Advertisement

ಕಿವೀಸ್‌ ಆಟಗಾರ್ತಿ ಡೂಲನ್‌ ನಿವೃತ್ತಿ

12:30 AM Mar 16, 2019 | |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ಪರ 40 ಏಕದಿನ, 33 ಟಿ20 ಪಂದ್ಯಗಳನ್ನಾಡಿದ ಲೂಸಿ ಡೂಲನ್‌ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಇದರೊಂದಿಗೆ ಅವರ 14 ವರ್ಷಗಳ ಕ್ರಿಕೆಟ್‌ ಬದುಕಿಗೆ ತೆರೆ ಬಿದ್ದಿದೆ. 2008ರಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಪ್ರತಿನಿಧಿಸತೊಡಗಿದ ಡೂಲನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 868 ರನ್‌ ಹಾಗೂ 60 ವಿಕೆಟ್‌ ಸಂಪಾದಿಸಿದ್ದಾರೆ. 2 ಸಲ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲೂ ಆಡಿದ್ದರು. ದೇಶಿ ಕ್ರಿಕೆಟ್‌ನಲ್ಲಿ ಅವರು ವೆಲ್ಲಿಂಗ್ಟನ್‌ ತಂಡದ ಪರ ಆಡುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next