Advertisement

ಕಿಷ್ಕಿಂದಾ ಅಂಜನಾದ್ರಿ ಇತಿಹಾಸ ತಿರುಚಿದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಾಮ ಫಲಕಗಳು

02:20 PM Sep 07, 2021 | Team Udayavani |

ಗಂಗಾವತಿ : ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಪ್ರದೇಶದ ಪ್ರಮುಖ ಸ್ಥಳಗಳ ಪರಿಚಯಿಸುವ ನಾಮಫಲಕಗಳನ್ನು ಇತ್ತೀಚೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಳವಡಿಸಿದೆ.ಸುಗ್ರೀವ ಗುಹೆ ಮಾತಂಗ ಬೆಟ್ಟದ ಕುರಿತು ಮಾಹಿತಿಯನ್ನು ಬರೆಯಲಾಗಿದೆ.

Advertisement

ಪ್ರಮುಖವಾಗಿ ಅಂಜನಾದ್ರಿ ಬೆಟ್ಟದ ಕೆಳಗೆ  ರಾಮಾಯಣ ಮಾಹಿತಿವುಳ್ಳ ಬೋರ್ಡ್ ಗಳನ್ನು ಹಾಕಿದ್ದು ಇದರಲ್ಲಿ ಆಂಜನೇಯನ ಜನನ ಶ್ರೀರಾಮ ಚಂದ್ರನ ದರ್ಶನ ಮಾತಂಗ ಪರ್ವತ ಋಷಿಮುಖ ಪರ್ವತ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿ ರಾಮಾಯಣ ಮಹಾಭಾರತದಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡು ಬಂದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಇದನ್ನೂ ಓದಿ : ಯುವಕರಿಗೆ ಹೇಳಿ ಮಾಡಿಸಿದಂತಿದೆ ನಾಯ್ಸ್‌ ಫಿಟ್ ಕೋರ್ ಸ್ಮಾರ್ಟ್‌ ವಾಚ್..! ಇಲ್ಲಿದೆ ಮಾಹಿತಿ

ಹಲವು ರಾಮಾಯಣಗಳಲ್ಲಿ ಹನುಮನಹಳ್ಳಿ ತುಂಗಭದ್ರಾ ತಟದಲ್ಲಿರುವ ಋಷ್ಯಮೂಕಪರ್ವತ ಸುಗ್ರೀವನ ವಾಸಸ್ಥಳವಾಗಿತ್ತು ಅಲ್ಲಿಗೆ ಶ್ರೀರಾಮಚಂದ್ರ ಲಕ್ಷ್ಮಣ ಸಮೇತ ಆಗಮಿಸಿದ್ದ ಸಂದರ್ಭದಲ್ಲಿ ಆಂಜನೇಯ ಸುಗ್ರೀವ ಮತ್ತು ರಾಮ ಲಕ್ಷ್ಮಣರನ್ನು ಪರಿಚಯಿಸುವ ಮಾಹಿತಿಯಿದೆ.ಪ್ರಾಧಿಕಾರದವರು ಅಳವಡಿಸಿರುವ ಬೋರ್ಡಿನಲ್ಲಿ ಮಾತಂಗ ಬೆಟ್ಟದ ಹತ್ತಿರ ಶ್ರೀರಾಮನ ದರ್ಶನ ವನ್ನು ಆಂಜನೇಯ ಮಾಡಿದ್ದಾನೆ ಎಂದು ಹೇಳಲಾಗಿದೆ.

Advertisement

ಪುರಾಣಗಳ ಪ್ರಕಾರ ಈ ಋಷ್ಯಮೂಕಪರ್ವತದಲ್ಲಿ ಶ್ರೀರಾಮ ಲಕ್ಷ್ಮಣ ಆಂಜನೇಯರು ಮೊದಲ ಭೇಟಿಯಾಗುತ್ತದೆ.ಆಂಜನಾದ್ರಿಯ ಬೆಟ್ಟದ ಕೆಳಗೆ ಅಳವಡಿಸಿರುವ ಇನ್ನೊಂದು ನಾಮಫಲಕದಲ್ಲಿ ಅಂಜನಾದ್ರಿ ಬೆಟ್ಟದ ಮಹತ್ವವನ್ನು ವರ್ಣಿಸಲಾಗಿದೆ ಬಾಲ ಆಂಜನೇಯ ಎಂದು ಬರೆಯಲಾಗಿದೆ .ಸೂರ್ಯನನ್ನು ಆಂಜನೇಯ ನುಂಗುವ ಪ್ರಸಂಗವನ್ನು ಮಾತ್ರ ಬರೆದು ಆಂಜನೇಯನ ಜನನ ಸೀತಾಮಾತೆಯ ವಾಸ ಇವುಗಳ ಬಗ್ಗೆ ಏನನ್ನೂ ಹೇಳಲಾಗಿಲ್ಲ ಎರಡೂ ನಾಮಫಲಕಗಳಲ್ಲಿ ಕಿಷ್ಕಿಂದಾ ಅಂಜನಾದ್ರಿ ಮಾತಂಗ ಪರ್ವತ ಋಷಿಮುಖ ಪರ್ವತ ಗಳ ಬಗ್ಗೆ ಅಂತೆ ಕಂತೆಗಳ ಮಾಹಿತಿಯನ್ನು ನೀಡಲಾಗಿದೆ ಹೊರತು ಖಚಿತವಾಗಿ ಏನನ್ನೂ ಹೇಳಿಲ್ಲ.

ತಿರುಪತಿಯಲ್ಲಿ ಆಂಜನೇಯ ಜನಿಸಿದ್ದ ವಾಸ ಮಾಡಿದ್ದ ಎಂದು ಟಿಟಿಡಿ ಯವರು ವಾದ ಮಂಡಿಸುವ ಈ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ದವರು ಅಳವಡಿಸಿರುವ ಮಾಹಿತಿ ನೀಡುವ ನಾಮಫಲಕಗಳಲ್ಲಿ  ಆಂಜನೇಯರ ಜನನ ಹಾಗೂ ಕಿಷ್ಕಿಂಧ ಆನೇಗುಂದಿ ಪ್ರದೇಶ ಪಂಪಾಸರೋವರ ಪಂಪಾನದಿ ಈಗಿನ ತುಂಗಭದ್ರ ನದಿ ಬಗ್ಗೆ ಯಾವುದೇ ಮಾಹಿತಿಯನ್ನು ಅಳವಡಿಸಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.  ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರ ದವರು ಇತಿಹಾಸ ತಜ್ಞರನ್ನು ಮತ್ತು ಮಹಾಭಾರತ ರಾಮಾಯಣ ಪುರಾಣಗಳಲ್ಲಿ ಬರುವಂತ ಮಾಹಿತಿಯನ್ನು ಮತ್ತೊಮ್ಮೆ ಸರಿಯಾಗಿ ನಾಮಫಲಕಗಳಲ್ಲಿ ಅಳವಡಿಸುವಂತೆ ಒತ್ತಾಯವನ್ನು ಮಾಡಲಾಗಿದೆ.

ಇದನ್ನೂ ಓದಿ : ಪ್ರತಿಭಟನೆ ನಿರತ ರೈತರ ವಿರುದ್ಧ ಬಲ ಪ್ರಯೋಗ ಮಾಡುವವರಿಗೆ ಕ್ರಮ ಕೈಗೊಳ್ಳುವಂತೆ ರೈತರ ಒತ್ತಾಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next