Advertisement

ಐಪಿಎಲ್ 2020: ಯುಎಇ ಗೆ ಹಾರಿದ ಪಂಜಾಬ್, ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್

01:10 PM Aug 21, 2020 | keerthan |

ಮುಂಬೈ: ಈ ಬಾರಿಯ ಐಪಿಎಲ್ ಗೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಲೋಕದ ದುಬಾರಿ ಕ್ರಿಕೆಟ್ ಲೀಗ್ ಗೆ ಇನ್ನೇನು ತಿಂಗಳು ಬಾಕಿಯಿದ್ದು, ತಂಡಗಳು ಯುಎಇ ಗೆ ಹಾರಲು ಶುರು ಮಾಡಿದೆ. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಯುಎಇ ತಲುಪಿವೆ.

Advertisement

ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಚಾರ್ಟೆಡ್ ವಿಮಾನದ ಮೂಲಕ ದುಬೈ ಗೆ ಬಂದಿಳಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಬುಧಾಬಿಗೆ ತೆರಳಿತು. ಕೆಕೆಆರ್ ತಂಡವು ಅಬುಧಾಬಿಯನ್ನು ತಮ್ಮ ಬೇಸ್ ಆಗಿ ಮಾಡಿಕೊಂಡಿದೆ.

ಎಲ್ಲಾ ಆಟಗಾರರು ಇದುವರೆಗೆ ಎರಡು ಬಾರಿ ಕೋವಿಡ್ ಪರೀಕ್ಷೆ ನಡೆಸಿದ್ದು, ಆರು ದಿನಗಳ ಕಾಲ ಕ್ವಾರಂಟೈನ್ ಆಗಲಿದ್ದಾರೆ. ಈ ಆರು ದಿನಗಳ ವೇಳೆಯಲ್ಲಿ ಮೂರು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಪ್ರತಿ ಬಾರಿಯೂ ನೆಗೆಟಿವ್ ಆದರೆ ಮಾತ್ರ ಅವರು ಬಯೋ ಬಬಲ್ ಗೆ ಪ್ರವೇಶ ಮಾಡಬಹುದು ಮತ್ತು ಕೂಟಕ್ಕೆ ಅಭ್ಯಾಸ ನಡೆಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next