Advertisement

ಸದ್ಯಕ್ಕೆ ಭಕ್ತರಿಗಿಲ್ಲ ಕಿಷ್ಕಿಂದಾ ಅಂಜನಾದ್ರಿ ದರ್ಶನ ಭಾಗ್ಯ

01:32 PM Jun 08, 2020 | keerthan |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ದ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇಗುಲದ ಬಾಗಿಲು ತೆಗೆದು ದೇವರ ದರ್ಶನಕ್ಕೆ ಭಕ್ತರಿಗೆ ಸೋಮವಾರದಿಂದ ಅವಕಾಶ ಮಾಡಿಕೊಡಲು ಜಿಲ್ಲಾಡಳಿತ ಸಿದ್ದತೆ ನಡೆಸಿತ್ತು. ಭಕ್ತರ ಒತ್ತಾಯದ ಮೇರೆಗೆ ಇನ್ನೂ ಸ್ವಲ್ಪ ದಿನ ದೇಗುಲವನ್ನು ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧರಿದೆ.

Advertisement

ಕೋವಿಡ್-19 ರೋಗ ಹರಡದಂತೆ ಜಿಲ್ಲಾಡಳಿತ ದೇಗುಲವನ್ನು ಕಳೆದ ಮಾ. 23ರಂದು ಬಂದ್ ಮಾಡಿತ್ತು ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆಯಾಗಿದ್ದರಿಂದ ಜೂನ್ 08ರಂದು ಸಾಮಾಜಿಕ ಅಂತರ ಕಾಪಾಡುವ ಜತೆ ಹಲವು ನಿಯಮಗಳ ಪಾಲನೆ ಮಾಡುವ ಮೂಲಕ ದೇವರ ದರ್ಶನ ಪಡೆಯಲು ಭಕ್ತರಿಗೆ  ಅವಕಾಶ ಮಾಡಿಕೊಡಲು ನಿರ್ಧರಿಸಿತ್ತು.

ತಾಲೂಕಿನ ಚಿಕ್ಕಜಂತಗಲ್ ಸೇರಿ ವಿವಿಧೆಡೆ ಕೋವಿಡ್-19 ಸೋಂಕಿತರು ಕಂಡು ಬಂದ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಗಳಿಂದ ಭಕ್ತರು ಆಗಮಿಸುವುದರಿಂದ ಸೋಂಕು ಹರಡುವ ಭೀತಿ ಇದೆ. ಇನ್ನೂ ಸ್ವಲ್ಪ ದಿನ ದೇಗುಲ ಮುಚ್ಚುವಂತೆ ಮನವಿಯ ಹಿನ್ನೆಲೆಯಲ್ಲಿ ಬಾಗಿಲು ತೆಗೆಯುವ ನಿರ್ಧಾರವನ್ನು ಕೈ ಬಿಡಲಾಗಿದೆ. ನಿತ್ಯ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ ಎಂದು ದೇಗುಲ ಕಮೀಟಿ ಇಒ ಮತ್ತು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಉದಯವಾಣಿ ಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next