನಲ್ಲೇ ಬ್ಯಾಟ್‌ ಹಿಡಿದು ಬಂದ ಸ್ಮಿತ್‌ ಅಜೇಯರಾಗಿಯೇ ಉಳಿದರು. ಕಾಂಗರೂ ಆಟಗಾರನ ಗಳಿಕೆ ಅಜೇಯ 73 ರನ್‌. ಇದಕ್ಕಾಗಿ 59 ಎಸೆತ ಎದುರಿಸಿದ ಸ್ಮಿತ್‌, 7 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.

ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಅವರಿಂದಲೂ ಬಿರುಸಿನ ಆಟ ಸಾಧ್ಯವಾಗಲಿಲ್ಲ. 37 ರನ್ನಿಗೆ ಅವರು 34 ಎಸೆತ ತೆಗೆದುಕೊಂಡರು. ಇದರಲ್ಲಿ 5 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಬಟ್ಲರ್‌-ಸ್ಮಿತ್‌ ಸೇರಿ ದ್ವಿತೀಯ ವಿಕೆಟಿಗೆ 10.4 ಓವರ್‌ಗಳಿಂದ 72 ರನ್‌ ಪೇರಿಸಿದರು. ಈ ಜೋಡಿಯನ್ನು ಮುರಿದವರು ಹ್ಯಾರಿ ಗರ್ನಿ. ಆಗ 12ನೇ ಓವರ್‌ ಜರಿಯಲ್ಲಿತ್ತು.

ಇಲ್ಲಿಂದ ಮುಂದೆ ರಾಹುಲ್‌ ತ್ರಿಪಾಠಿ (6) ಮತ್ತು ಬೆನ್‌ ಸ್ಟೋಕ್ಸ್‌ (ಅಜೇಯ 7) ಆಡಲಿಳಿದರೂ ಹೆಚ್ಚಿನ ಸ್ಟ್ರೈಕ್‌ಗಳನ್ನೆಲ್ಲ ಸ್ಮಿತ್‌ ಒಬ್ಬರೇ ಪಡೆಯುತ್ತ ಹೋದರು. ತ್ರಿಪಾಠಿ 8 ಎಸೆತ ಎದುರಿಸಿದರೆ, ಸ್ಟೋಕ್ಸ್‌ 14 ಎಸೆತಗಳಿಂದ 7 ರನ್‌ ಮಾಡಿದರು.

Advertisement

25ಕ್ಕೆ 2 ವಿಕೆಟ್‌ ಕಿತ್ತ ಹ್ಯಾರಿ ಗರ್ನಿ ಕೆಕೆಆರ್‌ನ ಯಶಸ್ವಿ ಬೌಲರ್‌. ಆದರೆ ತ್ರಿವಳಿ ಸ್ಪಿನ್ನರ್‌ಗಳಾದ ಪೀಯೂಷ್‌ ಚಾವ್ಲಾ, ಸುನೀಲ್‌ ನಾರಾಯಣ್‌ ಮತ್ತು ಕುಲದೀಪ್‌ ಯಾದವ್‌ ವಿಕೆಟ್‌ ಕೀಳಲು ವಿಫ‌ಲರಾದರು.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಪ್ರಸಿದ್ಧ್ ಕೃಷ್ಣ 5
ಜಾಸ್‌ ಬಟ್ಲರ್‌ ಸಿ ಗಿಲ್‌ ಬಿ ಗರ್ನಿ 37
ಸ್ಟೀವನ್‌ ಸ್ಮಿತ್‌ ಔಟಾಗದೆ 73
ರಾಹುಲ್‌ ತ್ರಿಪಾಠಿ ಸಿ ಚಾವ್ಲಾ ಬಿ ಗರ್ನಿ 6
ಬೆನ್‌ ಸ್ಟೋಕ್ಸ್‌ ಔಟಾಗದೆ 7
ಇತರ 11
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 139
ವಿಕೆಟ್‌ ಪತನ: 1-5, 2-77, 3-105.
ಬೌಲಿಂಗ್‌:
ಪೀಯೂಷ್‌ ಚಾವ್ಲಾ 4-0-19-0
ಪ್ರಸಿದ್ಧ್ ಕೃಷ್ಣ 4-0-35-1
ಸುನೀಲ್‌ ನಾರಾಯಣ್‌ 4-0-22-0
ಕುಲದೀಪ್‌ ಯಾದವ್‌ 4-0-33-0
ಹ್ಯಾರಿ ಗರ್ನಿ 4-0-25-2

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಸಿ ಮಿಥುನ್‌ ಬಿ ಗೊಪಾಲ್‌ 50
ಸುನೀಲ್‌ ನಾರಾಯಣ್‌ ಸಿ ಸ್ಮಿತ್‌ ಬಿ ಗೋಪಾಲ್‌ 47
ರಾಬಿನ್‌ ಉತ್ತಪ್ಪ ಔಟಾಗದೆ 26
ಶುಭಮನ್‌ ಗಿಲ್‌ ಔಟಾಗದೆ 6
ಇತರ 11
ಒಟ್ಟು (13.5 ಓವರ್‌ಗಳಲ್ಲಿ 2 ವಿಕೆಟಿಗೆ) 140
ವಿಕೆಟ್‌ ಪತನ: 1-91, 2-114.
ಬೌಲಿಂಗ್‌:
ಧವಳ್‌ ಕುಲಕರ್ಣಿ 3-0-31-0
ಕೆ. ಗೌತಮ್‌ 1-0-22-0
ಜೋಫ‌Å ಆರ್ಚರ್‌ 3-0-14-0
ಶ್ರೇಯಸ್‌ ಗೋಪಾಲ್‌ 4-0-35-2
ಸುದೇಶನ್‌ ಮಿಥುನ್‌ 2-0-27-0
ಬೆನ್‌ ಸ್ಟೋಕ್ಸ್‌ 0.5-0-3-0

Advertisement

Udayavani is now on Telegram. Click here to join our channel and stay updated with the latest news.

Next