Advertisement

ನಾಲತವಾಡದಲ್ಲಿ ಕಿತ್ತೂರು ಚನ್ನಮ್ಮ ಜಯಂತಿ-ವಿಜಯೋತ್ಸವ

12:22 PM Oct 29, 2021 | Shwetha M |

ನಾಲತವಾಡ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಬೇಡಿಕೆಗೆ ಅನುಗುಣವಾಗಿ ಮೀಸಲಾತಿ ನೀಡದ ಪರಿಣಾಮ ಅಂದಿನ ಸಿಎಂ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವಂತಾಯಿತು. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮೂರು ತಿಂಗಳಲ್ಲಿ ಮೀಸಲಾತಿ ಘೋಷಿಸುವ ಭರವಸೆ ನೀಡಿದ್ದಾರೆ.

Advertisement

ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಸಾಮಾಜಿಕ ಸೇವಾ ಸಂಘದಡಿ ಹಮ್ಮಿಕೊಂಡಿದ್ದ ಕಿತ್ತೂರು ಚನ್ನಮ್ಮನವರ 243ನೇ ಜಯಂತಿ ಹಾಗೂ 198ನೇ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ನಡೆದಂತೆ ನುಡಿಯದ ಪರಿಣಾಮ ಆ ಸ್ಥಾನದಲ್ಲಿದ್ದವರು ಶಿಕ್ಷೆ ಅನುಭವಿಸಲೇಬೇಕು. ಸದ್ಯ ಸಿಎಂ ಬೊಮ್ಮಾಯಿಯವರೂ ನಮ್ಮ ಸಮಾಜಕ್ಕೆ ಯಾವ ಗಿಫ್ಟ್‌ ಕೊಡುತ್ತಾರೆ ನೋಡೋಣ ಎಂದರು.

ಮಾಜಿ ಶಾಸಕ ಡಾ|ವಿಜಯಾನಂದ ಕಾಶಪ್ಪನವರ ಹಾಗೂ ಕೂಡಲಸಂಗಮ ಬಸವಜಯ ಮೃತ್ಯುಂಜಯ ಶ್ರೀ ಮಾತನಾಡಿ, ಅಂದಿನ ಹೋರಾಟದ ಮಾದರಿಯಲ್ಲೇ ನಮ್ಮ ಹೋರಾಟ ಮುಂದುವರಿಯಲಿದ್ದು ಮೀಸಲಾತಿ ಸಿಗುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಬಾರಿ ಸುಮಾರು 20 ಲಕ್ಷ ಮಂದಿ ಸೇರಿಸಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಎಂ.ಎಸ್‌.ಪಾಟೀಲ, ಮುತ್ತು ಅಂಗಡಿ ಸೇರಿದಂತೆ ಇತರರು ಮಾತನಾಡಿದರು.

ಇದನ್ನೂ ಓದಿ: ಕ್ರಿಕೆಟ್‌ ಬೆಟ್ಟಿಂಗ್‌: ಸಿಸಿಬಿಯಿಂದ ಮೂವರ ಬಂಧನ

Advertisement

ಈ ಮಧ್ಯೆ ಪಟ್ಟಣದ ಪಂಚಮಸಾಲಿ ಸಮಾಜದ ಸಾವಿರಾರು ಮುತ್ತೈದೆಯರು ಹೊತ್ತ ಕಳಸ ಕನ್ನಡಿ, ಕುಂಭಮೇಳ ಗಮನ ಸೆಳೆಯಿತು. ಈ ವೇಳೆ ಅಬ್ಟಾಸಾಹೇಬ ದೇಶಮುಖ, ಡಾ|ಬಿ.ಎಸ್‌.ಪಾಟೀಲ, ಎಂ.ಎಸ್‌. ಪಾಟೀಲ, ಗುರುಪ್ರಸಾದ್‌ ದೇಶಮುಖ, ಶಿವಶಂಕರಗೌಡ ಹಿರೇಗೌಡ್ರ, ಗುರು ತಾರನಾಳ, ಬಿ.ಎಂ.ಪಾಟೀಲ, ಡಾ|ಸಿ.ಎಂ.ಬಿ. ಅಂಗಡಿ, ಎ.ಜಿ. ಗಂಗನಗೌಡ್ರ, ಸೇವಾ ಸಂಘದ ಅಧ್ಯಕ್ಷ ಶರಣಪ್ಪ ಗಂಗನಗೌಡ್ರ, ಅಮರೇಶ ಗೂಳಿ, ಕಾಮರಾಜ ಬಿರಾದಾರ, ಡಾ| ಶರಣಬಸ್ಸು ಗಂಗನಗೌಡ್ರ, ಉದ್ಯಮಿ ಮಹಾಂತೇಶ ಗಂಗನಗೌಡ್ರ, ಬಸವರಾಜ ಗಡ್ಡಿ, ಬಾಬು ಹಾದಿಮನಿ, ಮಲ್ಲಪ್ಪ ಮಾಳಜಿ, ಡಾ| ಸಿ.ಎಸ್‌. ಸೋಲಾಪೂರ, ಮಹಾಂತೇಶ ಜಿ. ಗಂಗನಗೌಡ್ರ, ಡಾ| ಪ್ರಕಾಶ ನರಗುಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next