Advertisement

‌ಕಲರ್‌ಫ‌ುಲ್‌ ಕಿಶೋರ್‌ ಬ್ಲ್ಯಾಕ್‌ –ವೈಟ್‌ ಕನಸು

12:41 PM May 08, 2020 | Suhan S |

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ಬ್ಲಾಕ್‌ ಅಂಡ್‌ ವೈಟ್‌ ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇಲ್ಲಿಯವರೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಕಿಶೋರ್‌, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಇನ್ನು ಈ ಚಿತ್ರ ತೆಲುಗಿನಲ್ಲಿಯೂ ಡಬ್‌ ಆಗುತ್ತಿದೆ. ವಿಸ್ತಾರಾ ಬ್ಯಾನರ್‌ ಮತ್ತು ಅನುಪಮಾ ಕುಮಾರ್‌ ಅವರ ಪ್ರೊಡಕ್ಷನ್‌ ಹೌಸ್‌, ಲುಕಿಂಗ್‌ ಗ್ಲಾಸ್‌ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

Advertisement

ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಅನುಪಮಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2010 ರ ಬ್ಲಾಕ್‌ ಕಾಮಿಡಿ ಚಿತ್ರ ಇಷ್ಕಿಯಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅನುಪಮಾ, ಬೆಜಾಯ್‌ ನಂಬಿಯಾರ್‌ ಅವರ ಡೇವಿಡ್‌, ಗೌತಮ್‌ ವಾಸುದೇವ್‌ ಮೆನನ್‌ ಅವರ ನಿತಾನಾ, ಎ.ಆರ್‌ ಮುರುಗದಾಸ್‌ ಅವರ ತುಪಾಕಿ ಮುಂತಾದ ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೂಂದು ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

ಉಳಿದಂತೆ ಬ್ಲ್ಯಾಕ್‌ ಅಂಡ್‌ ವೈಟ್‌ ಸೀಮಿತ ಪಾತ್ರ ವರ್ಗ ಹೊಂದಿದ್ದು, ರೋಜರ್‌ ನಾರಾಯಣ್‌, ಶ್ರೀಕೃಷ್ಣ ದಯಾಳ್‌ ಮತ್ತು ಸುರೇಖಾ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಕೀರ್ತನ್‌ ಸಂಗೀತ ಸಂಯೋಜಿಸುತ್ತಿದ್ದರೆ, ತಪಸ್‌ ನಾಯಕ್‌ ಧ್ವನಿ ತಾಂತ್ರಿಕತೆಯನ್ನು ನಿರ್ವಹಿಸುತ್ತಿದ್ದಾರೆ. ನಾಗೇಶ್‌ ಆಚಾರ್ಯ ಚಿತ್ರಕ್ಕೆ ಕ್ಯಾಮರಾ ಕೆಲಸ ನೆರವೇರಿಸುತ್ತಾರೆ. ಸದ್ಯ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್ ಳೊಂದಿಗೆ ಮಾತುಕತೆ ನಡೆಸುತ್ತಿದೆ. ಒಟ್ಟಾರೆ ನಟನೆಯಿಂದ ನಿರ್ದೇಶನದತ್ತ ಮುಖ ಮಾಡುತ್ತಿರುವ ಕಿಶೋರ್‌ ಅವರ ಪ್ರಯತ್ನ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೊದು ಇನ್ನಷ್ಟೇ ಗೊತ್ತಾಗಬೇಕಿದೆ. ­

Advertisement

Udayavani is now on Telegram. Click here to join our channel and stay updated with the latest news.

Next