Advertisement
ಇಂಡಿಯನ್ ರೆಡ್‌ಕ್ರಾಸ್‌ನ ರಾಜ್ಯ ಸಮಿತಿಯ ಸಂಯೋಜಕ ಎ.ಬಿ. ಶೆಟ್ಟಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯು ರಕ್ತದಾನದ ಮೂಲಕ ವಿಶೇಷ ಸಾಧನೆ ಮಾಡಿದ್ದು, ಪ್ರಸ್ತುತ ಎಲ್ಲ ಭಾಗಗಳ ಅಶಕ್ತರಿಗೂ ನೆರವು ನೀಡುತ್ತಾ ಬಂದಿದೆ. ಈ ಬಾರಿಯ ವಿಪರೀತ ಮಳೆಯಿಂದಾಗಿ ಪ್ರವಾಹ ಬಂದು, ಸಾಕಷ್ಟು ಮಂದಿ ಸಂತ್ರಸ್ತರಾಗಿದ್ದಾರೆ. ಹೀಗಾಗಿ ಸಂಸ್ಥೆಯು ಜಿಲ್ಲಾಡಳಿತದ ಮೂಲಕ ಅಗತ್ಯ ಪರಿಕರಗಳನ್ನು ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದೇ ದಿವಸ 3,334 ಯುನಿಟ್ ರಕ್ತ ಸಂಗ್ರಹಿಸಿ ರೆಡ್‌ಕ್ರಾಸ್ ಗಿನ್ನೆಸ್ ದಾಖಲೆ ಪಡೆದಿದೆ ಎಂದರು. ರೆಡ್‌ಕ್ರಾಸ್ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ರೆಡ್‌ಕ್ರಾಸ್ ಬ್ಲಿಡ್ ಬ್ಯಾಂಕ್‌ನ ಎಡ್ವರ್ಡ್ ವಾಸ್, ಕಂದಾಯ ಅಧಿಕಾರಿಗಳಾದ ರವಿಕುಮಾರ್, ಪವಾಡಪ್ಪ ದೊಡ್ಡಮನಿ, ಪ್ರತೀಶ್ ಎಚ್. ಆರ್., ಗ್ರಾಮಕರಣಿಕರಾದ ಮೇಘನಾ, ಪ್ರದೀಪ್ ಉಪಸ್ಥಿತರಿದ್ದರು.
ತಹಶೀಲ್ದಾರ್ ಮದನ್ ಮೋಹನ್ ಅವರು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಪರಿಹಾರ ಕಿಟ್‌ನಲ್ಲಿ ಅಡುಗೆ ಪರಿಕರಗಳು, ಸೊಳ್ಳೆ ಪರದೆ, ಹೊದಿಕೆ, ಧೋತಿ, ಸೀರೆ, ಬಕೆಟ್, ಬಾತ್ ಟವೆಲ್, ಕೊಡೆಗಳಿದ್ದವು.