Advertisement
ಈ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೋಲ್ಕತಾ ತಂಡವು ಸ್ಫೋಟಕ ಆರಂಭ ಪಡೆಯಿತು. ಸುನೀಲ್ ನಾರಾಯಣ್ ಅವರ ಸ್ಫೋಟಕ ಆಟದಿಂದಾಗಿ ಕೆಕೆಆರ್ ತಂಡವು ಕೇವಲ 3.2 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 45 ರನ್ ಪೇರಿಸಿತು. ಇದರಲ್ಲಿ ನಾರಾಯಣ್ ಪಾಲು 42 ರನ್. ವೇಗದ ಅರ್ಧಶತಕ ಸಿಡಿಸುವ ಸೂಚನೆಯಿತ್ತ ನಾರಾಯಣ್ 17 ಎಸೆತ ಎದುರಿಸಿ 42 ರನ್ನಿಗೆ ಔಟಾದರು. 9 ಬೌಂಡರಿ ಹೊಡೆದ ಅವರು 1 ಸಿಕ್ಸರ್ ಬಾರಿಸಿದರು. ಗಂಭೀರ್ ಮತ್ತು ಉತ್ತಪ್ಪ ಜವಾಬ್ದಾರಿಯಿಂದ ಆಡಿ ತಂಡದ ಮೊತ್ತ ಏರಿಸಲು ನೆರವಾದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 69 ರನ್ ಪೇರಿಸಿದ್ದರು. ಗಂಭೀರ್ 33 ರನ್ ಗಳಿಸಿ ಔಟಾದರೆ ಉತ್ತಪ್ಪ ಬಿರುಸಿನ ಆಟವಾಡಿ 48 ಎಸೆತಗಳಿಂದ 72 ರನ್ ಹೊಡೆದರು. 8 ಬೌಂಡರಿ ಮತ್ತು 2ಸಿಕ್ಸರ್ ಬಾರಿಸಿದ ಅವರು ತಂಡ ಉತ್ತಮ ಸ್ಥಿತಿಗೆ ತಲುಪಲು ನೆರವಾದರು. ಉತ್ತಪ್ಪ ಔಟಾದ ಬಳಿಕ ತಂಡದ ರನ್‌ವೇಗ ಕುಸಿಯಿತು. ಅಂತಿಮವಾಗಿ ತಂಡ 5 ವಿಕೆಟಿಗೆ 187 ರನ್ ಗಳಿಸಿತು.
ಕೋಲ್ಕತಾ ನೈಟ್‌ರೈಡರ್
ಸುನೀಲ್ ನಾರಾಯಣ್ ಸಿ ಫಾಕ್ನರ್ ಬಿ ರೈನಾ 42
ಗೌತಮ್ ಗಂಭೀರ್ ಸಿ ರೈನಾ ಬಿ ಫಾಕ್ನರ್ 33
ರಾಬಿನ್ ಉತ್ತಪ್ಪ ಸಿ ಮೆಕಲಮ್ ಬಿ ಕುಮಾರ್ 72
ಮನೀಷ್ ಪಾಂಡೆ ಬಿ ಬಾಸಿಲ್ ಥಂಪಿ 24
ಯೂಸುಫ್ ಪಠಾಣ್ ಔಟಾಗದೆ 11
ಸೂರ್ಯ ಕೆ. ಯಾದವ್ ರನೌಟ್ 1
ಶಕಿಬ್ ಅಲ್ ಹಸನ್ ಔಟಾಗದೆ 1
ಇತರ: 3 ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 187
Related Articles
Advertisement
ಬೌಲಿಂಗ್:ಪ್ರವೀಣ್ ಕುಮಾರ್ 2-0-24-1
ಜೇಮ್ಸ್ ಫಾಕ್ನರ್ 4-0-38-1
ಬಾಸಿಲ್ ಥಂಪಿ 4-0-44-1
ಸುರೇಶ್ ರೈನಾ 2-00-11-1
ಧವಳ್ ಕುಲಕರ್ಣಿ 2-0-23-0
ರವೀಂದ್ರ ಜಡೇಜ 4-0-31-0
ಡ್ವೇನ್ ಸ್ಮಿತ್ 2-0-14-0 ಗುಜರಾತ್ ಲಯನ್ಸ್
ಆರನ್ ಫಿಂಚ್ ಸಿ ಪಾಂಡೆ ಬಿ ನೈಲ್ 31
ಬ್ರೆಂಡನ್ ಮೆಕಲಮ್ ಸಿ ಪಾಂಡೆ ಬಿ ವೋಕ್ಸ್ 33
ಸುರೇಶ್ ರೈನಾ ಸಿ ಪಾಂಡೆ ಬಿ ಕುಲದೀಪ್ 84
ದಿನೇಶ್ ಕಾರ್ತಿಕ್ ಸಿ ಗಂಭೀರ್ ಬಿ ನೈಲ್ 2
ಇಶಾನ್ ಕಿಶನ್ ಸಿ ಉಮೇಶ್ ಬಿ ಕುಲದೀಪ್ 4
ಡ್ವೇನ್ ಸ್ಮಿತ್ ಬಿ ಉಮೇಶ್ 5
ರವೀಂದ್ರ ಜಡೇಜ ಔಟಾಗದೆ 19
ಜೇಮ್ಸ್ ಫಾಕ್ನರ್ ಔಟಾಗದೆ 4 ಇತರ: 5
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ) 188 ವಿಕೆಟ್ ಪತನ: 1-42, 2-73, 3-81, 4-115, 5-122, 6-180 ಬೌಲಿಂಗ್:
ಶಕಿಬ್ ಅಲ್ ಹಸನ್ 3-0-31-0
ಸುನೀಲ್ ನಾರಾಯಣ್ 4-0-42-0
ನಥನ್ ಕೌಲ್ಟರ್ ನೈಲ್ 3.2-0-41-2
ಕ್ರಿಸ್ ವೋಕ್ಸ್ 2-0-20-1
ಕುಲದೀಪ್ ಯಾದವ್ 4-0-33-2
ಉಮೇಶ್ ಯಾದವ್ 2-0-17-1