Advertisement

ಈಂದ್‌ ಹುಡಿ ಉದರ ಸಮಸ್ಯೆಗಳಿಗೆ ಪರಿಹಾರ

11:49 AM Jan 22, 2021 | Team Udayavani |

ಗ್ಯಾಸ್ಟ್ರಿಕ್‌, ಆ್ಯಸಿಡಿಟಿ, ಹೊಟ್ಟೆ ಉಬ್ಬರ,ಮಲಬದ್ಧತೆ ಆಗಾಗ ಕಾಡುವಂಥದ್ದು. ಇದಕ್ಕಾಗಿ ಪದೇಪದೇ ವೈದ್ಯರ ಬಳಿಗೆ ಹೋಗುವ ಬದಲು ಮನೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ಹಳ್ಳಿಗಳಲ್ಲಿ ಬಳಸುವ ಒಂದು ಬಹುಪಯೋಗಿ ವಸ್ತು ಈಂದ್‌, ಬೈನೆ ಮರದ ತಿರುಳಿನಿಂದ ತಯಾರಿಸಿದ ಹುಡಿ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಾಗುವ ಇದನ್ನು ತರಿಸಿಕೊಂಡು ಮನೆಯಲ್ಲಿ ಕೆಡದಂತೆ ಬಹುಕಾಲದ ವರೆಗೆ ಶೇಖರಿಸಿ ಈಡಬಹುದು.

Advertisement

ಇದನ್ನೂ ಓದಿ:ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?

ಲಾಭ ಹಲವು
*ದೇಹದ ಉಷ್ಣತೆಯನ್ನು ನಿವಾರಿಸಿ ತಂಪಾಗಿರಿಸುತ್ತದೆ.
*ನರದೌರ್ಬಲ್ಯವನ್ನು ಕಡಿಮೆ ಮಾಡಿ ಮಾಂಸಖಂಡ ಚೆನ್ನಾಗಿ ಕೆಲಸ ಮಾಡಲು ಸಹಕರಿಸುತ್ತದೆ.
*ಆಹಾರ ವ್ಯತ್ಯಯದಿಂದ ಉಂಟಾಗುವ ಗ್ಯಾಸ್ಟ್ರಿಕ್‌, ಹೊಟ್ಟೆ ನೋವು, ಹುಳಿತೇಗು ಮತ್ತಿತರ  ಉದರ ಸಂಬಂಧಿ ಕಾಯಿಲೆಯನ್ನು ದೂರವಿಡುತ್ತದೆ.
*ಜೀರ್ಣಶಕ್ತಿಯನ್ನು ಹೆಚ್ಚಿಸಿ ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
*ಸುಲಭವಾಗಿ ಜೀರ್ಣವಾಗುವ, ನಾರಿನಾಂಶ ಅಧಿಕವಿರುವ ಸಸ್ಯ ಮೂಲದ ಆಹಾರವಾಗಿರುವುದರಿಂದ ಮಕ್ಕಳಿಗೆ, ವಯಸ್ಕರಿಗೆ, ವೃದ್ಧರಿಗೆ ಆರೋಗ್ಯಕ್ಕೆ ಅತ್ಯುತ್ತಮ.
* ತಲೆ ಸುತ್ತು, ತಲೆನೋವು, ಅರೆ ತಲೆನೋವನ್ನು ನಿವಾರಿಸಿ ನಿದ್ರಾಹೀನತೆ ಯನ್ನು ತಡೆಗಟ್ಟುತ್ತದೆ.
*ಮಲಬದ್ಧತೆ ಸಮಸ್ಯೆಗೆ ಪರಿಹಾರ ವನ್ನೊದಗಿಸುತ್ತದೆ.
*ರಕ್ತಹೀನತೆಯುಳ್ಳವರಿಗೂ ಇದು ಪ್ರಯೋಜನಕಾರಿಯಾಗಿದೆ.

ಬಳಕೆ ಮಾಡುವ ವಿಧಾನ
ಎರಡು ಚಮಚ ಹುಡಿಯನ್ನು ಎರಡು ಲೋಟ ನೀರು ಅಥವಾ ಹಾಲಿನಲ್ಲಿ ಬೆರೆಸಿ ಸ್ವಲ್ಪ ಬೆಲ್ಲ, ತುಪ್ಪವನ್ನು ಸೇರಿಸಿ ಕಲಸಿ ಕುದಿಸಿ ಪಾಯಸದ ರೂಪಕ್ಕೆ ಬಂದಾಗ ತಣಿಸಿ ಸೇವಿಸಬಹುದು.ರುಚಿಗಾಗಿ ಬೇಕಿದ್ದರೆ ಮಾತ್ರ ಉಪ್ಪು ಬೆರೆಸಬಹುದು. ಅಲ್ಲದೇ ತುರ್ತು ಸಮಯದಲ್ಲಿ ಕೇವಲ ನೀರಿನಲ್ಲಿ ಕಲಸಿ ಕುಡಿಯಬಹುದು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಯಾರು ಬೇಕಾದರೂ ಸೇವಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next