Advertisement

ಕಿತ್ತೂರು ಅರಮನೆ ಮಾದರಿಯಲ್ಲಿ ಕಟ್ಟಡ ನಿರ್ಮಾಣ

05:06 PM Jul 03, 2021 | Team Udayavani |

ಬೆಳಗಾವಿ: ಕಿತ್ತೂರು ಅಭಿವೃದ್ಧಿ ಪ್ರಾಧಿ ಕಾರಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಿರಿಸಿದ್ದು, ಕಿತ್ತೂರಿನಲ್ಲಿ ಅರಮನೆ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ತಿಳಿಸಿದರು.

Advertisement

ಇಲ್ಲಿಯ ಬಸವರಾಜ ಕಟ್ಟಿಮನಿ ಸಭಾಗೃಹದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ಚನ್ನಮ್ಮಾಜಿ ಅರಮನೆ ಜೀರ್ಣಾವಸ್ಥೆಗೆ ತಲುಪಿದೆ. ಅದಕ್ಕಾಗಿ ಅರಮನೆ ನಿರ್ಮಾಣ ಮಾಡುವ ಪ್ರಯತ್ನ ನಡೆಯಲಿವೆ. ಈ ಬಗ್ಗೆ ತಜ್ಞರ ಸಮಿತಿಯ ರೂಪುರೇಷೆ ಸಿದ್ಧಪಡಿಸಲಾಗುವುದು. ಅರಮನೆ ಯಥಾ ರೀತಿ ನಿರ್ಮಿಸಲು ನಿರ್ದಿಷ್ಟ ಕಾರ್ಯಸೂಚಿ ಯೋಜನೆ ತಯಾರಾಗಬೇಕು ಎಂದು ಹೇಳಿದರು. ಅರಮನೆ ನಿರ್ಮಾಣ ಬಗ್ಗೆ ಪ್ರಾಚ್ಯ ವಸ್ತು ಇಲಾಖೆ ಅನುಮತಿ ಪಡೆದುಕೊಳ್ಳಲಾಗುವುದು. ಕಿತ್ತೂರು ಸಂಸ್ಥಾನಕ್ಕೆ ಗುರುಮಠವಾಗಿದ್ದ ಚೌಕಿಮಠದಿಂದ ಕಾಮಗಾರಿ ಆರಂಭಿಸಲು ಅನೇಕ ಕಡೆಗಳಿಂದ ಸಲಹೆಗಳು ಬಂದಿವೆ. ಕಿತ್ತೂರನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಬಗ್ಗೆ ಅಭಿವೃದ್ಧಿ ಕಾಮಗಾರಿ ನಡೆಸಲು ಎಲ್ಲ ಪ್ರಯತ್ನ ಮುಂದುವರಿಯಲಿವೆ ಎಂದು ಹೇಳಿದರು.

ಕಿತ್ತೂರು ಅರಮನೆ ಮಾದರಿ ಕಟ್ಟಡದ ಪ್ರತಿ ನಿರ್ಮಾಣ ಕುರಿತು ಚರ್ಚಿಸಲು ಜು.6ಕ್ಕೆ ಇತಿಹಾಸ ತಜ್ಞರು, ಅ ಧಿಕಾರಿಗಳು ಹಾಗೂ ಗಣ್ಯರ ಸಭೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ ಎಂದರು.

ಕಿತ್ತೂರು ಅಭಿವೃದ್ಧಿ ಪ್ರಾಧಿ ಕಾರ ಆಯುಕ್ತ ಶಶಿಧರ ಬಗಲಿ ಮಾತನಾಡಿ, ಕಿತ್ತೂರು ಅಭಿವೃದ್ಧಿ ಪ್ರಾ ಧಿಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಿರಿಸಿದೆ. ಈ ವರ್ಷ ಪ್ರಾ ಧಿಕಾರದ ಕೆಲಸಗಳಿಗೆ 50 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಅರಮನೆ ಮಾದರಿಯ ಕಟ್ಟಡದ ಪ್ರತಿ ನಿರ್ಮಾಣದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆಯೋಜಿಸಲಾಗಿದೆ ಎಂದರು.

ಕಿತ್ತೂರು ಅಭಿವೃದ್ಧಿ ಪ್ರಾಧಿ ಕಾರ 2011-12ರಲ್ಲಿ ರಚನೆಯಾಗಿದೆ. ಈಗಾಗಲೇ ಕಿತ್ತೂರು ಅರಮನೆ ಆವರಣದ 20 ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿತ್ತೂರು ಅರಮನೆ ಪುನರ್‌ ನವೀಕರಣ ಕಾಮಗಾರಿಯೂ ಇದೆ. ಪ್ರಾಚ್ಯ ವಸ್ತು ಇಲಾಖೆಯ ಅನುಮಪತಿ ಪಡೆದುಕೊಂಡು ಕೆಲಸ ನಡೆಯಲಿದೆ. 16ನೇ ಶತಮಾನದ ಕಟ್ಟಡವಾಗಿರುವುದರಿಂದ ಅದೇ ಮಾದರಿಯಲ್ಲಿ ಈ ಅರಮನೆಯ ಪುನರ್‌ ನಿರ್ಮಾಣ ಆಗಬೇಕಿದೆ. ಆಕರ್ಷಕವಾದ ಕಟ್ಟಡ ನಿರ್ಮಾಣ ಆಗಲಿದೆ. ಮೊದಲಿನ ಸ್ವರೂಪ ಉಳಿಸಲಾಗುವುದು. ಆದ್ಯತೆ ನೀಡಬೇಕಿದೆ ಎಂದರು.

Advertisement

ಈ ಸಂದರ್ಭದಲ್ಲಿ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಅಪರ ಜಿಲ್ಲಾ  ಧಿಕಾರಿ ಅಶೋಕ ದುಡಗುಂಟಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಡಾ| ರಾಮಚಂದ್ರಗೌಡ, ಕುಲಸಚಿವ ಬಸವರಾಜ ಪದ್ಮಶಾಲಿ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ| ಎಸ್‌. ಎಂ. ಗಂಗಾಧರಯ್ಯ, ಹಂಪಿ ವಿವಿ ಪ್ರಾಧ್ಯಾಪಕ ಡಾ| ಅಮರೇಶ ಯಾತಗಲ್‌, ಸ್ಮಿàತಾ ಸುರೇಬಾನಕರ, ಪ್ರೊ| ಆರ್‌.ಎಂ. ಷಡಕ್ಷರಯ್ಯ, ಕಿತ್ತೂರು ತಹಶೀಲ್ದಾರ್‌ ಸೋಮಲಿಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next