Advertisement

ಕಸ್ತೂರಿರಂಗನ್‌ ವರದಿ: ದ.ಕ.ಜಿಲ್ಲೆಯಲ್ಲಿ ಬೃಹತ್‌ ಹೋರಾಟಕ್ಕೆ ನಿರ್ಧಾರ

02:35 PM Apr 14, 2017 | Team Udayavani |

ಬೆಳ್ತಂಗಡಿ: ಕಸ್ತೂರಿರಂಗನ್‌ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗುತ್ತಿದ್ದು ಮಲೆನಾಡಿನ ರೈತರ ಬದುಕನ್ನು ಕಸಿದುಕೊಳ್ಳಲಿರುವ ಈ ಯೋಜನೆಯ ವಿರುದ್ದ ಅವಿಭಜಿತ ದ.ಕ. ಜಿಲ್ಲಾ ಮಟ್ಟದಲ್ಲಿ ಬೃಹತ್‌ ಹೋರಾಟ ರೂಪಿಸಲು ಬೆಳ್ತಂಗಡಿಯ ಅಂಬೇಡ್ಕರ್‌ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕ ಸಂಘಟನೆಗಳ ದುಂಡು ಮೇಜಿನ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸೀರೋ ಮಲಬಾರ್‌ ಕೆಥೋಲಿಕ್‌ ಅಸೋಸಿಯೇಶನ್‌, ರಬ್ಬರ್‌ ಬೆಳೆಗಾರರ ಹಿತ ರಕ್ಷಣಾ ಸಮಿತಿ, ತುಳುನಾಡು ಒಕ್ಕೂಟ ಹಾಗೂ ಇತರ ಸಂಘಟನೆಗಳ ನೇತƒತ್ವದಲ್ಲಿ  ಸಮಾಲೋಚನ ಸಭೆ ನಡೆಯಿತು.

ಸಭೆಯಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಕೊಡಗಿನ ಹೋರಾಟಗಾರ ಡಾ| ದುರ್ಗಾಪ್ರಸಾದ್‌ ಅವರು, ಕೇಂದ್ರ ಸರಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನ ಮುಂದೆ ಕಸ್ತೂರಿರಂಗನ್‌ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿ ಒಪ್ಪಿಗೆ ನೀಡಿ ಪ್ರಮಾಣ ಪತ್ರ ನೀಡಿದೆ. ಅದರಂತೆಯೇ ನಿರಂತರವಾಗಿ ಅಧಿಸೂಚನೆಯನ್ನೂ ಹೊರಡಿಸುತ್ತಿದೆ.  ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಈ ಬಗ್ಗೆ ವರದಿಯನ್ನು ಈಗಾಲೇ ನೀಡಿದೆ. ಅಲ್ಲದೆ ಕೇಂದ್ರ ಸರಕಾರ ಕರೆದಿದ್ದ ಸಭೆಯಲ್ಲಿ ರಾಜ್ಯದ ಅರಣ್ಯ ಸಚಿವರು ಭಾಗವಹಿಸಿ ತಮ್ಮ ವಾದವನ್ನು ಮಂಡಿಸಿದ್ದಾರೆ. ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ಪರಿಸರ ಸೂಕ್ಷ್ಮಪ್ರದೇಶ ಎಂದು ಘೋಷಿಸುವಂತೆ ಕೇಳಿಕೊಂಡಿದೆ. ಆದರೆ ಇದಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.

ಕೇಂದ್ರ ಪರಿಸರ ಸಚಿವಾಲಯ ಮತ್ತೆ ಸುಪ್ರೀಂ ಕೋರ್ಟ್‌ ಮುಂದೆ ಹೊಸ ಅಫಿದವಿತ್‌ ಸಲ್ಲಿಸಿ ಕಸ್ತೂರಿರಂಗನ್‌ ವರದಿಯನ್ನು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಬದಲಿ ವರದಿ ತಯಾರಿಸುವುದಾಗಿ ಹೇಳಿಕೆ ನೀಡದ ಹೊರತು

ಈ ಸಮಸ್ಯೆಯಿಂದ ಪರಿಹಾರ ಸಿಗಲು ಸಾಧ್ಯವಿಲ್ಲ. ಕೇಂದ್ರ ಸರಕಾರದ ಮೇಲೆ ಸಂಸದರು, ಜನರು ಒತ್ತಡ ಹೇರುವ ಕಾರ್ಯವನ್ನು ಮಾಡಬೇಕಾದ ಅನಿವಾರ್ಯವಿದೆ. ಈ ಬಗ್ಗೆ ಸರಕಾರಗಳನ್ನು, ಸಂಸದರನ್ನು ಎಚ್ಚರಿಸುವ ಹೋರಾಟ ಅನಿವಾರ್ಯವಾಗಿ ನಡೆಯಬೇಕಾಗಿದೆ.  ಈಗಾಗಲೆ ಇದರಲ್ಲಿ ಅಗತ್ಯ ಬದಲಾವಣೆಗಳನ್ನು ತರದಿದ್ದಲ್ಲಿ ಅಂತಿಮ ಅಧಿಸೂಚನೆ ಹೊರ ಬಂದರೆ ಮತ್ತೆ ಯಾವ ಹೋರಾಟ ಮಾಡಿಯೂ ಪ್ರಯೋಜನವಾಗಲಾರದು ಎಂದರು.

Advertisement

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ಜಲ್ಲಾ ಕಾರ್ಯದರ್ಶಿ ಸುರೇಶ್‌ ಭಟ್‌ ಕೊಜಂಬೆ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್‌, ವಿವಿಧ ಸಂಘಟನೆಗಳ ಮುಖಂಡರಾದ ಮುನೀರ್‌ ಕಾಟಿಪಳ್ಳ, ಸೇವಿಯರ್‌ ಪಾಲೇಲಿ, ಪ್ರೊ| ಆಂಟೋನಿ, ಶ್ಯಾಮರಾಜ ಪಟ್ರಮೆ, ಲಕ್ಷ್ಮಣ ಗೌಡ ಪಾಂಗಳ, ವಿಠಲ ಮಲೆಕುಡಿಯ  ಹಾಗೂ ಇತರರು ಉಪಸ್ಥಿತರಿದ್ದರು.

ಹೋರಾಟಕ್ಕಾಗಿ ಗ್ರಾಮ ಸಮಿತಿಗಳನ್ನು ರಚಿಸಲು ಹಾಗೂ ಜನ ಜಾಗƒತಿಗಾಗಿ ವಾಹನ ಜಾಥವನ್ನು ಆಯೋಜಿಸಲು ನಿರ್ಧರಿಸಲಾಯಿತು. ಸುರೇಶ್‌ ಭಟ್‌ ಅವರ ಅಧ್ಯಕ್ಷತೆಯಲ್ಲಿ ಬಿ.ಎಂ. ಭಟ್‌ ಅವರು ಕಾರ್ಯದರ್ಶಿಯಾಗಿರುವ ಹೋರಾಟ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next